ಮನೋರಂಜನೆ

ಹುಡ್ ಹುಡ್ ಚಂಡಮಾರುತ ಭೀತಿ : 3ನೆ ಏಕದಿನ ಪಂದ್ಯ ಸ್ಥಳಾಂತರವಿಲ್ಲ

Pinterest LinkedIn Tumblr

mishra24mar

ವಿಶಾಖಪಟ್ಟಣಂ, ಅ.12: ಆಂಧ್ರ ಕರಾವಳಿಯಲ್ಲಿ ಹುಡ್ ಹುಡ್ ಚಂಡ ಮಾರುತ ಬೀಸುವ ಭೀತಿಯಿದ್ದರೂ ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಮೂರನೆ ಏಕದಿನ ಪಂದ್ಯವನ್ನು ಬೇರೆಡೆಗೆ ವರ್ಗಾಯಿಸುವ ಸಾಧ್ಯತೆಯಿಲ್ಲ. ಆಂಧ್ರ ಕ್ರಿಕೆಟ್ ಸಂಸ್ಥೆಯು ಅ.14 ರಂದು ನಿಗದಿಯಂತೆಯೇ ಪಂದ್ಯ ನಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

‘‘ಚಂಡಮಾರುತದ ಭೀತಿಯಿದ್ದರೂ ಪಂದ್ಯವನ್ನು ಬೇರೆಡೆಗೆ ವರ್ಗಾಯಿಸುವುದು ಅಷ್ಟೊಂದು ಸುಲಭದ ಮಾತಲ್ಲ. ನಾವು ಈ ಕುರಿತು ಎಚ್ಚರಿಕೆ ವಹಿಸಲಿದ್ದೇವೆ’’ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಪಿಟಿಐಗೆ ತಿಳಿಸಿದ್ದಾರೆ.

‘‘ಡಾ.ವೈ.ಎಸ್. ರಾಜ್‌ಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಒಂದು ಮಳೆ ಹನಿಯೂ ಬೀಳದಂತೆ ಸರ್ವ ಸಜ್ಜಿತ ವ್ಯವಸ್ಥೆಗಳನ್ನು ಮಾಡಲಾಗಿದೆ. ಪಂದ್ಯದ ದಿನ ಮಳೆ ಬಾರದೇ ಇದ್ದರೆ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಇಡೀ ಮೈದಾನಕ್ಕೆ ಸಂಪೂರ್ಣವಾಗಿ ಹೊದಿಕೆ ಹಾಕಲಾಗಿದೆ. ಪಿಚ್‌ನಲ್ಲಿ ನೀರು ನಿಲ್ಲುವ ಸಾಧ್ಯತೆಯಿಲ್ಲ. ನಮ್ಮಲ್ಲಿ ಉತ್ತಮ ಒಳ ಚರಂಡಿ ವ್ಯವಸ್ಥೆಯಿದೆ’’ಎಂದು ಆಂಧ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಗೋಕರಾಜು ಗಂಗರಾಜು ತಿಳಿಸಿದ್ದಾರೆ.

‘‘2013ರ ನ.24 ರಂದು ಭಾರತ ಹಾಗೂ ವೆಸ್ಟ್‌ಇಂಡೀಸ್ ನಡುವೆ ಇಲ್ಲಿ ನಡೆದ ಏಕದಿನ ಪಂದ್ಯದ ವೇಳೆಯೂ ನಾವು ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಿದ್ದೆವು. ಆ ಪಂದ್ಯ ಯಾವುದೇ ತೊಂದರೆಯಿಲ್ಲದೆ ನಡೆದಿತ್ತು. ಕ್ರಿಕೆಟ್ ಮಂಡಳಿಯು ನಮ್ಮ ಮೇಲೆ ಸಂಪೂರ್ಣ ವಿಶ್ವಾಸವನ್ನು ಇರಿಸಿದೆ’’ಎಂದು ಗಂಗರಾಜು ಹೇಳಿದರು.

Write A Comment