ರಾಷ್ಟ್ರೀಯ

ಬಿಜೆಪಿ- ಶಿವಸೇನೆ ಮೈತ್ರಿ ವಿಚ್ಛೇದನದತ್ತ

Pinterest LinkedIn Tumblr

amit_shah_meets_uddhav

ಮುಂಬೈ, ಸೆ.19: ಮಹಾರಾಷ್ಟ್ರದಲ್ಲಿ ಅ.15ರಂದು ನಡೆಯಲಿರುವ ವಿಧಾನಸಭಾ ಚುನವಾಣೆಗೆ ಸ್ಥಾನ ಹಂಚಿಕೆಯ ವಿಷಯದಲ್ಲಿ ಬಿಜೆಪಿ ಹಾಗೂ ಶಿವಸೇನೆ ಕಠಿಣ ನಿಲುವು ಅನುಸರಿಸಿರುವುದರಿಂದಾಗಿ ಶುಕ್ರವಾರ ಉಭಯ ಪಕ್ಷಗಳ 25 ವರ್ಷಗಳ ಹಳೆಯ ಮೈತ್ರಿ ವಿಚ್ಚೇದನದ ಹಂತ ತಲುಪಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ಹಗ್ಗ ಜಗ್ಗಾಟದಲ್ಲಿ ನಿರತವಾಗಿರುವ ಎರಡೂ ಪಕ್ಷಗಳೂ ಮೈತ್ರಿ ಮುಂದುವರಿಕೆಯ ಬಗ್ಗೆ ಅಂತಿಮ ನಿರ್ಣಯವೊಂದನ್ನು ಕೈಗೊಳ್ಳುವುದಕ್ಕಾಗಿ ಇಂದು ಇಡೀ ದಿನ ಸರಣಿ ನಿರ್ಣಾಯಕ ಸಭೆಗಳನ್ನು ನಡೆಸಿದೆ.

ಮೈತ್ರಿ ಮುಗಿದ ಅಧ್ಯಾಯ ಆದರೆ, ತನ್ನ ನಿಲುವನ್ನು ಘೋಷಿಸುವ ಮೊದಲು ಮುಂದಿನ ಬೆಳೆವಣಿಗೆಗಳನ್ನು ಕಾದು ನೋಡಲು ಪಕ್ಷ ನಿರ್ಧರಿಸಿದೆಯೆಂದು ಶಿವಸೇನೆಯ ಹಿರಿಯ ಪದಾಧಿಕಾರಿಯೊಬ್ಬರೂ ಅದೇ ರೀತಿಯ ಸೂಚನೆ ನೀಡಿದ್ದಾರೆ. ಆದಾಗ್ಯೂ, ಈ ವಿವಾದದ ಕುರಿತು ಇಂದು ಮುಂಜಾನೆ ಕೇಂದ್ರ ಸಚಿವ ನಿತನ್ ಗಡ್ಕರಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿರುವುದು ಚರ್ಚಾ ನಿರತ ಭಾಗೀದಾರ ಪಕ್ಷಗಳಲ್ಲಿ ಆಸೆಯ ಕಿರಣವನ್ನು ಮೂಡಿಸಿದೆ. ಮೈತ್ರಿಕೂಟವನ್ನು ಉಳಿಸುವ ರಾಜಿ ಸೂತ್ರವೊಂದರೊಂದಿಗೆ ಗಡ್ಕರಿ ಇಂದು ಅಪರಾಹ್ನ ಮುಂಬೈಗೆ ಆಗಮಿಸುವ ನಿರೀಕ್ಷೆಯಿದೆ.

ಸೀಟು ಹಂಚಿಕೆಯ ಜೊತೆಗೆ ಶಿವಸೇನಾ ವರಿಷ್ಠ ಉದ್ಭವ ಠಾಕ್ರೆಯವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸುವುದು ಸಮಸ್ಯೆಯ ಮೂಲವಾಗಿದೆ. ಎರಡೂ ಪಕ್ಷಗಳು ತಲಾ 135 ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಹಾಗೂ ಉಳಿದ 18 ಸ್ಥಾನಗಳನ್ನು ಮೈತ್ರಿಕೂಟದ ಇತರ ಸಣ್ಣ ಪಕ್ಷಗಳಿಗೆ ನೀಡ ಬೇಕೆನ್ನುವುದು ಬಿಜೆಪಿಯ ಬೇಡಿಕೆಯಾಗಿದೆ. ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಒಟ್ಟು 288 ಸ್ಥಾನಗಳಿವೆ.

