ರಾಷ್ಟ್ರೀಯ

ರಹಸ್ಯ ಕ್ಯಾಮರಾದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಟ್ಟೆ ಬದಲಿಸುವ ದೃಶ್ಯ ಸೆರೆ

Pinterest LinkedIn Tumblr

Smuthi-irani

ಗೋವಾ,ಏ,3. ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಇಂದು ಮಳಿಗೆಯೊಂದಕ್ಕೆ ಭೇಟಿ ಮಾಡಿ ಬಟ್ಟೆ ಬದಲಿಸುವ ವೇಳೆ ರಹಸ್ಯ ಕ್ಯಾಮರಾ ಪತ್ತೆಯಾಗಿದೆ. ಘಟನೆಯಿಂದ ತೀವ್ರ ಆಘಾತಗೊಂಡಿರುವ ಸಚಿವೆ ಪೋಲೀಸರಿಗೆ ದೂರು ನೀಡಿದ್ದು ,ಇದರಿಂದ ರಾಜ್ಯ ಸರ್ಕಾರ ಕೂಡ ಮುಜುಕರಕ್ಕೆ ಒಳಗಾಗಿದೆ.ಪಂಜಿಮ್ನಲಿರುವ ಹೆಸರಾಂತ ಮಳಿಗೆ ಫ್ಯಾಬ್ ಇಂಡಿಯಾಗೆ ಬೇಟಿ ನೀಡಿದ್ದ ಸಚಿವೆ ಹೂಸ ಬಟ್ಟೆ ಖರೀದಿಸಿ ಅದನ್ನು ಧರಿಸಿ ನೋಡಲು ಟ್ರಯಲ್ ರೊಂ ಗೆ ಹೋದಾಗ ಕ್ಯಾಮರಾ ಅಳವಡಿಸಿರುವುದು ಗೊತ್ತಾಗಿದೆ,

ಬಟ್ಟೆ ಬದಲಿಸುವ ವೇಳೆ ಕ್ಯಾಮರಾದಲ್ಲಿ ಸೆರೆಯಾಗುತ್ತಿರುವ ಬಗ್ಗೆ ಗೊತ್ತಾದ ನಂತರ ಮಳಿಗೆ ವ್ಯವಸ್ತಾಪಕರಿಗೆ ತರಾಟೆಗೆ ತೆಗೆದುಕೊಂಡು ಪೋಲೀಸರನ್ನು ಕರೆಸಿ ದೂರು ನೀಡಿದ್ದಾರೆ. ಘಟನೆ ಕುರಿತು ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕೂಡ ವಿಷಾದ ವ್ಯಕ್ತ ಪಡಿಸಿದ್ದಾರೆ.

Write A Comment