ಅಂತರಾಷ್ಟ್ರೀಯ

ಕುವೈತ್: ಜಮ್ಮು-ಕಾಶ್ಮೀರ ಪ್ರವಾಹ ಪೀಡಿತರಿಗಾಗಿ ಭಾರತೀಯ ವಿದ್ಯಾರ್ಥಿಯಿಂದ ನಿಧಿ ಸಂಗ್ರಹ

Pinterest LinkedIn Tumblr

JammuFlood2

ದುಬೈ, ಸೆ.23: ಜಮ್ಮು-ಕಾಶ್ಮೀರದಲ್ಲಿ ಭೀಕರ ಪ್ರವಾಹದಿಂದ ಸಂತ್ರಸ್ತರಾದವರಿಗಾಗಿ ಕುವೈತ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಯೋರ್ವನು 2 ಲಕ್ಷ ರೂಪಾಯಿಗಳ ಮಾನವೀಯ ನೆರವು ನಿಧಿ ಸಂಗ್ರಹಿಸಿರುವುದಾಗಿ ವರದಿಯೊಂದು ತಿಳಿಸಿದೆ.

ಈ ಶತಮಾನದಲ್ಲಿಯೇ ಅತ್ಯಂತ ಭೀಕರವೆನ್ನಲಾದ ಪ್ರವಾಹವು ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ್ದು, ಅಲ್ಲಿನ ಲಕ್ಷಾಂತರ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ಕುವೈತ್‌ನಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ 11ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಡಿ.ಆರ್. ಪ್ರತ್ಯೂಷಾ ಸ್ವಪ್ರಯತ್ನದಿಂದ ಕುವೈತ್‌ನಲ್ಲಿ 1001.250 ಕುವೈತಿ ದಿನಾರ್(2,12,489 ರೂ.)ಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿದ್ದಾನೆ.

ಈ ಮೊತ್ತವನ್ನು ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಭೀಕರ ಪ್ರವಾಹದಿಂದ ಸಂತ್ರಸ್ತರಾದವರಿಗೆ ಪರಿಹಾರ ಹಾಗೂ ಪುನರ್ವಸತಿ ಕಾರ್ಯಗಳಿಗೆ ಬಳಸಲು ಆತ ಉದ್ದೇಶಿಸಿದ್ದಾನೆ.

ಕುವೈತ್‌ನಲ್ಲಿರುವ ಎಳೆಯ ಭಾರತೀಯ ವಿದ್ಯಾರ್ಥಿಯೋರ್ವನು ಈ ರೀತಿ ಮಾನವೀಯ ನೆರವಿಗಾಗಿ ನಿಧಿ ಸಂಗ್ರಹಿಸಿರುವುದನ್ನು ಕುವೈತ್‌ನಲ್ಲಿರುವ ಭಾರತೀಯ ದೂತಾವಾಸ ಸೋಮವಾರ ಹೇಳಿಕೆಯೊಂದರಲ್ಲಿ ಶ್ಲಾಘಿಸಿದೆ.

Write A Comment