ರಾಷ್ಟ್ರೀಯ

ಎಎಪಿಯಲ್ಲಿ ಭಿನ್ನಮತ

Pinterest LinkedIn Tumblr

aaa

ನವದೆಹಲಿ: ದೆಹಲಿ ವಿಧಾನ­ಸಭೆ ಚುನಾವಣೆ­ಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಆಮ್‌ ಆದ್ಮಿ ಪಕ್ಷದಲ್ಲಿ (ಎಎಪಿ) ಇದೀಗ ಭಿನ್ನಮತ ಹೊಗೆಯಾಡುತ್ತಿದೆ.

ಕೇಜ್ರಿವಾಲ್‌ ಏಕಕಾಲ­ದಲ್ಲಿ ಮುಖ್ಯ­ಮಂತ್ರಿ ಹಾಗೂ ಪಕ್ಷದ ಸಂಚಾಲಕ ಹುದ್ದೆ ನಿಭಾ­ಯಿಸುತ್ತಿರು­ವುದು, ವಿಧಾನ­ಸಭೆ ಚುನಾ­ವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯ ಹಾಗೂ ದೆಹಲಿಯ ಹೊರ­ತಾಗಿ ಇತರ ರಾಜ್ಯ­ಗಳಲ್ಲಿ ಎಎಪಿಯ ಪಾತ್ರ…ಹೀಗೆ ಈ ಮೂರು ವಿಚಾರವಾಗಿ ಕೇಜ್ರಿವಾಲ್‌, ಯೋಗೇಂದ್ರ ಯಾದವ್‌\ ಹಾಗೂ ಪ್ರಶಾಂತ್‌ ಭೂಷಣ್‌ ಮಧ್ಯೆ ಭಿನ್ನಮತ ಎದ್ದಿದೆ ಎನ್ನಲಾಗಿದೆ.

ರಾಜೀನಾಮೆಗೆ ಮುಂದಾಗಿದ್ದ ಕೇಜ್ರಿವಾಲ್‌: ಗುರುವಾರ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ಕೇಜ್ರಿ­ವಾಲ್‌ ಗೈರುಹಾಜರಾಗಿದ್ದರು. ತಾವು ಎರಡು ಹುದ್ದೆಗಳನ್ನು ನಿಭಾ­ಯಿಸುತ್ತಿ­ರುವ ಬಗ್ಗೆ ಪಕ್ಷದಲ್ಲಿ ಕೆಲವರು ಅಸಮಾ­ಧಾನ ವ್ಯಕ್ತಪಡಿಸಿರುವ ಕಾರಣ ಸಂಚಾ­ಲಕ ಸ್ಥಾನಕ್ಕೆ ರಾಜೀನಾಮೆ ಕೊಡು­ವುದಾಗಿ ಕಾರ್ಯಕಾರಿಣಿಯ ಸದಸ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದರು.

Write A Comment