ರಾಷ್ಟ್ರೀಯ

ಮಹಾರಾಷ್ಟ್ರ, ಹರ್ಯಾಣಕ್ಕೆ ಇಂದು ಚುನಾವಣೆ

Pinterest LinkedIn Tumblr

election

ಹೊಸದಿಲ್ಲಿ, ಅ. 14: ಲೋಕಸಭಾ ಚುನಾವಣೆಯ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಮುಂದಿರುವ ಭಾರೀ ದೊಡ್ಡ ಚುನಾವಣಾ ಅಗ್ನಿ ಪರೀಕ್ಷೆಗಳಾದ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಬುಧವಾರ ನಡೆಯಲಿವೆ.

ಎರಡೂ ರಾಜ್ಯಗಳಲ್ಲಿ ಬಿಜೆಪಿಯು ಬೃಹತ್ ಚುನಾವಣಾ ಪ್ರಚಾರ ವನ್ನು ನಡೆಸಿತ್ತು ಹಾಗೂ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹಲವು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಕಾಂಗ್ರೆಸ್ ಕೂಡ ತನ್ನ ಕೈಯಲ್ಲಿದ್ದ ಅಧಿಕಾರವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿದೆ.
288 ಸದಸ್ಯ ಬಲದ ಮಹಾರಾಷ್ಟ್ರವು ಪಂಚಕೋನ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಚುನಾವಣಾ ಕಣದಲ್ಲಿ 4,199 ಅಭ್ಯರ್ಥಿಗಳಿದ್ದು, ಇವರಲ್ಲಿ 1,699 ಪಕ್ಷೇತರರು ಸೇರಿದ್ದಾರೆ. ರಾಜ್ಯದ 8.25 ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಹೆಚ್ಚಿನ ಅಂದರೆ 287 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಬಿಜೆಪಿ 280,ಶಿವಸೇನೆ 282, ಎನ್‌ಸಿಪಿ 278 ಹಾಗೂ ಎಂಎನ್‌ಎಸ್ 219 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಹರ್ಯಾಣದಲ್ಲಿಯೂ ಚುನಾವಣಾ ಕಣ ರಂಗೇರಲಿದ್ದು, ಕಾಂಗ್ರೆಸ್-ಬಿಜೆಪಿ ಹಾಗೂ ಐಎನ್‌ಎಲ್‌ಡಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. 90 ಸದಸ್ಯಬಲದ ವಿಧಾನಸಭೆಗೆ 1,351 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಸುಮಾರು 1.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

Write A Comment