ಅಂತರಾಷ್ಟ್ರೀಯ

ಮಹಿಳೆಯರ ನಗ್ನತೆ ಭಾರತೀಯ ಚಿತ್ರಗಳಲ್ಲಿ ಅಧಿಕ: ವಿಶ್ವಸಂಸ್ಥೆ ವರದಿ

Pinterest LinkedIn Tumblr

SEX-BEFORE

ವಿಶ್ವಸಂಸ್ಥೆ, ಸೆ.23: ಆಕರ್ಷಕ ಮಹಿಳೆಯರನ್ನು ತನ್ನ ಚಿತ್ರಗಳಲ್ಲಿ ಕಾಣಿಸುವುದರಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ ಮತ್ತು ಅವರಲ್ಲಿ ಶೇಕಡ 35ರಷ್ಟು ಮಹಿಳೆಯರ ಪಾತ್ರಗಳನ್ನು ಅರೆನಗ್ನಾವಸ್ಥೆಯಲ್ಲಿ ತೋರಿಸಲಾಗುತ್ತಿದೆ ಎಂದು ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆಸಲಾದ ಅಧ್ಯಯನ ವರದಿಯೊಂದು ತಿಳಿಸಿದೆ.

ವಿಶ್ವದಾದ್ಯಂತದ ಜನಪ್ರಿಯ ಚಿತ್ರಗಳಲ್ಲಿ ಮಹಿಳಾ ಪಾತ್ರಗಳು ಕುರಿತು ಈ ಅಧ್ಯಯನ ನಡೆಸಲಾಗಿತ್ತು. ‘ಯುಎನ್ ವಿಮೆನ್’ ಹಾಗೂ ‘ದ ರಾಕ್‌ಫೆಲರ್ ಫೌಂಡೇಶನ್’ ಸಹಯೋಗದಲ್ಲಿ ‘ಗೀನಾ ಡೇವಿಸ್ ಇನ್‌ಸ್ಟಿಟ್ಯೂಟ್ ಆನ್ ಜೆಂಡರ್ ಇನ್ ಮೀಡಿಯಾ’ ನಡೆಸಿರುವ ಅಧ್ಯಯನದ ಪ್ರಕಾರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರೋದ್ಯಮವು ಮಹಿಳೆಯರ ಬಗ್ಗೆ ಹೆಚ್ಚಿನ ತಾರತಮ್ಯ, ವ್ಯಾಪಕ ಏಕಮಾದರಿ ಹಾಗೂ ಮಹಿಳೆಯರನ್ನು ಅರೆನಗ್ನಾವಸ್ಥೆಯಲ್ಲಿ ತೋರಿಸುತ್ತಿದೆ ಹಾಗೂ ಪ್ರಬಲ ಪಾತ್ರಗಳು ಮಹಿಳೆಯರನ್ನು ಕೀಳಾಗಿ ನಡೆಸಿಕೊಳ್ಳುವಂತೆ ತೋರಿಸುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅದರಲ್ಲೂ, ಭಾರತೀಯ ಚಿತ್ರರಂಗವು ಮಹಿಳಾ ಪಾತ್ರಗಳನ್ನು ಲೈಂಗಿಕವಾಗಿ ಪ್ರದರ್ಶಿಸುವಲ್ಲಿ ಮುಂಚೂಣಿಯಲ್ಲಿವೆ ಹಾಗೂ ಮಹಿಳೆಯರನ್ನು ಎಂಜಿನಿಯರ್‌ಗಳು ಅಥವಾ ವಿಜ್ಞಾನಿಗಳಂತಹ ಪ್ರಮುಖ ಧ್ನನಿಯ ಪಾತ್ರಗಳಾಗಿ ಬಿಂಬಿಸುವುದರಲ್ಲಿ ಹಿಂದೆ ಬಿದ್ದಿವೆ ಎಂದು ಅಧ್ಯಯನ ಕಂಡುಕೊಂಡಿದೆ.

ಜಗತ್ತಿನ ಒಟ್ಟು ಜನಸಂಖ್ಯೆಯ ಅರ್ಧದಷ್ಟನ್ನು ಮಹಿಳೆಯರು ಪ್ರತಿನಿಧಿಸುತ್ತಿದ್ದರೂ, ಚಲನ ಚಿತ್ರಗಳಲ್ಲಿ ಮೂರನೆ ಒಂದು ಭಾಗದಷ್ಟು ಮಹಿಳೆಯರನ್ನು ಮಾತ್ರ ಪ್ರಮುಖ ಪಾತ್ರಗಳಲ್ಲಿ ಕಾಣಿಸಲಾಗುತ್ತಿದೆ ಮತ್ತು ಬ್ರಿಟನ್-ಅಮೆರಿಕ ಸಹಯೋಗ ಹಾಗೂ ಭಾರತೀಯ ಚಿತ್ರಗಳು ಈ ನಿಟ್ಟಿನಲ್ಲಿ ಕೆಳಗಿನ ಸ್ತರದಲ್ಲಿವೆ ಎಂದು ಅಧ್ಯಯನ ವಿವರಿಸಿದೆ.

