ರಾಷ್ಟ್ರೀಯ

15ರ ಬಾಲೆಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ 82ರ ಅಜ್ಜ !

Pinterest LinkedIn Tumblr

rape

ಹೈದರಾಬಾದ್: ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ 82ರ ಹಣ್ಣು ಹಣ್ಣು ಮುದುಕನೋರ್ವ 15ರ ಬಾಲೆ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಾಲಕಿ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ವೈದ್ಯರು ಪರಿಶೀಲನೆ ಮಾಡಿದಾಗ ಬಾಲಕಿ 4 ತಿಂಗಳ ಗರ್ಭಿಣಿ ಎಂಬ ಅಂಶ ಬಯಲಾಗಿದೆ.

ಅದಿಲಾಬಾದ್ ಜಿಲ್ಲೆಯ ಪೇರಕಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, 82 ವರ್ಷದ ಎ.ಲಸ್ಮಯ್ಯ ಎಂಬಾತನೇ ಬಂಧಿತ ಆರೋಪಿ. 5 ತಿಂಗಳ ಹಿಂದೆ 2 ಬಾರಿ ಈತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈತ ಬಾಲಕಿಯ ಸಂಬಂಧಿಯಾಗಿದ್ದು ಆಗಾಗ ಬಾಲಕಿಯ ಮನೆಗೆ ಬರುತ್ತಿದ್ದ. ಈ ವೇಳೆ ಬಾಲಕಿಯ ಪೋಷಕರು ಯಾರೂ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿದ್ದ ಆರೋಪಿ ಬಾಲಕಿ ಮೇಲೆ 2 ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಬೆಳ್ಳಂಪಳ್ಳಿ ಸರ್ಕಲ್ ಇನ್ ಸ್ಪೆಕ್ಟರ್ ಎ.ಸತ್ಯನಾರಾಯಣ ಹೇಳಿದ್ದಾರೆ.

ಘಟನೆ ಸಂಬಂಧ ಬಾಲಕಿಯ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ವಾರ ಬಾಲಕಿ ಹೊಟ್ಟೆ ನೋವೆಂದು ದೂರಿದ್ದಾಳೆ. ಈ ವೇಳೆ ವೈದ್ಯಕೀಯ ತಪಾಸಣೆ ನಡೆಸಿದಾಗ ಬಾಲಕಿ 4 ತಿಂಗಳ ಗರ್ಭಿಣಿ ಎಂಬ ಅಂಶ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ವೇಳೆ ಅತ್ಯಾಚಾರ ನಡೆಸಿದ್ದನ್ನು ಒಪ್ಪಿಕೊಂಡಿದದಾನೆ ಎಂದು ಸಿಐ ಹೇಳಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು ಅತ್ಯಾಚಾರಿ ಅಜ್ಜ ಈಗ ಪೊಲೀಸರ ವಶದಲ್ಲಿದ್ದಾನೆ.

Write A Comment