ರಾಷ್ಟ್ರೀಯ

ಕಾಶ್ಮೀರ: ಸಾವಿನ ಸಂಖ್ಯೆ 200ಕ್ಕೇರಿಕೆ

Pinterest LinkedIn Tumblr

jammu-flood-army

ಶ್ರೀನಗರ, ಸೆ. 16: ಭೀಕರ ಪ್ರವಾಹದಿಂದ ನಲುಗಿ ಹೋಗಿರುವ ಜಮ್ಮು ಹಾಗೂ ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿನ ಜವಾಹರ್ ನಗರ್ ಪ್ರದೇಶದ ಮನೆ ಯೊಂದರಲ್ಲಿ 13 ಮೃತದೇಹಗಳನ್ನು ರಕ್ಷಣಾ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ. ತನ್ಮೂಲಕ ಸಾವಿಗೀಡಾದವರ ಒಟ್ಟು ಸಂಖ್ಯೆ 200 ದಾಟಿದೆ.

‘‘ಪ್ರವಾಹದಲ್ಲಿ ಮನೆಯೊಂದು ಕುಸಿದು ಬಿದ್ದ ಕಾರಣ 13 ಮಂದಿ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ’’ ಎಂದು ರಕ್ಷಣಾ ಕಾರ್ಯಕರ್ತ ಅಬ್ದುಲ್ ಹಮೀದ್ ಪಿಟಿಐಗೆ ತಿಳಿಸಿದ್ದಾರೆ.

ಅವಶೇಷಗಳಡಿಯಿಂದ ಎರಡು ಮೃತದೇಹಗಳನ್ನು ಕಳೆದ ರಾತ್ರಿಯೇ ಹೊರತೆಗೆ ಯಲಾಗಿದೆ ಎಂದಿರುವ ಅವರು, ಉಳಿದ ಮೃತದೇಹ ಗಳು ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿ ರುವುದರಿಂದ ಅವುಗಳನ್ನು ಹೊರಕ್ಕೆ ತೆಗೆಯಲು ಸ್ವಲ್ಪ ಸಮಯ ತಗಲಬಹುದು ಎಂದಿದ್ದಾರೆ. ಮೃತ ದೇಹಗಳನ್ನು ನಾಯಿಗಳು ತಿನ್ನುತ್ತಿರುವುದು ಆತಂಕಕ್ಕೀಡುಮಾಡಿದೆ ಎಂದಿದ್ದಾರೆ. ಮೃತದೇಹಗಳು ಅರೆಕೊಳೆತ ಸ್ಥಿತಿಯಲ್ಲಿ ದ್ದರಿಂದ ಅವುಗಳ ಗುರುತುಗಳು ಖಚಿತಪಟ್ಟಿಲ್ಲವಾದರೂ, ಸ್ಥಳೀಯರಾಗಿರುವ ಸಾಧ್ಯತೆ ಕಡಿಮೆ ಎಂದು ರಕ್ಷಣಾ ಕಾರ್ಯ ಕರ್ತರು ಅಭಿಪ್ರಾಯಿಸಿದ್ದಾರೆ.

‘‘ಇವುಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ನೆರೆ ನೀರಿನಿಂದ ಸಮಯಕ್ಕೆ ಸರಿಯಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸ್ಥಳೀಯವಲ್ಲದ ಒಂದು ಅಥವಾ ಎರಡು ಕುಟುಂಬಗಳ ಮೃತದೇಹಗಳಿವು ಎಂಬುದಾಗಿ ಭಾಸವಾಗು ತ್ತದೆ ಅಥವಾ ಮನೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಸಿಲುಕಿ ಸಾವಿಗೀಡಾಗಿರಬಹುದೆಂದು ಅನಿಸುತ್ತಿದೆ ’’ ಎಂದು ಅವರು ತಿಳಿಸಿದ್ದಾರೆ.

ಸಾವಿಗೀಡಾದವರ ಪೈಕಿ ಮೂವರು ಮಕ್ಕಳು ಹಾಗೂ ಇಬ್ಬರು ಯುವಕರೂ ಸೇರಿದ್ದಾರೆ. ನಗರದ ಜವಾಹರ್ ನಗರ್ ಹಾಗೂ ರಾಜ್‌ಭಾಗ್ ಪ್ರದೇಶದಲ್ಲಿ ಪಂಪ್‌ಗಳನ್ನು ಬಳಸಿ ನೀರನ್ನು ಹೊರತೆಗೆಯಲಾಗುತ್ತಿದ್ದರೂ ಕಳೆದ 24 ಗಂಟೆಗಳಲ್ಲಿ ನೀರಿನ ಮಟ್ಟ ಕೇವಲ ಕೆಲವೇ ಇಂಚುಗಳಷ್ಟು ಮಾತ್ರವೇ ಕಡಿಮೆಯಾಗಿರುವುದು ಕಳವಳಕ್ಕೆ ಕಾರಣ ವಾಗಿದೆ. ‘‘ಇಲ್ಲಿನ ರಸ್ತೆಗಳು ಇನ್ನೊಮ್ಮೆ ಕಾಣಲು ದೀರ್ಘ ಸಮಯವನ್ನು ಬೇಕಾಗಬಹುದು’’ ಎಂದು ಸ್ಥಳೀಯ ನಿವಾಸಿ ಅಮೀರ್ ನಝೀರ್ ಹೇಳಿದ್ದಾರೆ.

Write A Comment