ರಾಷ್ಟ್ರೀಯ

ಉಗ್ರರಿಗೆ ಬಹುಮಾನ ನೀಡುತ್ತೇನೆ ಎಂದಿದ್ದ ಯಾಕೂಬ್ ಖುರೇಷಿ ಬಂಧನ

Pinterest LinkedIn Tumblr

Yakub-Khureshi

ಲಖ್ನೋ, ಜ.9: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯವನ್ನು ಬೆಂಬಲಿಸಿ ಅವರಿಗೆ 51 ಕೋಟಿ ರೂ. ಬಹುಮಾನ ನೀಡುವ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಎಸ್‌ಪಿ ನಾಯಕ ಯಾಕೂಬ್ ಖುರೇಷಿಯನ್ನು ಉತ್ತರ ಪ್ರದೇಶದ ಪೊಲೀಸರು ಇಂದು ಬಂಧಿಸಿದ್ದಾರೆ.

ಪ್ಯಾರಿಸ್‌ನಲ್ಲಿ ಬುಧವಾರ ಉಗ್ರರು ಚಾರ್ಲೆ ಹೆಬ್ಡೊ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿ 10 ಮಂದಿ ಪತ್ರಕರ್ತರು ಹಾಗೂ ಇಬ್ಬರು ಪೊಲೀಸರನ್ನು ಹತ್ಯೆ ಮಾಡಿದ್ದರು. ಉಗ್ರರ ಈ ಘಟನೆಯನ್ನು ಮನಸೋ ಇಚ್ಛೆ ಹೊಗಳಿದ್ದ ಖುರೇಷಿ, ಈ ಉಗ್ರರಿಗೆ 51 ಕೋಟಿ ರೂ. ಬಹುಮಾನ ಕೊಡುವುದಾಗಿ ಹೇಳಿಕೆ ಕೊಟ್ಟಿದ್ದರು.

ಪ್ರವಾದಿ ಮಹಮ್ಮದ್‌ನನ್ನು ಯಾರೊಬ್ಬರೂ ಟೀಕೆ ಮಾಡಬಾರದು. ವಿಶ್ವಕ್ಕೆ ಶಾಂತಿಧೂತನಾಗಿರುವ ಆತನನ್ನು ಟೀಕೆ ಮಾಡಿದರೆ ಉಗ್ರರು ಇನ್ನೇನು ಮಾಡಲು ಸಾಧ್ಯ. ಈ ರೀತಿ ಟೀಕೆ ಮಾಡಿದರೆ ಅಂಥವರನ್ನು ಹತ್ಯೆ ಮಾಡಲೇಬೇಕಾಗುತ್ತದೆ ಎಂದು ನಿನ್ನೆ ಯಾಕೂಬ್ ಖುರೇಷಿ ಹೇಳಿದ್ದನು.

ಅವರ ಈ ಹೇಳಿಕೆ ದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿತ್ತು. ಹೀಗಾಗಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಖುರೇಷಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಾನು ಯಾರೊಬ್ಬರಿಗೂ ಹಣ ಕೊಡುತ್ತೇನೆಂದು ಹೇಳಿರಲಿಲ್ಲ. ಮಾಧ್ಯಮಗಳು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ. ಹಿಂಸೆಗೆ ಖುರಾನ್‌ನಲ್ಲಿ ಅವಕಾಶವಿಲ್ಲ. ಪ್ರವಾದಿಯನ್ನು ಟೀಕೆ ಮಾಡಬಾರದೆಂದಷ್ಟೆ ಹೇಳಿದ್ದೆನೆಂದು ಖುರೇಷಿ ಹೇಳಿದ್ದಾನೆ. ಖುರೇಷಿ ಬಂಧನವನ್ನು ದೃಢಪಡಿಸಿರುವ ಉತ್ತರ ಪ್ರದೇಶ ಕಾನೂನು ಮತ್ತು ಸುವ್ಯವಸ್ಥೆ ಐಜಿಪಿ ಎ.ಸತೀಶ್ ಗಣೇಶ್ ಈಗಾಗಲೇ ನಾವು ಅವರನ್ನು ಬಂಧಿಸಿದ್ದೇವೆ. ನಮ್ಮ ದೇಶದಲ್ಲಿ ಹಿಂಸೆಯನ್ನು ಯಾರೊಬ್ಬರೂ ಬೆಂಬಲಿಸಬಾರದೆಂಬ ನಿಯಮವಿದೆ. ನಾವು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ.

Write A Comment