ರಾಷ್ಟ್ರೀಯ

ರಿಚರ್ಡ್ ವರ್ಮಾ ಭಾರತಕ್ಕೆ ಅಮೆರಿಕದ ನೂತನ ರಾಯಭಾರಿ

Pinterest LinkedIn Tumblr

000131B

ವಾಷಿಂಗ್ಟನ್, ಸೆ.19: ಭಾರತೀಯ ಮೂಲದ ಅಮೆರಿಕನ್ ರಿಚರ್ಡ್ ರಾಹುಲ್ ವರ್ಮಾರನ್ನು ಭಾರತಕ್ಕೆ ಮುಂದಿನ ಅಮೆರಿಕದ ರಾಯಭಾರಿ ಯನ್ನಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ನೇಮಿಸಿದ್ದಾರೆ.

ಈ ಮಾಸಾಂತ್ಯದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಯೋಜಿತ ಅಮೆರಿಕ ಭೇಟಿಗೆ ಪೂರ್ವಭಾವಿಯಾಗಿ ಒಬಾಮ ಈ ನೇಮಕ ಮಾಡಿದ್ದಾರೆ.ಅಮೆರಿಕದ ಸೆನೆಟ್ ಈ ನೇಮಕವನ್ನು ದೃಢಪಡಿಸಿದೆ. ರಿಚರ್ಡ್ ರಾಹುಲ್ ವರ್ಮಾ ಈ ಹಿಂದೆ ಸಂಸದೀಯ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಯಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸಕ್ತ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನೇಮಕದಿಂದಾಗಿ ರಾಹುಲ್ ವರ್ಮಾ, ಹೊಸದಿಲ್ಲಿಯಲ್ಲಿ ಉನ್ನತ ಹುದ್ದೆಯೊಂದರಲ್ಲಿ ಕಾರ್ಯ ನಿರ್ವಹಿಸಲಿರುವ ಮೊತ್ತಮೊದಲ ಭಾರತೀಯ ಅಮೆರಿಕನ್ ಎನಿಸಿಕೊಳ್ಳಲಿದ್ದಾರೆ.ನ್ಯಾನ್ಸಿ ಪೊವೆಲ್ ರಾಜೀನಾಮೆ ಬಳಿಕ ಹೊಸದಿಲ್ಲಿಯಲ್ಲಿರುವ ಅಮೆರಿಕದ ದೂತಾವಾಸದಲ್ಲಿನ ಈ ರಾಯಭಾರಿ ಹುದ್ದೆ ತೆರವಾಗಿತ್ತು.

ರಾಹುಲ್ ವರ್ಮಾ(45)ಅಧ್ಯಕ್ಷ ಒಬಾಮ ಹಾಗೂ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ರ ನಿಕಟವರ್ತಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಿರಿಯ ರಾಷ್ಟ್ರೀಯ ಭದ್ರತಾ ಸಲಹೆಗಾರರು, 2002ರಿಂದ 2007ರವರೆಗೆ ಸೆನೆಟ್ ಮೆಜಾರಿಟಿ ಲೀಡರ್ ಹ್ಯಾರಿ ರೀಡ್‌ರಿಗೆ ಕೌನ್ಸೆಲ್ ಹಾಗೂ ವಿದೇಶಾಂಗ ನೀತಿ ಸಲಹೆಗಾರರಾಗಿ ಪ್ರಸಕ್ತ ಅವರು ಸೇವೆ ಸಲ್ಲಿಸುತ್ತಿದ್ದಾರೆ.

Write A Comment