ರಾಷ್ಟ್ರೀಯ

ಆಗ್ರಾದಲ್ಲಿ ಮತಾಂತರಗೊಳಿಸಿದ ಪ್ರಕರಣ; ನಂದ ಕಿಶೋರ್ ಬಾಲ್ಮಿಕಿ ಬಂಧನ

Pinterest LinkedIn Tumblr

conversions

ಉತ್ತರ ಪ್ರದೇಶ: ಆಗ್ರಾದಲ್ಲಿ ನೂರರಷ್ಟು ಜನರನ್ನು ಬಲವಂತವಾಗಿ ಮತಾಂತರಗೊಳಿಸಿದ ಪ್ರಕರಣದಲ್ಲಿ ಪ್ರಥಮ ಆರೋಪಿಯಾಗಿರುವ ನಂದ ಕಿಶೋರ್ ಬಾಲ್ಮಿಕಿ ಅವರನ್ನು ಮಂಗಳವಾರ ಬಂಧಿಸಲಾಗಿದೆ. ಹರಿ ಪ್ರಭಾತ್ ಪೊಲೀಸ್ ಠಾಣೆಯಲ್ಲಿ ಇಂದು ಬೆಳಗ್ಗೆ ನಂದ ಕಿಶೋರ್ ಶರಣಾಗಿದ್ದು, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆಗ್ರಾ ಪೊಲೀಸರು ಹೇಳಿದ್ದಾರೆ.

ಆಗ್ರಾದ ಸ್ಲಂನಲ್ಲಿ ವಾಸವಾಗಿದ್ದ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ 100ರಷ್ಟು ಜನರನ್ನು ಡಿಸೆಂಬರ್ 8 ರಂದು ಧರ್ಮ ಜಾಗರಣ್ ಮಂಚ್ ಮತ್ತು ಬಾಲ್ಮಿಕಿ ಬಲವಂತವಾಗಿ ಮತಾಂತರ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲ್ಮಿಕಿ ವಿರುದ್ಧ ಎಫ್‌ಐ ಆರ್ ದಾಖಲಿಸಲಾಗಿತ್ತು.

ಮತಾಂತರಗೊಂಡ ಇಸ್ಲಾಯಿಲ್ ಎಂಬವರು ಬಾಲ್ಮಿಕಿ ಮತ್ತು ಧರ್ಮ ಜಾಗರಣ್ ಮಂಚ್ ವಿರುದ್ಧ ದೂರು ನೀಡಿದ್ದು, ಐಪಿಸಿ ಸೆಕ್ಷನ್ 153 (ಎ) ಮತ್ತು ಸೆಕ್ಷನ್ 415 ರಡಿಯಲ್ಲಿ ಕೇಸು ದಾಖಲಿಸಲಾಗಿತ್ತು.

ಬಾಲ್ಮಿಕಿ ಅವರನ್ನು ಪತ್ತೆ ಹಚ್ಚಲು ಪೊಲೀಸರು ಹಲವಾರು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿದ್ದು, ಅವರನ್ನು ಪತ್ತೆ ಹಚ್ಚಿದವರಿಗೆ 12,000 ರು. ಬಹುಮಾನ ನೀಡುವುದಾಗಿಯೂ ಘೋಷಿಸಿತ್ತು. ಡಿಸೆಂಬರ್ 14ರಂದು ಪೊಲೀಸರು ಬಾಲ್ಮಿಕಿ ಅವರ ಪುತ್ರ ರಾಹುಲ್ ಮತ್ತು ಸಂಬಂಧಿ ಕೃಷ್ಣ ಕುಮಾರ್ ಅವರನ್ನು ಬಂಧಿಸಿದ್ದರು.

Write A Comment