ಅಂತರಾಷ್ಟ್ರೀಯ

ಕಾಶ್ಮೀರ ಪಾಕಿಸ್ತಾನದ ‘ಪ್ರಧಾನ ರಕ್ತ ನಾಳ’: ಕಾಶ್ಮೀರ ಏಕತಾ ದಿನ’ ಆಚರಣೆ­ಯಲ್ಲಿ ನವಾಜ್‌ ಷರೀಫ್‌ ಹೇಳಿಕೆ

Pinterest LinkedIn Tumblr
ಲಾಹೋರ್‌ನಲ್ಲಿ ಗುರುವಾರ ನಡೆದ ‘ಕಾಶ್ಮೀರ ಏಕತಾ ದಿನ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಗೆ ಕಾಶ್ಮೀರ ಪ್ರತ್ಯೇಕತಾವಾದಿಗಳು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಲಾಹೋರ್‌ನಲ್ಲಿ ಗುರುವಾರ ನಡೆದ ‘ಕಾಶ್ಮೀರ ಏಕತಾ ದಿನ’ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಗೆ ಕಾಶ್ಮೀರ ಪ್ರತ್ಯೇಕತಾವಾದಿಗಳು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಇಸ್ಲಾಮಾಬಾದ್‌: ಕಾಶ್ಮೀರದೊಂದಿಗೆ ಬಾಲ್ಯದಿಂದಲೂ ತಮಗೆ ಭಾವನಾತ್ಮಕ ನಂಟು ಇರುವು­ದಾಗಿ ಹೇಳಿರುವ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌, ಕಾಶ್ಮೀರಿ ಜನರ ಹಕ್ಕು­ಗಳಿಗಾಗಿ ತಮ್ಮ ದೇಶ ನಿರಂ­ತರ ಹೋರಾಟ ನಡೆಸಲಿದೆ. ಕಾಶ್ಮೀರ, ಪಾಕಿ­ಸ್ತಾನದ ಕುತ್ತಿಗೆಯ ಪ್ರಧಾನ ರಕ್ತನಾಳವಿದ್ದಂತೆ ಎಂದು  ಹೇಳಿದ್ದಾರೆ.

‘ಕಾಶ್ಮೀರ ಏಕತಾ ದಿನ’ದ ಅಂಗವಾಗಿ ಮುಜಫ್ಫರಾಬಾದ್‌ನಲ್ಲಿ ಗುರುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವಿಧಾನಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ಅವರು ಮಾತನಾಡಿದರು.

ಕಾಶ್ಮೀರ ವಿವಾದ ಪರಿಹಾರವಾದರೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸಾಧ್ಯ. ಈ ಭಾಗದ ಸುಮಾರು 150 ಕೋಟಿ ಜನರು ಕಾಶ್ಮೀರ ವಿವಾದದೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಿದರು.

ಕಾಶ್ಮೀರಿ ಜನರ ವಿರುದ್ಧವಾಗಿ ತೆಗೆದು ಕೊಳ್ಳುವ ಯಾವುದೇ ತೀರ್ಮಾನಗಳನ್ನು ಪಾಕಿಸ್ತಾನ ಸರ್ಕಾರ ಸಹಿಸಿಕೊಳ್ಳು­ವುದಿಲ್ಲ ಎಂದು ವಿವರಿಸಿ ದರು.  ಕಾಶ್ಮೀರ ವಿವಾದಕ್ಕೆ ಇರುವ ಏಕೈಕ ಪರಿ ಹಾರವೆಂದರೆ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಜನರಿಗೇ ನೀಡುವುದು. ದಬ್ಬಾಳಿಕೆಯ ಕಾರ್ಮೋಡ ಕರಗಿ ಕಾಶ್ಮೀರಿ ಜನರು ಸ್ವಾತಂತ್ರ್ಯದ ಅರು ಣೋದಯ ಕಾಣುವ ಕಾಲ ದೂರವಿಲ್ಲ ಎಂದರು.

ಕಾಶ್ಮೀರ ವಿವಾದ ಇಡೀ ದೇಶಕ್ಕೆ ಸಂಬಂಧಿಸಿದ್ದು. ದೃಢ ನಿಶ್ಚಯದೊಂದಿಗೆ ನಾವು ಪ್ರಗತಿ ಸಾಧಿಸು ತ್ತೇವೆ. ಕಾಶ್ಮೀರಕ್ಕೆ ಬೆಂಬಲ ನೀಡುವುದು  ತಮ್ಮ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಷರೀಫ್ ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ಆಧಾರದಲ್ಲಿ ಕಾಶ್ಮೀರ ವಿವಾದಕ್ಕೆ ಶಾಂತಿಯುತ ನಿರ್ಣಯ ಕೈಗೊಳ್ಳುವುದಕ್ಕೆ ಪಾಕಿಸ್ತಾನ ಬದ್ಧವಾಗಿದೆ ಎಂದರು.

ಫೆ.5ರಂದು ಏಕತಾ ದಿನ
ಪ್ರತೀ ವರ್ಷ ಫೆ.5 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ­ದಲ್ಲಿ ‘ಕಾಶ್ಮೀರ ಏಕತಾ ದಿನ’ ಆಚರಿಸ­ಲಾಗುತ್ತದೆ. ಕಾಶ್ಮೀರಿ ಜನರಿಗೆ ಬೆಂಬಲ ಸೂಚಿಸುವುದು ಈ ಆಚ­ರಣೆಯ ಪ್ರಮುಖ ಕಾರ್ಯಸೂಚಿ. ಈ ದಿನ ವಿಚಾರಸಂಕಿರಣಗಳು, ಪ್ರತಿಭಟನೆ­ಗಳು ಹಾಗೂ ವಿವಿಧ ಪಕ್ಷಗಳಿಂದ ಕಾರ್ಯಕ್ರಮ­ಗಳು ನಡೆ ಯುತ್ತವೆ.

Write A Comment