ರಾಷ್ಟ್ರೀಯ

ಟ್ವಿಟರ್‌ನಲ್ಲಿ ಮೋದಿಗೆ 8 ಮಿಲಿಯನ್ ಫಾಲೋವರ್ಸ್

Pinterest LinkedIn Tumblr

narendramodi_twitter

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ನಲ್ಲಿ 8 ಮಿಲಿಯನ್ ಅನುಯಾಯಿ(ಫಾಲೋವರ್ಸ್)ಗಳನ್ನು ಹೊಂದಿದ್ದಾರೆ.

ನರೇಂದ್ರ ಮೋದಿ ಅವರ ವೈಯಕ್ತಿಕ ಹಾಗೂ ಖಾಸಗಿ ಟ್ವೀಟರ್‌ನ ಮೂಲಕ ಜನತೆಯನ್ನು ಸಂಪರ್ಕ ಮಾಡುತ್ತಿದ್ದಾರೆ. ಆದರೆ ಅಧಿಕೃತ ಟ್ವಿಟರ್ ಖಾತೆಯಲ್ಲಿ 8 ಮಿಲಿಯನ್ ಅನುಯಾಯಿಗಳನ್ನು ಮೋದಿ ಹೊಂದಿದ್ದಾರೆ.

ಮೋದಿ ಪ್ರಧಾನಿಯಾಗುತ್ತಿದ್ದಂತೆ, ಮೋದಿ ಫಾಲೋವರ್ಸ್ ಪಟ್ಟಿ ಎರಡು ಪಟ್ಟು ಹೆಚ್ಚಾಗಿದ್ದು, ಮೋದಿ ಆಡಳಿತದ ಕಾರ್ಯವೈಖರಿಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಮೋದಿ ಅವರು ಟ್ವಿಟರ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾದಂತಿದೆ.

ಟ್ವಿಟರ್‌ನಲ್ಲಿ ವಿಶ್ವದ ಜನಪ್ರಿಯ ನಾಯಕರಲ್ಲಿ ಅಮೆರಿಕ ಅದ್ಯಕ್ಷ ಬರಾಕ್ ಒಬಾಮಾ ಮೊದಲ ಸ್ಥಾನದಲ್ಲಿ ಇದ್ದರೆ, ಎರಡನೇ ಸ್ಥಾನದಲ್ಲಿ ಪೋಪ್ ಫ್ರಾನ್ಸಿಸ್ ಅವರು ಇದ್ದರು. ಆದರೆ ದೇಶದ ಪ್ರಧಾನಿಯೊಬ್ಬರು ಹೋದ ಕಡೆಯಲೆಲ್ಲ ಟ್ವಿಟರ್ ಖಾತೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದು, ಜನತೆಗೆ ಸಂದೇಶ ನೀಡುತ್ತಿರುವುದು ಮಾತ್ರ ಇದೇ ಮೊದಲು ಎಂದು ಟ್ವಿಟರ್ ಹೇಳಿದೆ.

ಚುನಾವಣೆಯ ನಂತರ ಪ್ರಧಾನಿ ಪಟ್ಟ ಗಳಿಸಿದ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರದ ಆಡಳಿತ ಕಾರ್ಯವೈಖರಿ ಸೇರಿದಂತೆ ಇತರೆ ವಿಷಯಗಳನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಳ್ಳಲು ಶುರುಮಾಡುತ್ತಿದ್ದಂತೆ, ಮೋದಿ ಅಭಿಮಾನಿಗಳು ಹೆಚ್ಚಾಗಿದ್ದಾರೆ ಎಂದು

ಟ್ವಿಟರ್‌ನಲ್ಲಿ ಮೋದಿ ಅವರು ಅತಿ ಹೆಚ್ಚು ವೇಗವಾಗಿ ಅಭಿಮಾನಿಗಳನ್ನು ಸಂಗ್ರಹಿಸುತ್ತಿರುವುದೇ ಜನಪ್ರಿಯತೆಗೆ ಕಾರಣ ಎನ್ನಲಾಗಿದೆ.

Write A Comment