ಇತರ ಸಣ್ಣ ಪಕ್ಷಗಳ ಪಾಲು ಸಹಿತ ಬಿಜೆಪಿಗೆ 119 ಸ್ಥಾನಗಳನ್ನು ನೀಡುವ ಹೊಸ ಕೊಡುಗೆಯನ್ನು ಶಿವಸೇನೆ ಮುಂದಿರಿಸಿದೆ. ಆದರೆ, ಅದನ್ನು ಬಿಜೆಪಿ ಸಾರಾಸಗಳಾಗಿ ತಿರಸ್ಕರಿಸಿದೆ. ಮುಂದಿನ ಮುಖ್ಯಮಂತ್ರಿ ಯಾವ ಪಕ್ಷದಿಂದ ಹಾಗೂ ಯಾರಾಗ ಬೇಕು ಎನ್ನುವ ಕುರಿತಾಗಿಯೂ ಬಿಜೆಪಿ ಯಾವುದೇ ಬದ್ಧತೆ ಸೂಚಿಸಿಲ್ಲ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗುರುವಾರ ತನ್ನ ಸಾರ್ವಜನಿಕ ಸಭೆಯೊಂದರಲ್ಲಿ ಮೈತ್ರಿ ಪಕ್ಷಗಳನ್ನುಲ್ಲೇಖಿಸದೆ ‘ಮುಂದಿನ ಸರಕಾರವನ್ನು ಬಿಜೆಪಿ ರಚಿಸಲಿದೆ’ ಎಂದಿದ್ದರು. ಆ ಬಳಿಕ ಪಕ್ಷವು 24 ತಾಸುಗಳ ಅಂತಿಮ ಗಡುವು ನೀಡಿತ್ತೆನ್ನಲಾಗಿದೆ. ಅದನ್ನು ಶಿವಸೇನೆ ಗುರುವಾರ ತಡರಾತ್ರಿ ನಿರಾಕರಿಸಿದೆ. ಮೈತ್ರಿ ಕಡಿತ ಅಥವಾ ಮುಂದುವರಿಕೆಯ ಕುರಿತ ಅಂತಿಮ ನಿರ್ಣಯದ ಅಧಿಕಾರವನ್ನು ಉದ್ಭವ ಠಾಕ್ರೆಯವರಿಗೆ ಬಿಡಲಾಗಿದೆಯೆಂದು ತುರ್ತು ಸಬೆಯೊಂದರ ಬಳಿಕ ಶಿವಸೇನೆ ನಿರ್ಣಯಿಸಿದೆ.

ತಮ್ಮ ನಡುವಿನ ಸ್ಥಾನ ಹೊಂದಾಣಿಕೆ ವಿಮಾನವನ್ನು ಪರಿಹರಿಸದೆಯೇ ಶನವಾರದಿಂದ ನಾಮ ಪತ್ರ ಸಲ್ಲಿಸಲು ಉಭಯ ಪಕ್ಷಗಳೂ ಸಂಪೂರ್ಣ ಸಜ್ಜಾಗಿದೆ. ಮಿತ್ರ ಪಕ್ಷಗಳೊಳಗಿನ ಈ ತೀವ್ರ ಬಿಕ್ಕಟ್ಟು ರಾಜಕೀಯ ದೃಶ್ಯವನ್ನು ಹಠಾತ್ ಬದಲಾಯಿಸಿದೆ. ಇದು ಕಾಂಗ್ರೆಸ್ ಹಾಗೂ ಎನ್‌ಸಿಪಿ ಮೈತ್ರಿ ಕೂಟಕ್ಕೆ ಮುಂದಿನ ಚುನಾವಣೆಯಲ್ಲಿ ಗೆಲುವಿನ ಆಸೆಯನ್ನು ಮೂಡಿಸಿದೆ.

