ರಾಷ್ಟ್ರೀಯ

ಪಾತಕಿ ದಾವೂದ್ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಬಂಧಿಸುತ್ತೇವೆ : ಭಾರತ

Pinterest LinkedIn Tumblr

Dawood Ibrahim

ಗಾಂಧಿನಗರ, ಜ.9: ಮುಂಬೈ ಸರಣಿ ಸ್ಫೋಟ (1993)ದ ರೂವಾರಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಶ್ವದ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಅವನನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಲಾಗುವುದು ಎಂದು ಘೋಷಿಸಿರುವ ಭಾರತ, ದಾವೂದ್ ವಿಷಯದಲ್ಲಿ ನಮ್ಮ ನಿಲುವು ಅಚಲ ಎಂದು ಸ್ಪಷ್ಟಪಡಿಸಿದೆ.

ಹಂತಕ ದಾವೂದ್ ಏನು ಮಾಡಿದ್ದ ಎಂಬುದು ನಮಗೆ ಚೆನ್ನಾಗಿ ನೆನಪಿದೆ. ನಾವು ಎಂದಿಗೂ ಮುಂಬೈ ದುರಂತವನ್ನು ಮರೆಯಲು ಸಾಧ್ಯವಿಲ್ಲ. ಅವನು ಇಂದು ನ್ಯಾಯದ ಕಣ್ಣಿಗೆ ಮಣ್ಣೆರಚಿ ತಲೆ ತಪ್ಪಿಸಿಕೊಂಡಿರಬಹುದು. ಆದರೆ ಅವನ ಕುರಿತಾದ ನಮ್ಮ ನಿಲುವು, ಬದ್ಧತೆಗಳು ಮಾತ್ರ ಒಂದಿಷ್ಟೂ ಬದಲಾಗಿಲ್ಲ. ಅವನೆಲ್ಲೇ ಅಡಗಿದ್ದರೂ ಒಂದು ದಿನ ಅವನನ್ನು ಕಟಕಟೆಗೆ ತರುವುದು ನಿಶ್ಚಿತ ಎಂದು ವಿದೇಶಾಂಗ ಖಾತೆ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಹೇಳಿದ್ದಾರೆ.

ಮುಂಬೈ ಸರಣಿ ಸ್ಫೋಟದ ಮಾಸ್ಟರ್‌ಮೈಂಡ್ ಮತ್ತು ಪಾತಕಿ ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದಕ್ಕೆ ಇತ್ತೀಚೆಗೆ ಸಾಕ್ಷಿಯಾದ ವಿಡಿಯೋ ದೃಶ್ಯವೊಂದನ್ನು ಕುರಿತು ಕೇಳಲಾದ ಪ್ರಶ್ನೆಗೆ ಅಕ್ಬರುದ್ದೀನ್ ಈ ಹೇಳಿಕೆ ನೀಡಿದ್ದಾರೆ.

ಇರಾಕ್‌ನಲ್ಲಿ ಇಸ್ಲಾಮಿಕ್ ಉಗ್ರರ ಹಿಡಿತದಲ್ಲಿ ಇನ್ನೂ ಕೂಡ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅಲ್ಲಿರುವ ಭಾರತೀಯರ ಬಗ್ಗೆ ಸೂಕ್ತ ಮಾಹಿತಿಗಳು ಲಭ್ಯವಿಲ್ಲದ ಕಾರಣ ಅದು ತೊಡಕಾಗಿ ಪರಿಣಮಿಸಿದೆ ಎಂದು ಅಕ್ಬರುದ್ದೀನ್ ಹೇಳಿದ್ದಾರೆ.

Write A Comment