ರಾಷ್ಟ್ರೀಯ

ಸಂಸದರ ಸೀಟು ಮೇಲ್ದರ್ಜೆಗೆ; ಏರ್ ಇಂಡಿಯಾ ನಕಾರ

Pinterest LinkedIn Tumblr

Air-iNDIA

ನವದೆಹಲಿ: ಸಂಸದರ ಸೀಟುಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ಅವರ ಹೆಚ್ಚುವರಿ ಲಗೇಜ್‌ಗೆ ಶುಲ್ಕ ವಸೂಲಿ ಮಾಡಿಕೊಳ್ಳದೇ ಇರುವುದು ಸಾಧ್ಯವಿಲ್ಲ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಏರ್ ಇಂಡಿಯಾವು ತನ್ನ ಅಸಹಾಯಕತೆಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದೆ.

ಸೀಟು ಮೇಲ್ದರ್ಜೆಗೇರಿಸುವ ಬಗ್ಗೆ ಅನೇಕ ಸಂಸದರಿಂದ ಕೋರಿಕೆಗಳು ಬರುತ್ತಿವೆ. ಆದರೆ ಹೆಚ್ಚಾಗಿ ಬ್ಯುಸಿನೆಸ್ ಕ್ಲಾಸ್ ಸೀಟುಗಳನ್ನು ಸಾಮಾನ್ಯ ಪ್ರಯಾಣಿಕರು ಹಣ ಪಾವತಿಸಿ ಕಾಯ್ದಿರಿಸಿಟ್ಟಿರುತ್ತಾರೆ. ಅಂತಹ ಸಂದರ್ಭದಲ್ಲಿ ಅಥವಾ ವಿಮಾನದಲ್ಲಿ ಎಲ್ಲ ಸೀಟುಗಳನ್ನೂ ಎಕಾನಮಿಯಾಗಿದ್ದ ವೇಳೆಯಲ್ಲಿ ಸಂಸದರ ಕೋರಿಕೆಯನ್ನು ಮಾನ್ಯ ಮಾಡಲು ಆಗುವುದಿಲ್ಲ ಎಂದು ಏರ್ ಇಂಡಿಯಾವು ಸಂಸತ್‌ಗೆ ಮಾಹಿತಿ ನೀಡಿದೆ.

ಇದೇ ವೇಳೆ, ಸಂಸತ್‌ನಲ್ಲಿ ಪ್ರಶ್ನೆಯೆದ್ದರೂ, ವೈಮಾನಿಕ ಸಂಸ್ಥೆಯು ತನ್ನ ವಾಣಿಜ್ಯ ಮತ್ತು ಕಾರ್ಯನಿರ್ವಹಣಾ ನಿರ್ಧಾರಗಳಂತಹ ಸೂಕ್ಷ್ಮ ಮಾಹಿತಿಗಳನ್ನು ರಹಸ್ಯವಾಗಿಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇಂತಹ ಮಾಹಿತಿಗಳನ್ನು ಬಹಿರಂಗಗೊಳಿಸಿದರೆ ಇದು ಸ್ಪರ್ಧೆಯನ್ನು ಹೆಚ್ಚಿಸುತ್ತದೆ ಹಾಗೂ ಏರ್ ಇಂಡಿಯಾದ ಹಿತಾಸಕ್ತಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎನ್ನುವುದು ಸಂಸ್ಥೆಯ ವಾದವಾಗಿದೆ. ಏರ್ ಇಂಡಿಯಾ ಸಿಎಂಡಿ ರೋಹಿತ್ ನಂದನ್ ಅವರು ಲೋಕಸಭೆ ಪ್ರಧಾನ ಕಾರ್ಯದರ್ಶಿ ಪಿ.ಕೆ ಗ್ರೋವರ್ ಅವರಿಗೆ ಬರೆದ ಪತ್ರದಲ್ಲಿ ಈ ಎಲ್ಲ ವಿಚಾರಗಳನ್ನು ಉಲ್ಲೇಖಿಸಲಾಗಿದೆ.

Write A Comment