ರಾಷ್ಟ್ರೀಯ

ತಾಯ್ನಾಡಿನ ರಕ್ಷಣೆಗೆ ಜೀವ ತೆತ್ತ ಯೋಧರಿಗೆ ಅಶೋಕ ಚಕ್ರ

Pinterest LinkedIn Tumblr

ashoka-chakra

ನವದೆಹಲಿ, ಜ.26: ತಮ್ಮ ಪ್ರಾಣವನ್ನೂ ಲೆಕ್ಕಿಸದೆ ತಾಯ್ನಾಡ ರಕ್ಷಣೆಗಾಗಿ ಜೀವವನ್ನೇ ಮುಡುಪಾಗಿಟ್ಟ ನಾಯಕ್ ನೀರಜ್‌ಕುಮಾರ್ ಸಿಂಗ್ ಹಾಗೂ ಮುಕುಂದ್ ವರದರಾಜನ್‌ಗೆ ದೇಶದ ಅತ್ಯುನ್ನತ ಎರಡನೇ ಶಾಂತಿ ನಾಗರಿಕ ಪ್ರಶಸ್ತಿಯಾದ ಅಶೋಕ ಚಕ್ರ ಲಭಿಸಿದೆ. ಪ್ರತಿ ವರ್ಷ ಜ.26ರ ಗಣರಾಜ್ಯೋತ್ಸವದಂದು ದೇಶಕ್ಕಾಗಿ ಹೋರಾಡಿದ ಸೇನಾಧಿಕಾರಿಗಳಿಗೆ ಅಶೋಕ ಚಕ್ರ ನೀಡಿ ಗೌರವಿಸುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ. ಈ ಬಾರಿಯ ಪ್ರತಿಷ್ಠಿತ ಶಾಂತಿ ನಾಗರಿಕ ಪ್ರಶಸ್ತಿಯಾದ ಅಶೋಕ ಚಕ್ರಕ್ಕೆ 57ನೆ ಬೆಟಾಲಿಯನ್ 13ನೇ ರಜಪೂತ್ ರೈಫಲ್ಸ್ ನಾಯಕ್ ನೀರಜ್‌ಕುಮಾರ್ ಸಿಂಗ್ ಹಾಗೂ 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್‌ನ ಮುಕುಂದ್ ವರದರಾಜನ್‌ಗೆ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮರಣೋತ್ತರ ಗೌರವಾರ್ಥವಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಈ ಇಬ್ಬರೂ ಸೇನಾ ಯೋಧರ ಕುಟುಂಬದವರಿಗೆ ಅಶೋಕ ಚಕ್ರ ನೀಡಿ ಗೌರವಿಸಲಾಗುವುದು. ಇದೇ ವೇಳೆ ಮೂವರಿಗೆ ಕೀರ್ತಿ ಚಕ್ರ ಪ್ರಶಸ್ತಿ ಹಾಗೂ 12 ಮಂದಿ ಸೈನಿಕರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಘೋಷಿಸಲಿದ್ದಾರೆ. ಲೆಫಿನೆಂಟ್ ಕರ್ನಲ್ ಸಂಕ್ಪಲ್‌ಕುಮಾರ್ (ಮರಣೋತ್ತರ)ಗೆ ದೇಶದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಶೌರ್ಯ ಚಕ್ರ ಲಭಿಸಿದೆ. 2014ರ ಆಗಸ್ಟ್ 24ರಂದು ಕುಪ್ವಾರಾ ಜಿಲ್ಲೆಯ ಗುದ್ರಾಜಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದಾಗ ನಾಯಕ್ ನೀರಜ್‌ಕುಮಾರ್ ಸಿಂಗ್ ಭಯೋತ್ಪಾದಕರ ವಿರುದ್ಧ ಹೋರಾಟ ವೀರ ಮರಣವನ್ನಪ್ಪಿದ್ದರು.

ಮತ್ತೊಂದು ಘಟನೆಯಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ಮುಕುಂದ್ ವರದರಾಜನ್ ಕೂಡ ಪ್ರಾಣ ತೆತ್ತಿದ್ದರು. ಕೀರ್ತಿ ಚಕ್ರ ಪ್ರಶಸ್ತಿಯನ್ನು ಕ್ಯಾಪ್ಟನ್ ಜಯದೇವ್, ಸುಬೇದಾರ್ ಕೋಶ್ ಬಹದ್ದೂರ್ ಗುರುಂ ಮತ್ತು ಸುಬೇದಾರ್ ಅಜಯ್‌ವರ್ಧನ್ (ಮರಣೋತ್ತರ)ಪ್ರಶಸ್ತಿ ಲಭಿಸಿದೆ. 66ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ 374 ಮಂದಿ ಸೈನಿಕರಿಗೆ ಶೌರ್ಯ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

Write A Comment