ರಾಷ್ಟ್ರೀಯ

ಮುಂದಿನ ಬಾರಿ ಮಕ್ಕಳನ್ನೂ ಕರೆತರುವೆ: ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ

Pinterest LinkedIn Tumblr

8E3B23D8-AFE5-42D6-907E-EBA

ನವದೆಹಲಿ: ಮುಂದಿನ ಸಲ ಭಾರತಕ್ಕೆ ಬರುವಾಗ ಖಂಡಿತ ನನ್ನ ಇಬ್ಬರೂ ಪುತ್ರಿಯರನ್ನೂ ಜತೆಗೆ ಕರೆತರುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ  ಹೇಳಿದರು.

ಮಂಗಳವಾರ ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿ ಅವ­ರ ‘ಮನ್‌ ಕಿ ಬಾತ್’ (ಮನದ ಮಾತು) ಧ್ವನಿ­­ಮುದ್ರಿತ ರೇಡಿಯೊ ಕಾರ್ಯ­ಕ್ರಮ­ದಲ್ಲಿ ಒಬಾಮ ಕೂಡ ವೈಯಕ್ತಿಕ ವಿಷ­ಯಗಳ ಬಗ್ಗೆ ಮನಬಿಚ್ಚಿ ಮಾತನಾಡಿ­ದ್ದಾರೆ.

‘ಭಾರತಕ್ಕೆ ಬರಲು ನನ್ನ ಮಕ್ಕಳು ತುದಿ­ಗಾಲಲ್ಲಿ ನಿಂತಿದ್ದಾರೆ.­ ಆದರೆ, ನಾವು ಇಲ್ಲಿಗೆ ಬರುವಾಗ ಅವರಿಗೆ  ಶಾಲೆ ಇರುತ್ತದೆ. ತರಗತಿ­
ಬರಾಕ್‌ ಎಂದರೆ ಅದೃಷ್ಟ­ಶಾಲಿ ಎಂದರ್ಥ. ಅಮೆರಿಕದ ಅಧ್ಯಕ್ಷರಿಗೆ ಅವರ ಕುಟುಂಬ ಈ ಹೆಸರಿಟ್ಟು ಆಶೀರ್ವದಿಸಿದೆ
– ಮೋದಿ

ತಪ್ಪಿಸಿ­ಕೊ­ಳ್ಳಲು ಅವರಿಗೆ ಇಷ್ಟ­ವಿಲ್ಲ. ಹಾಗಾಗಿ ಅವ­ರಿಗೆ ಇಲ್ಲಿಗೆ ಬರಲು ಸಾಧ್ಯವಾಗು­ತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಭಾರತದ ಬಗ್ಗೆ ಅವರಿಗೆ ಭಾರಿ ವ್ಯಾಮೋಹವಿದೆ. ಈ ದೇಶದ ಬಗ್ಗೆ ತಿಳಿದುಕೊಳ್ಳುವ ಕುತೂಹಲ, ಹಂಬಲವಿದೆ.  ಇಲ್ಲಿ­ಯ ಕಲೆ, ಸಂಸ್ಕೃತಿ ಮತ್ತು ಇತಿ­ಹಾಸ­ದಿಂದ ಅವರು ಪ್ರಭಾವಿತರಾ­ಗಿದ್ದಾರೆ’ ಎಂದರು.

‘ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಗಾಂಧೀಜಿ ಅವರ ಪಾತ್ರದ ಬಗ್ಗೆ ಎಲ್ಲ ವಿಷಯಗಳನ್ನೂ ಅವರು ತಿಳಿದು ಕೊಂಡಿದ್ದಾರೆ. ಗಾಂಧೀಜಿ ಅಹಿಂಸಾ ಮಾರ್ಗ ಅಮೆರಿಕದ ನಾಗರಿಕ ಹಕ್ಕುಗಳ ಆಂದೋಲನದ ಮೇಲೆ ಬೀರಿದ ಪ್ರಭಾ­ವದ ಬಗ್ಗೆಯೂ ಗೊತ್ತಿದೆ’ ಎಂದರು.

‘ನಾನು ಮರಳಿ ಅಮೆರಿಕ್ಕೆ ಹೋದ ಬಳಿಕ ನನ್ನ ಮಕ್ಕಳಿಗೆ ಈ ದೇಶ ಎಷ್ಟು ಸುಂದರ­ವಾಗಿದೆ ಎಂದು ಹೇಳುತ್ತೇನೆ. ಅವರ  ಕಲ್ಪನೆಯ ಭಾರತದಂತೆಯೇ ಈ ದೇಶ ಅತ್ಯಂತ ಸುಂದರವಾಗಿದೆ ಎಂದು ತಿಳಿಸು­ತ್ತೇನೆ’ ಎಂದು  ನುಡಿದರು.

‘ಇಲ್ಲಿಯ ಕಥೆಗಳನ್ನೆಲ್ಲ ನನ್ನಿಂದ ಕೇಳಿ ತಿಳಿದರೆ, ಮುಂದಿನ ಸಲ ನಾವು ಇಲ್ಲಿಗೆ ಬರು­ವಾಗ ತಮ್ಮನ್ನೂ ಜತೆಗೆ ಕರೆ­ದೊಯ್ಯುವಂತೆ ಅವರು ಖಂಡಿತ ಪಟ್ಟು ಹಿಡಿಯುತ್ತಾರೆ. ನಾನು ಅಮೆರಿಕದ ಅಧ್ಯಕ್ಷನಾಗಿರುವಾಗ ಇದು ಸಾಧ್ಯವಾ­ಗದಿದ್ದರೂ, ಆ ನಂತರ­ವಾದರೂ ಅವರನ್ನು ಇಲ್ಲಿಗೆ ಕರೆತಂದು ಅವರ ಕಲ್ಪನೆಯ ಸುಂದರ ಭಾರತವನ್ನು  ತೋರಿಸುತ್ತೇನೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ಒಬಾಮ ಅವರಿಗೆ ಈ ದೇಶದ ಬಾಗಿಲು ಸದಾ ತೆರೆದಿ­ರುತ್ತದೆ. ಅವರು ಅಧ್ಯಕ್ಷರಾ­ಗಿರಲಿ ಅಥವಾ ಆಗಿರದೇ ಇರಲಿ. ಅವರಿಗೆ ಸದಾ ಸ್ವಾಗತ’ ಎಂದರು.

Write A Comment