ಮನೋರಂಜನೆ

ಸೆಕ್ಸ್‌ ಬೇಕೋ, ಬೇಡವೋ ನನ್ನಿಷ್ಟ…: ದೀಪಿಕಾ ವಿಡಿಯೋ ಭಾರೀ ವಿವಾದ!

Pinterest LinkedIn Tumblr

DEEPIKA-STORY

ನವದೆಹಲಿ: ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಖ್ಯಾತ ಫ್ಯಾಷನ್‌ ಮ್ಯಾಗಜೀನ್‌ “ವೋಗ್‌’ ಹೊರತಂದಿರುವ, ನಟಿ ದೀಪಿಕಾ ಪಡುಕೋಣೆ ಅಭಿನಯದ “ಮೈ ಚಾಯ್ಸ’ ಎಂಬ ವಿಡಿಯೋ ಇದೀಗ ಅಂತರ್‌ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿದೆ.

99 ಮಹಿಳೆಯರನ್ನು ಮಾತನಾಡಿಸಿ ಈ ಕಿರು ವಿಡಿಯೋ ತಯಾರಿಸಲಾಗಿದೆ. ಯೂಟ್ಯೂಬ್‌ನಲ್ಲಿ ಪ್ರಕಟಿಸಿದ ಎರಡೇ ದಿನದಲ್ಲಿ 20 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ. ಈ ವಿಡಿಯೋದ ಬಹುಭಾಗವನ್ನು ದೀಪಿಕಾ ಆವರಿಸಿಕೊಂಡಿದ್ದು, ಅದರಲ್ಲಿ ಹೇಳಲಾದ ಅಂಶಗಳು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ತಾಣಗಳಲ್ಲಿ ಕೆಲವರು “ಇದು ನೋಡಲೇಬೇಕಾದ ವಿಡಿಯೋ’ ಎಂದಿದ್ದರೆ, ಇನ್ನು ಕೆಲವರು “ದೀಪಿಕಾ ಇನ್ನೂ ಖನ್ನತೆಯಿಂದ ಚೇತರಿಸಿಕೊಂಡಂ ತಿಲ್ಲ’ ಎಂದು ಟೀಕಿಸಿದ್ದಾರೆ. ದೀಪಿಕಾ ವಿಡಿಯೋಗೆ ಪ್ರತಿಯಾಗಿ ಅದನ್ನು ಟೀಕಿಸುವ ವಿಡಿಯೋಗಳೂ ಸೃಷ್ಟಿಯಾಗಿವೆ.

ಏನಿದೆ ಅದರಲ್ಲಿ?: “ಮಹಿಳೆಯರು ಯಾವ ರೀತಿ ವಸ್ತ್ರ ಧರಿಸಬೇಕು, ಹೇಗಿರಬೇಕು ಎಂಬ ಆಯ್ಕೆ ಮಹಿಳೆಯರದೇ. ನಾನು ದಪ್ಪಗಿರಬೇಕೋ, ಸೈಜ್‌ ಝೀರೋ ಆಗಬೇಕೋ, ಅದು ನನ್ನ ಇಚ್ಛೆಯ ವಿಷಯ. ಮದುವೆ ಆಗ ಬೇಕೋ? ಬೇಡವೋ, ಮದುವೆಗಿಂತ ಮುಂಚೆ ಸೆಕ್ಸ್‌ ಮಾಡಬಹುದೋ, ಪರ ಪುರುಷನ ಜತೆ ಸೆಕ್ಸ್‌ ಮಾಡಬಹುದೋ, ಅಥವಾ ಸೆಕ್ಸ್‌ ಮಾಡಲೇಬೇಕಾ? ಇದೆಲ್ಲ ನಮ್ಮ ತೀರ್ಮಾನಕ್ಕೆ ಬಿಟ್ಟದ್ದು.’

“ನಾನು ಪುರುಷ ಅಥವಾ ಮಹಿಳೆ ಅಥವಾ ಇಬ್ಬರನ್ನೂ ಪ್ರೀತಿಸುತ್ತೇನೆ. ಇದು ನನ್ನ ಆಯ್ಕೆಯ ವಿಷಯ. ನಾನು ನಿಮ್ಮ ಹಕ್ಕಲ್ಲ’ ಎಂದು ಪುರುಷ ಮನಸ್ಥಿತಿಯನ್ನು ಟೀಕಿಸುವ ಅಂಶಗಳು ಹೋಮಿ ಅದಾಜನಿಯಾ ನಿರ್ಮಿಸಿದ ಈ ವಿಡಿಯೋದಲ್ಲಿವೆ.

Write A Comment