ರಾಷ್ಟ್ರೀಯ

ದೆಹಲಿಯಲ್ಲಿ ಮಾಂಝಿ-ತ್ರಿಪಾಠಿ ಭೇಟಿ

Pinterest LinkedIn Tumblr

Manjhi

ನವದೆಹಲಿ: ವಿಧಾನಸಭೆಯಲ್ಲಿ ವಿಶ್ವಾಸ­ಮತ ಯಾಚಿಸುವುದಕ್ಕೆ ಕೇವಲ ಐದು ದಿನಗಳು ಬಾಕಿ ಇರುವಾಗಲೇ  ಬಿಹಾರ ಮುಖ್ಯ­ಮಂತ್ರಿ ಜಿತನ್‌ ರಾಮ್‌ ಮಾಂಝಿ ಅವರು ಭಾನುವಾರ ದೆಹ­ಲಿಗೆ ಬಂದು ರಾಜ್ಯಪಾಲ ಕೇಸರಿ­ನಾಥ್‌ ತ್ರಿಪಾಠಿ ಅವರನ್ನು ಭೇಟಿ­ಯಾಗಿ ಚರ್ಚಿಸಿ­ರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ಮಗನ ಮದುವೆ ಆರತಕ್ಷತೆ ಸಮಾ­ರಂಭದಲ್ಲಿ ಭಾಗ­ವಹಿಸಲು ಮಾಂಝಿ ರಾಜ­ಧಾನಿಗೆ ಬಂದಿದ್ದಾರೆ. ಇದೇ ವೇಳೆ ಅವರು  ಪಶ್ಚಿಮಬಂಗಾಳದ ಅತಿಥಿಗೃಹ­ವೊಂದರಲ್ಲಿ  ತ್ರಿಪಾಠಿ ಅವ­ರನ್ನು ಭೇಟಿ­ಯಾ­ದರು ಎಂದು ಮೂಲಗಳು ತಿಳಿಸಿವೆ.
ಬಿಹಾರದ ರಾಜಕೀಯದ ಬಗ್ಗೆ ಬಿಜೆಪಿಯೊಂದಿಗೆ ಮುಂದಿನ ಕಾರ್ಯ­ತಂತ್ರ ರೂಪಿಸುವುದಕ್ಕಾಗಿ ಮಾಂಝಿ ದೆಹಲಿಗೆ ಬಂದಿದ್ದಾರೆ ಎಂದು ಜೆಡಿಯು ಮುಖಂಡ ಕೆ.ಸಿ.ತ್ಯಾಗಿ ಹೇಳಿದ್ದಾರೆ.

ಪಟ್ನಾ ವರದಿ: ರಾಜ್ಯಪಾಲ ತ್ರಿಪಾಠಿ, ಬಿಜೆಪಿ­ ತಳೆದಿರುವ ಧೋರಣೆ­ಯಿಂದಾಗಿ ರಾಜ್ಯ­ದಲ್ಲಿ ರಾಜಕೀಯ ಅಸ್ಥಿರತೆ ಮೂಡಿದೆ ಎಂದು ಜೆಡಿಯು, ಅದರ ಮಿತ್ರಪಕ್ಷಗಳು ಆರೋಪ ಮಾಡಿವೆ.

ತಾವು ದೀರ್ಘಕಾಲ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎನ್ನುವುದು ಗೊತ್ತಿದ್ದರೂ ಮಾಂಝಿ ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಆರ್ಥಿಕ ಅರಾಜಕತೆ ಉಂಟಾಗಿದೆ  ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ವಸಿಷ್ಠ ನಾರಾಯಣ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಹೈದರಾಬಾದ್‌ ವರದಿ: ಬಿಹಾರದ ಆಡಳಿತ ಪಕ್ಷವು ತನ್ನ ಆಂತರಿಕ ಕಲಹದಲ್ಲಿ ಅನಗತ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಎಳೆಯುವುದಕ್ಕೆ  ಯತ್ನಿ­ಸು­ತ್ತಿದೆ ಎಂದು ಸಂಸದೀಯ ವ್ಯವಹಾರ­ಗಳ ಸಚಿವ ಎಂ.ವೆಂಕಯ್ಯ ನಾಯ್ಡು ಆರೋಪಿ­ಸಿದ್ದಾರೆ.

Write A Comment