ರಾಷ್ಟ್ರೀಯ

ಪಾಕಿಸ್ತಾನಿ ಪತ್ರಕರ್ತೆ ಮಹೆರ್ ತರಾರ್ ಜತೆ ದುಬೈನಲ್ಲಿ 3 ರಾತ್ರಿ ಕಳೆದಿದ್ದ ಶಶಿ ತರೂರ್: ಬಾಯಿಬಿಟ್ಟ ನಳನಿ ಸಿಂಗ್

Pinterest LinkedIn Tumblr

Mehr Tarar

ಹೊಸದಿಲ್ಲಿ: ಪಾಕಿಸ್ತಾನಿ ಪತ್ರಕರ್ತ ಮಹೆರ್ ತರಾರ್ ಜತೆ ಶಶಿ ತರೂರ್ ದುಬೈನಲ್ಲಿ 3 ರಾತ್ರಿ ಕಳೆದಿದ್ದರು ಎಂಬ ವಿಷಯವನ್ನು ಸಾಯುವ ಕೆಲವೇ ತಾಸು ಮೊದಲು ಸುನಂದಾ ಪುಷ್ಕರ್ ನನಗೆ ತಿಳಿಸಿದ್ದರು ಎಂದು ನಳಿನಿ ಸಿಂಗ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಈ ವಿಷಯ ಶಶಿ ತರೂರ್‌ಗೆ ಸಂಕಷ್ಟ ತಂದೊಡ್ಡಬಹುದು ಎಂದು ಪೊಲೀಸ್ ಮೂಲಗಳು ಹೇಳಿವೆ.

ನಿಮ್ಮನ್ನು ಬಿಟ್ಟು ಇರಲಾರೆ ಎಂದು ಶಶಿ ತರೂರ್‌ಗೆ ತರಾರ್ ಹೇಳಿದ್ದರು ಎನ್ನಲಾಗಿದ್ದು, ಸುನಂದಾ ಅವರಿಂದಲೇ ನನಗೆ ಈ ವಿಷಯ ತಿಳಿದುಬಂತು ಎಂದು ನಳಿನಿ ಹೇಳಿದ್ದಾರೆ.

ತರೂರ್ ಅವರನ್ನು ಪ್ರಕರಣ ಸಂಬಂಧ ವಿಚಾರಣೆಗೆ ಒಳಪಡಿಸುವ ಮೊದಲು ದಿಲ್ಲಿ ಪೊಲೀಸರ ವಿಶೇಷ ತನಿಖಾ ತಂಡ, ವರ್ಷದ ಹಿಂದೆ ಕಲೆ ಹಾಕಿದ್ದ ಸಾಕ್ಷಿಗಳ ಹೇಳಿಕೆಯನ್ನು ಪರಿಶೀಲಿಸುತ್ತಿದೆ. ಪ್ರಕರಣದಲ್ಲಿ ನಾನಾ ಕವಲುಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ಸುನಂದಾ ಕೊಲೆ ಪ್ರಕರಣದ ತನಿಖೆ ಸಂಪೂರ್ಣವಾಗಿ ನ್ಯಾಯಸಮ್ಮತವಾಗಿ ನಡೆಯಲಿದೆ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಪುನರಚ್ಚುರಿಸಿದ್ದಾರೆ.

ನಳಿನಿ ಹೇಳಿದ್ದೇನು? ”ಕಳೆದ 3-4 ವರ್ಷಗಳಿಂದ ಸುನಂದಾ ಅವರನ್ನು ಬಲ್ಲೆ. ಕಳೆದೊಂದು ವರ್ಷದಿಂದ ಅವರು ತಮ್ಮ ಖಾಸಗಿ ವಿಷಯಗಳನ್ನು ನನ್ನ ಬಳಿ ಹಂಚಿಕೊಳ್ಳುತ್ತಿದ್ದರು. ವಿಶೇಷವಾಗಿ ಶಶಿ ತರೂರ್ ಹಾಗೂ ಅವರ ನಡುವಿನ ಸಂಬಂಧದ ಬಗ್ಗೆ ಮಾತನಾಡುತ್ತಿದ್ದರು. ಶಶಿ ತರೂರ್ ಹಾಗೂ ಪಾಕ್ ಪತ್ರಕರ್ತೆ ಮೆಹರ್ ತರಾರ್ ನಡುವೆ ಪರಸ್ಪರ ಆಕರ್ಷಣೆ ಮೂಡಿದ್ದ ವಿಚಾರವಾಗಿ ಸುನಂದಾ ಕಳೆದ 6-7 ಅಸಮಾಧಾನಗೊಂಡಿದ್ದರು. ಅವರ ನೋವನ್ನು ನನ್ನ ಜತೆ ಹಂಚಿಕೊಂಡಿದ್ದರು.

2013 ಜುಲೈನಲ್ಲಿ ತರೂರ್ ಹಾಗೂ ತರಾರ್ ದುಬೈನಲ್ಲಿ ಮೂರು ರಾತ್ರಿ ಒಟ್ಟಿಗೆ ಕಳೆದಿದ್ದರು. ದುಬೈನಲ್ಲಿ ಹಲವು ಸ್ನೇಹಿತರಿರುವ ಕಾರಣ ಈ ಬಗ್ಗೆ ಖಚಿತ ಮಾಹಿತಿ ದೊರೆಕಿದ್ದು, ಈ ಆರೋಪ ಸಂಬಂಧ ಸಾಕ್ಷ್ಯಾಧಾರಗಳಿವೆ ಎಂದು ಸುನಂದಾ ಹೇಳಿದ್ದರು.