ತಮ್ಮ ಚಿತ್ರಗಳಲ್ಲಿನ ಎಲ್ಲ ಮಾತನಾಡುವ ಪಾತ್ರಗಳ ಪೈಕಿ ಅಮೆರಿಕನ್-ಬ್ರಿಟಿಷ್ ಚಿತ್ರಗಳು(ಶೇ.23.6) ಹಾಗೂ ಭಾರತೀಯ ಚಿತ್ರಗಳು(ಶೇ.24.9) ಭಾರೀ ಕಡಿಮೆ ಪ್ರಮಾಣದಲ್ಲಿ ಮಹಿಳೆಯರನ್ನು ಪ್ರಬಲ ಧ್ವನಿಯಾಗಿ ಬಿಂಬಿಸುತ್ತಿವೆ ಎಂದು ಅಧ್ಯಯನ ವಿವರಿಸಿದೆ.

ಚಲನಚಿತ್ರಗಳಲ್ಲಿ ಮಹಿಳೆಯರನ್ನು ಅರೆನಗ್ನಾವಸ್ಥೆಯಲ್ಲಿ ಕಾಣಿಸುವುದು ಜಾಗತಿಕ ಚಿತ್ರೋದ್ಯಮದ ಒಂದು ಸಾಮಾನ್ಯ ಪ್ರವೃತ್ತಿಯಾಗಿದೆ ಹಾಗೂ ಪುರುಷರಿಗಿಂತ ಎರಡು ಪಟ್ಟು ಅಧಿಕ ಮಹಿಳೆಯರನ್ನು ಲೈಂಗಿಕ ಪ್ರದರ್ಶನಕ್ಕೆ ಆಸ್ಪದಕೊಡುವಂತೆ ಕಡಿಮೆ ಬಟ್ಟೆ, ಭಾಗಶಃ ಅಥವಾ ಪೂರ್ಣ ನಗ್ನ ಸ್ಥಿತಿಯಲ್ಲಿ ತೋರಿಸಲಾಗುತ್ತಿದೆ ಎಂದು ಅಧ್ಯಯನ ಕಂಡುಕೊಂಡಿದೆ.

ಜರ್ಮನಿ ಹಾಗೂ ಆಸ್ಟ್ರೇಲಿಯದ ಬಳಿಕದ ಸ್ಥಾನವನ್ನು ಭಾರತ ಪಡೆದಿದ್ದು, ಶೇಕಡ 25.2ರಷ್ಟು ಪ್ರಮಾಣದಲ್ಲಿ ಭಾರತೀಯ ಚಿತ್ರಗಳಲ್ಲಿ ಆಕರ್ಷಕ ಮಹಿಳೆಯರನ್ನು ತೋರಿಸಲಾಗುತ್ತಿದೆ ಎಂದು ಅಧ್ಯಯನ ವಿವರಿಸಿದೆ.

ಭಾರತೀಯ ಚಿತ್ರಗಳಲ್ಲಿ ಕಂಡುಬರುವ ಶೇಕಡಾ 354ರಷ್ಟು ಮಹಿಳಾ ಪಾತ್ರಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಗ್ನಾವಸ್ಥೆಯಲ್ಲೇ ತೋರಿಸಲಾಗುತ್ತಿದೆ ಎಂದು ಅಧ್ಯಯನ ವಿವರಿಸಿದೆ. ಭಾರತೀಯ ಚಲನಚಿತ್ರೋದ್ಯಮದಲ್ಲಿರುವ ಮಹಿಳಾ ನಿರ್ದೇಶಕರು, ಲೇಖಕರು ಹಾಗೂ ನಿರ್ಮಾಪಕರ ಸಂಖ್ಯೆಯೂ ಹೆಚ್ಚಿನ ಸಂಖ್ಯೆಯಲ್ಲೇನೂ ಇಲ್ಲ ಎಂದು ವರದಿ ತಿಳಿಸಿದೆ.

ಭಾರತೀಯ ಚಿತ್ರರಂಗದಲ್ಲಿ ಶೇಕಡಾ 9.1ರಷ್ಟು ಮಹಿಳಾ ನಿರ್ದೇಶಕರಿದ್ದು, ಜಾಗತಿಕ ಮಟ್ಟದ ಸರಾಸರಿ ಶೇಕಡಾ 7ಕ್ಕಿಂತ ತುಸು ಅಧಿಕವಾಗಿದ್ದರೆ, ಮಹಿಳಾ ಬರಹಗಾರರ ಸಂಖ್ಯೆಯು ಶೇಕಡಾ 12.1ರಷ್ಟಿದೆ ಮತ್ತು ಇದು ಜಾಗತಿಕ ಮಟ್ಟದಲ್ಲಿರುವ ಶೇಕಡಾ 19.7ಕ್ಕಿಂತ ತೀರಾ ಕಡಿಮೆಯಾಗಿದೆ.

ಭಾರತದಲ್ಲಿರುವ ಮಹಿಳಾ ನಿರ್ಮಾಪಕರ ಸಂಖ್ಯೆಯು ಕೇವಲ ಶೇಕಡಾ 15.2ರಷ್ಟಿದ್ದು, ಜಾಗತಿಕ ಮಟ್ಟದಲ್ಲಿರುವ ಶೇಕಡಾ 22.7ಕ್ಕಿಂತ ಇದು ಕಡಿಮೆಯಾಗಿದೆ. ಭಾರತದ ಚಿತ್ರರಂಗದಲ್ಲಿ ಕ್ಯಾಮರಾ ಹಿಂದಿನ ಲಿಂಗಾನುಪಾತ ವಿವರವನ್ನು ಗಮನಿಸುವುದಾದಲ್ಲಿ, ಅ ಪ್ರಮಾಣವು ಪ್ರತಿ ಓರ್ವ ಮಹಿಳೆಗೆ ಪುರುಷರ ಸಂಖ್ಯೆಯು 6.2ರಷ್ಟಾಗಿದೆ.

Write A Comment