ಬಿಜೆಪಿ ಹಾಗೂ ಶಿವಸೇನೆ ಪರಸ್ಪರ ಕತ್ತಿ ಮಸೆಯುತ್ತಿರುವಂತೆಯೇ, ರಿಪಬ್ಲಿಕ್‌ನ ಪಾರ್ಟಿ ಆಫ್ ಇಂಡಿಯಾ (ಎ) ಹಾಗೂ ಸ್ವಾಭಿಮಾನಿ ಸಂಘಟನೆಗಳಂತಹ ಸಣ್ಣ ಭಾಗಿದಾರರು ಕೂಡಾ ಬಿಜೆಪಿ ಸಖ್ಯವನ್ನು ಕಡಿದುಕೊಳ್ಳುವ ಬಗ್ಗ ಚಿಂತಿಸುತ್ತಿವೆ.

ಶಿವಸೇನೆಗೆ ಹೊಸ ಪ್ರಸ್ತಾಪ
ಇದೇ ವೇಳೆ ಅ.15ರ ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯ ಸ್ಥಾನ ಹಂಚಿಕೆ ಬಿಕ್ಕಟ್ಟನ್ನು ಪರಿಹರಿಸುವ ಯತ್ನವಾಗಿ, ಶಿವಸೇನೆಯ ಮುಂದೆ ಹೊಸದೊಂದು ಪ್ರಸ್ತಾಪವನ್ನಿರಿಸಲು ಬಿಜೆಪಿ ನಿರ್ಧರಿಸಿದೆ. ಅನೇಕ ವರ್ಷಗಳಿಂದ ಶಿವಸೇನೆ ಗೆಲ್ಲಲು ವಿಫಲವಾಗಿರುವ ಹಲವು ಕ್ಷೇತ್ರಗಳಲ್ಲಿ ತಾನು ಸ್ಪರ್ಧಿಸ ಬಯಸಿದ್ದೇನೆಂದು ಬಿಜೆಪಿ ಹೇಳಿದೆ

ತಾವು ಸ್ಪರ್ಧಿಸ ಬಯಸುವ ಸ್ಥಾನಗಳ ಸಂಖ್ಯೆಯ ಕುರಿತು ಶಿವಸೇನೆಗೆ ಪ್ರಸ್ತಾಪವೊಂದನ್ನು ಕಳುಹಿಸಲಿದ್ದೇವೆ. ಕಳೆದ 25 ವರ್ಷಗಳಿಂದ ಶಿವಸೇನೆ ಗೆಲ್ಲದ 59 ಕ್ಷೇತ್ರಗಳು ಹಾಗೂ ಬಿಜೆಪಿ ಗೆಲ್ಲದ 19 ಕ್ಷೇತ್ರಗಳಿವ. ಅದನ್ನು ಶಿವಸೇನೆ ಪರಿಗಣಸ ಬೇಕೆಂದು ತಮ್ಮ ಇಚ್ಛೆಯಾದ ತಾವು ಪ್ರತಿ ಸ್ಥಾನದ ಬಗ್ಗೆ ಚರ್ಚಿಸ ಬಯಸಿದ್ದೇವೆ ಎಂದು ಮಹಾರಾಷ್ಟ್ರ ಬಿಜೆಪಿಯ ಮಾಜಿ ಅಧ್ಯಕ್ಷ ಸುಧೀರ್ ಮುಂಗಂತಿವರ್ ಪಕ್ಷದ ರಾಜ್ಯ ಕೋರ್ ಸಮಿತಿಯ ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.

ತಾವು 2009ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅದೇ 119 ಸ್ಥಾನಗಳ ಕೊಡಿಗೆಯನ್ನು ಶಿವಸೇನೆ ತಮಗೆ ನೀಡಿದೆಯೆಂದು ಮಾಧ್ಯಮಗಳ ಮುಖಾಂತರ ತಿಳಿದು ಬಂದಿದೆ. ಆದರೆ, ತಾವು ಮಾಧ್ಯಮ ಮಾರ್ಗದ ಮೂಲಕ ತಮ್ಮ ಪ್ರಸ್ತಾಪವನ್ನು ಕಳುಹಿಸಿವ ತಪ್ಪು ಮಾಡುವುದಿಲ್ಲ. ಅದನ್ನು ಶಿವಸೇನೆಗೆ ನೇರವಾಗಿಯೇ ಕಳುಹಿಸಲಿದ್ದೇವೆಂದು ಅವರು ಹೇಳಿದರು.

Write A Comment