ರಾಷ್ಟ್ರೀಯ

ಮಹಿಳೆಯರ ಉಡುಪಿನ ಶೈಲಿಯೇ ಅತ್ಯಾಚಾರಕ್ಕೆ ಪ್ರಚೋದನೆ..!: ಅಚ್ಚರಿ ಮೂಡಿಸಿರುವ ಸಮೀಕ್ಷೆ

Pinterest LinkedIn Tumblr

students

ಚೆನ್ನೈ: ಮಹಿಳೆಯರ ಆಧುನಿಕ ಉಡುಪಿನ ಶೈಲಿಯೇ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಂತಹ ಘಟನೆಗಳು ಹೆಚ್ಚಾಗಲು ಕಾರಣ ಎಂದು ಅಚ್ಚರಿಯ ಸರ್ವೇಯೊಂದು ಮಾಹಿತಿ ಹೊರಹಾಕಿದೆ.

ಮಹಿಳೆಯರ ಮೇಲೆ ದಿನದಿಂದ ದಿನಕ್ಕೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಘಟನೆಗಳು ಸಂಭವಿಸಲು ಮಹಿಳೆಯರು ಧರಿಸುವ ಉಡುಪುಗಳೇ ಮೂಲ ಕಾರಣ ಎನ್ನುವಂತಹ ಮಾಹಿತಿ ಇದೀಗ ಜನಸಾಮಾನ್ಯರನ್ನು ದಂಗಾಗಿಸಿದೆ.

ಚೆನ್ನೈನ ಮಹಿಳಾ ಮತ್ತು ಮಕ್ಕಳ ಫೌಂಡೇಶನ್ ಆಸ್ಪತ್ರೆಯೊಂದು ಮಹಿಳಾ ದೌರ್ಜನ್ಯ ಪ್ರಕರಣಗಳ ಕುರಿತು ಕಳೆದ 5 ತಿಂಗಳ ಕಾಲ ಸಮೀಕ್ಷೆ ನಡೆಸಿತು. ಮಹಿಳೆಯರ ವಿರುದ್ಧ ಹಿಂಸಾ ವಿರೋಧಿ ದಿನದ ಅಂಗವಾಗಿ ಇಂದು ಸಮೀಕ್ಷೆಯ ವರದಿಯನ್ನು ಇಂದು ಬಿಡುಗಡೆಗೊಳಿಸಲಾಯಿತು. ಈ ಸಮೀಕ್ಷೆ ಪ್ರಕಾರ ನೆರೆಹೊರೆಯವರು, ಪರಿಚಯಸ್ಥರಿಂದಲೇ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಘಟನೆಗಳು ನಡೆಯುತ್ತಿವೆ ಎಂದು ತಿಳಿಸಿದೆ.

ಇಂದು ನಡೆಯುತ್ತಿರುವ ಅಂತರಾಷ್ಟ್ರೀಯ ಮಹಿಳೆಯರ ವಿರುದ್ದ ಹಿಂಸಾ ತಡೆಗಟ್ಟುವ ದಿನದ ಅಂಗವಾಗಿ ಈ ಸಮೀಕ್ಷೆಯ ವರದಿಯನ್ನು ಬಿಡುಗಡೆಗೊಳಿಸಿದ  ಸಮೀಕ್ಷೆಯ ಆಯೋಜಕರು ವರದಿಯ ಫಲಿತಾಂಶವನ್ನು ಕಂಡು ನಿಬ್ಬೆರಗಾದರು.

ಕಳೆದ 5 ತಿಂಗಳ ಕಾಲ ನಡೆಸಲ್ಪಟ್ಟ ವರದಿಯಲ್ಲಿ 7,605 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಮೀಕ್ಷೆಯು ಮಹಿಳೆಯರು, ಪುರುಷರು ಮತ್ತು ನಪುಂಸಕರನ್ನು ಒಳಗೊಂಡಿತ್ತು. ಇವರ ಪೈಕಿ ಬಹುತೇಕರು ಪದವೀಧರ ವಿದ್ಯಾರ್ಥಿಗಳಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಸುಮಾರು ಶೇ.47.7 ಜತನೆ, ಮಹಿಳೆಯರು ಧರಿಸುವ ಆಧುನಿಕ ಶೈಲಿಯ ಉಡುಪುಗಳೇ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಘಟನೆಗಳನ್ನು ಪ್ರಚೋದಿಸಲು ಕಾರಣವಾಗುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಮೀಕ್ಷೆಯಿಂದ ಹೊರಬಂದಿರುವ ಮಾಹಿತಿಯು ನಿರೀಕ್ಷೆಗೆ ತದ್ವಿರುದ್ಧವಾಗಿ ಬಂದಿರುವುದು ನಮಗೆ ಅಘಾತ ತಂದಿದೆ ಎಂದು ಸಮೀಕ್ಷೆ ಸಂಸ್ಥೆಯ ಆಯೋಜಕರಾದ ಡಾ.ಡಿ.ರಾಜಶೇಖರ್ ತಿಳಿಸಿದ್ದಾರೆ.

ಮಹಿಳೆಯರು ತಮ್ಮ ಉಡುಪಿನ ಶೈಲಿಯ ಕುರಿತ ಎಚ್ಚರವಹಿಸಬೇಕು ಎಂದು ಶೇ.73.6 ರಷ್ಟು ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಮೀಕ್ಷೆಗೆ ಪ್ರತಿಕ್ರಿಯಿಸಿರುವ ಮಹಿಳಾ ಹೋರಟ ಸಮಿತಿಯ ನಾಯಕಿ ಆರ್.ಗೀತಾ, ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಘಟನೆಗಳಿಗೆ ಮೂಲ ಕಾರಣ ಪುರುಷರ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Write A Comment