”ಜನವರಿ 16-17ರ ರಾತ್ರಿ 12.10 ಕ್ಕೆ ಸುನಂದಾ ಅವರಿಂದ ನನ್ನ ಮೊಬೈಲ್‌ಗೆ ಕರೆ ಬಂತು. ಅವರ ನೋವು, ದುಗುಡ ದನಿಯಿಂದಲೇ ಗೊತ್ತಾಗುತ್ತಿತ್ತು. ಶಶಿ ಹಾಗೂ ತರಾರ್ ರೊಮ್ಯಾಂಟಿಕ್ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿರುವ ಬಗ್ಗೆ ಹೇಳಿದ್ದರು. ಸಾರ್ವತ್ರಿಕ ಚುನಾವಣೆ ನಂತರ ಸುನಂದಾಗೆ ವಿಚ್ಛೇದನ ನೀಡಿ, ತರಾರ್ ಅವರ ಕೈ ಹಿಡಿಯುವ ಅರ್ಥ ಬರುವಂಥ ಸಂದೇಶವನ್ನು ತರಾರ್ ಕಳುಹಿಸಿದ್ದರು. ಜತೆಗೆ ತರೂರ್ ಅವರನ್ನು ಬಿಟ್ಟಿರಲಾಗದು ಎಂದು ತರಾರ್ ಬರೆದಿದ್ದರು ಎನ್ನಲಾಗಿದೆ.

”ತರೂರ್ ಅವರ ಕುಟುಂಬದವರು ಸಹ ಈ ಪ್ರೇಮ ಸಲ್ಲಾಪವನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ಸುನಂದಾ ದೂರಿದ್ದರು. ತರೂರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದ ಟ್ವಿಟರ್ ಸಂದೇಶದ ಅಸಲಿಯತ್ತಿನ ಬಗ್ಗೆ ಅವರನ್ನು ವಿಚಾರಿಸಿದಾಗ, ಅದು ಸಂಪೂರ್ಣವಾಗಿ ನಂಬಬಹುದು. ತನ್ನ ಬಗ್ಗೆ ಅಪಾರ ಕಾಳಜಿ ಹೊಂದಿರುವ ವ್ಯಕ್ತಿಯೊಬ್ಬರು ಆ ಪೋಸ್ಟ್‌ಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದರು ಎಂದು ಸುನಂದಾ ತಿಳಿಸಿದ್ದರು,” ಎಂದು ನಳಿನಿ ಹೇಳಿದ್ದಾರೆ. ಆ ವ್ಯಕ್ತಿ ಸುನೀಲ್ ತ್ರಕ್ರು ಎಂದು ಪೊಲೀಸರು ಭಾವಿಸಿದ್ದಾರೆ.

”ಐಪಿಎಲ್ ವಿಷಯದಲ್ಲಿ ತರೂರ್ ತಪ್ಪುಗಳನ್ನು ನನ್ನೆಂದೆಂದು ಬಿಂಬಿಸಿರುವುದಾಗಿ ಸಾಂದರ್ಭಿಕವಾಗಿ ಹೇಳಿದ್ದರು. ಕಾಯಿಲೆಯಿಂದ ಬಳಲುತ್ತಿದ್ದ ಸಂದರ್ಭದಲ್ಲಿ ತರೂರ್ ಎಂದೂ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ತರೂರ್ ಅವರ ಬ್ಲ್ಯಾಕ್‌ಬೆರಿಯಿಂದ ಅಳಿಸಿ ಹಾಕಿದ್ದ ಸಂದೇಶಗಳನ್ನು ಪುನಃ ಪಡೆದುಕೊಳ್ಳವ ಕೆಲಸದಲ್ಲಿ ನೆರಾಗುವಂತೆ ಕೋರಿದ್ದರು. ತರಾರ್ ಜತೆಗಿನ ಹಲವು ಸಂದೇಶಗಳನ್ನು ಈಗಾಗಲೇ ಕಲೆ ಹಾಕಿರುವುದಾಗಿ ಸುನಂದಾ ತಿಳಿಸಿದ್ದರು,” ಎಂದು ನಳಿನಿ ಹೇಳಿದ್ದಾರೆ.

ಮಾತುಕತೆ ವೇಳೆ , ಸುನಂದಾ ಅವರೊಂದಿಗೆ ಮತ್ತೊಬ್ಬ ವ್ಯಕ್ತಿ ಇದ್ದರು. (ಅವರು ನಾರಾಯಣ್ ಎಂದು ಪೊಲೀಸರು ಹೇಳಿದ್ದಾರೆ) ಸಾಹೀಬ್ ಬಗ್ಗೆ ಸುನಾಂದ ಕೇಳಿದ ಪ್ರಶ್ನೆಗೆ ಆ ಕಡೆಯಿಂದ ಗಂಡು ದನಿಯೊಂದು ಹಿಂದಿಯಲ್ಲಿ ಉತ್ತರ ನೀಡಿದ್ದು ಕೇಳಿಬಂತು,” ಎಂದು ನಳಿನಿ ಸಿಂಗ್ ಹೇಳಿದ್ದಾರೆ.

Write A Comment