ರಾಷ್ಟ್ರೀಯ

ಸಿಹಿ ನೆನಪು ಹೊತ್ತು ಹಾರಿದ ಒಬಾಮ–ಮಿಷೆಲ್‌

Pinterest LinkedIn Tumblr

oba

ನವದೆಹಲಿ: ಮೂರು ದಿನಗಳ ಯಶಸ್ವಿ ಭಾರತ ಪ್ರವಾಸ ಮುಗಿಸಿದ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಹಾಗೂ ಮಿಷೆಲ್‌ ಒಬಾಮ ಮಂಗಳವಾರ ಅವಿಸ್ಮರ­ಣೀಯ ಸಿಹಿ ನೆನಪುಗಳನ್ನು ಹೊತ್ತು ಸೌದಿಗೆ ತೆರಳಿದರು.

ಇಲ್ಲಿಯ ಪಾಲಂ ವಿಮಾನ ನಿಲ್ದಾಣ­ದಲ್ಲಿದ್ದ ಏರ್‌ಫೋರ್ಸ್‌ ಒನ್‌ ವಿಶೇಷ  ವಿಮಾನ ಮೆಟ್ಟಿಲಲ್ಲಿ ನಿಂತು ಅಪ್ಪಟ ಭಾರತೀಯ ಶೈಲಿ­ಯಲ್ಲಿ ತಮ್ಮ ಎರಡೂ ಕೈ ಜೋಡಿಸಿ ‘ನಮಸ್ತೆ’ ಎಂದು ಒಬಾಮ ಕೃತಜ್ಞತೆ ಸಲ್ಲಿಸಿದರು. ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ಸೇರಿದಂತೆ ಅನೇಕ ಹಿರಿಯ ಅಧಿ­ಕಾರಿಗಳು ಒಬಾಮ ದಂಪತಿಯನ್ನು ಬೀಳ್ಕೊಟ್ಟರು.

ಪೂರ್ವ ನಿಗದಿತ ಕಾರ್ಯಕ್ರಮದಂತೆ ಒಬಾಮ ದಂಪತಿ ಮಂಗಳವಾರ ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ಗೆ ಭೇಟಿ ನೀಡಬೇಕಿತ್ತು. ಆದರೆ, ಇತ್ತೀಚೆಗೆ ನಿಧನ­ರಾದ ಸೌದಿ ದೊರೆ ಅಬ್ದುಲ್ಲಾ ಕುಟುಂಬದ ಸದಸ್ಯರಿಗೆ  ಸಾಂತ್ವನ ಹೇಳಲು ಆಗ್ರಾ ಪ್ರವಾಸ ಮೊಟಕು­ಗೊಳಿಸಿದ ಅವರು ದೆಹಲಿಯಿಂದ ನೇರವಾಗಿ ಸೌದಿಗೆ ತೆರಳಿದರು.

Write A Comment