ರಾಷ್ಟ್ರೀಯ

ಕಪ್ಪು ಹಣ : ಭಾರತಕ್ಕೆ 3ನೆ ಸ್ಥಾನ ; 10 ವರ್ಷಗಳಲ್ಲಿ 440 ಶತಕೋಟಿ ಡಾಲರ್ ಹಣ ವಿದೇಶಕ್ಕೆ ..!

Pinterest LinkedIn Tumblr

money

ವಾಷಿಂಗ್ಟನ್, ಡಿ.16: ವಿದೇಶಿ ಬ್ಯಾಂಕ್‌ಗಳಲ್ಲಿ ಅಕ್ರಮವಾಗಿ ಇರಿಸಲಾಗಿರುವ ಕಪ್ಪುಹಣ ವಾಪಸಾತಿಗೆ ಭಾರತ ಸರ್ಕಾರ ಸರ್ಕಸ್ ನಡೆಸುತ್ತಿರುವಂತೆಯೇ, ವಿದೇಶದ ಬ್ಯಾಂಕ್‌ಗಳ ಖಾತೆಯಲ್ಲಿ ಅತಿ ಹೆಚ್ಚು ಹಣ ಹೊಂದಿರುವ ದೇಶಗಳ ಪೈಕಿ ಭಾರತ ಮೂರನೆ ಸ್ಥಾನದಲ್ಲಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿ 440 ಶತಕೋಟಿ ಡಾಲರ್‌ನಷ್ಟು ಹಣ ವಿದೇಶಗಳಿಗೆ ಹರಿದುಹೋಗಿದೆ ಎಂದು ಅಮೆರಿಕ ಮೂಲದ ಸಂಸ್ಥೆಯ ಸಮೀಕ್ಷೆ ಸ್ಪಷ್ಟಪಡಿಸಿದೆ.

2012ರ ಅವಧಿಯಲ್ಲೇ ಅಂದಾಜು 94.76 ಶತಕೋಟಿ (6 ಲಕ್ಷ ಕೋಟಿ) ಅಕ್ರಮ ಹಣ ವಿದೇಶಗಳಿಗೆ ಹರಿದು ಹೋಗಿದೆ. ಇದರಿಂದಾಗಿ 2003ರಿಂದ 2012ರ ವರೆಗೆ (10 ವರ್ಷಗಳಲ್ಲಿ) ವಿದೇಶಿ ಬ್ಯಾಂಕ್‌ಗಳ ಪಾಲಾಗಿರುವ ಭಾರತದ ಹಣದ ಮೊತ್ತ ಒಟ್ಟು 439.59 ಶತಕೋಟಿ (28 ಲಕ್ಷ ಕೋಟಿ ರೂ.) ಡಾಲರ್ ಎಂಬ ಅಂಶ ಗ್ಲೋಬಲ್ ಫೈನಾನ್ಷಿಯಲ್ ಇಂಟಿಗ್ರಿಟಿ (ಜಿಎಫ್‌ಐ) ವರದಿಯಿಂದ ಬಯಲಾಗಿದೆ. ಚೀನಾದಿಂದ 249.57 ಶತಕೋಟಿ (ಬಿಲಿಯನ್) ಡಾಲರ್ ಹಾಗೂ ರಷ್ಯಾದಿಂದ 122.66 ಶತಕೋಟಿ ಡಾಲರ್‌ನಷ್ಟು ಹಣ ಬರೀ 2012ರಲ್ಲೇ ವಿದೇಶ ಸೇರುವುದರೊಂದಿಗೆ ಈ ಎರಡೂ ರಾಷ್ಟ್ರಗಳೂ ಕ್ರಮವಾಗಿ ಒಂದು ಮತ್ತು ಎರಡನೆ ಸ್ಥಾನದಲ್ಲಿವೆ.

ಭ್ರಷ್ಟತೆಯ ಮೂಲ: ಭಾರತದಿಂದ ಇಷ್ಟೊಂದು ಪ್ರಮಾಣದ ಹಣ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹರಿದು ಹೋಗಿರುವುದು ಅಲ್ಲಿ ಭ್ರಷ್ಟಾಚಾರ, ಅಪರಾಧ ಮತ್ತು ತೆರಿಗೆಗಳ್ಳತನಗಳಿಗೆ ಮೂಲ ಕಾರಣವಾಗಿದೆ ಎಂದು ವಾಷಿಂಗ್ಟನ್ ಸಂಸ್ಥೆ ಹೇಳಿದೆ.

ಪ್ರತಿವರ್ಷವೂ ಭಾರತದಿಂದ ಸರಾಸರಿ 43.49 ಶತಕೋಟಿ ಡಾಲರ್ ಹೊರದೇಶಗಳಿಗೆ ಹೋಗುತ್ತದೆ ಎಂದು ಗ್ಲೋಬಲ್ ಫೈನಾನ್ಷಿಯಲ್ ಇಂಟಿಗ್ರಿಟಿ ಸಂಸ್ಥೆ ಹೇಳಿದೆ.

ದೇಶದಲ್ಲೇ 15 ಸಾವಿರ ಕೋಟಿ ರೂ.: ಇದರ ಜತೆಗೆ ಭಾರತದಲ್ಲೇ 14.958 ಸಾವಿರ ಕೋಟಿ ರೂ. ಅಕ್ರಮ ಸಂಪತ್ತು ಪತ್ತೆಯಾಗಿದೆ ಎದು ಹೇಳಿರುವ ಎಸ್‌ಐಟಿ ಆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದೆ.

Write A Comment