ಗಲ್ಫ್

ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಬುರ್ಜ್​ ಖಲೀಫಾದ ತುತ್ತತುದಿಗೆ ನಿಂತ ಮಹಿಳೆ; ಇದನ್ನು ನೋಡಿದರೆ ಮೈ ಜುಂ ಎನ್ನುತ್ತೆ!! ಅಷ್ಟಕ್ಕೂ ಈ ಜಾಹೀರಾತು ಏನು…?

Pinterest LinkedIn Tumblr

ಯುನೈಟೆಡ್​ ಅರಬ್​ ಎಮಿರೇಟ್ಸ್​ನ (United Arab Emirates) ಅತಿದೊಡ್ಡ ಏರ್​ಲೈನ್​, ಧ್ವಜವಾಹಕ ಎಮಿರೇಟ್ಸ್ (Emirates)​​ ಸದ್ಯ ಈಗ ಟ್ರೆಂಡ್​ನಲ್ಲಿದೆ. ಅದಕ್ಕೆ ಕಾರಣ ಒಂದು ವಿಶಿಷ್ಟ ಜಾಹೀರಾತು. ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಗೋಪುರ ಎನ್ನಿಸಿಕೊಂಡಿರುವ ಬುರ್ಜ್​ ಖಲೀಪಾ (Burj Khalifa) ಗೋಪುರದ ತುತ್ತ ತುದಿಯಲ್ಲಿ ಮಹಿಳೆಯೊಬ್ಬರನ್ನು ನಿಲ್ಲಿಸಿ ಮಾಡಲಾದ ಜಾಹೀರಾತು ಇದು. ಈ ಜಾಹೀರಾತು ವಿಡಿಯೋ ನೋಡಿದರೆ ಎಂಥವರಿಗಾದರೂ ಮೈನವಿರೇಳುತ್ತದೆ.

30 ಸೆಕೆಂಡ್​ಗಳ ಜಾಹೀರಾತು ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. ವಿಡಿಯೋ ಕ್ಲಿಪ್​ ನೋಡಿದ ಪ್ರತಿಯೊಬ್ಬರೂ ಗಾಬರಿ, ಭಯ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ಅಷ್ಟು ಎತ್ತರದ ಬುರ್ಜ್​ ಖಲೀಪಾದ ತುತ್ತತುದಿಗೆ ಏರಿ ನಿಲ್ಲುವ ಸಾಹಸ ಮಾಡಿದ ಮಹಿಳೆ, ವೃತ್ತಿಪರ ಸ್ಕೈಡೈವಿಂಗ್​ ಬೋಧಕರಾದ ನಿಕೋಲ್​ ಸ್ಮಿತ್ ಲುಡ್ವಿಕ್​. ಈ ಜಾಹೀರಾತಿನಲ್ಲಿ ಎಮಿರೇಟ್ಸ್​ ಕ್ಯಾಬಿನ್​ ಸಿಬ್ಬಂದಿಯಾಗಿ ನಟಿಸಿದ್ದಾರೆ. ಎಮಿರೇಟ್ಸ್​ನ ಸಮವಸ್ತ್ರ ಧರಿಸಿ ಜಾಹೀರಾತಿನಲ್ಲಿ ನಟನೆ ಮಾಡಿರುವ ನಿಕೋಲ್​ ಬಗ್ಗೆ ಹೆಮ್ಮೆ ಎನ್ನಿಸದೆ ಇರದು..ಅವರ ಧೈರ್ಯ ನೋಡಿ ಖುಷಿಯಾಗದೆ ಇರದು.

ಅಷ್ಟು ಎತ್ತರದ ಗೋಪುರದ ಮೇಲೆ ನಿಂತ ಅವರು, ನಗುತ್ತ..ನಾನೀಗ ಜಗತ್ತಿಗಿಂತ ಎತ್ತರದಲ್ಲಿದ್ದೇನೆ ಎನ್ನುವುದನ್ನು ಕೇಳಬಹುದು. ಇಷ್ಟುದಿನ ಯುಕೆ (ಇಂಗ್ಲೆಂಡ್​)ಯ ಕೆಂಪು ಲಿಸ್ಟ್​​ನಲ್ಲಿದ್ದ ಯುಎಇಯನ್ನು ಇತ್ತೀಚೆಗಷ್ಟೇ ಯುಕೆ ಅಂಬರ್​ ಲಿಸ್ಟ್​ಗೆ ಸೇರ್ಪಡೆಗೊಳಿಸಿದೆ. ಅದನ್ನು ಜಗತ್ತಿಗೆ ತಿಳಿಸಿ, ನೀವೂ ಎಮಿರೇಟ್ಸ್​​ನಲ್ಲಿ ಪ್ರಯಾಣಿಸಿ ಎಂದು ಹೇಳುವ ಜಾಹೀರಾತು ಇದು.
ಜಾಹೀರಾತಿನಲ್ಲಿ ಮೊದಲು ನಿಕೋಲ್​ ಅವರನ್ನು ಜೂಮ್​​ನಲ್ಲಿ ತೋರಿಸಲಾಗುತ್ತದೆ. ಆದರೆ ನಂತರ ಕ್ಯಾಮರಾವನ್ನು ಹಿಂದೆ ತೆಗೆದುಕೊಂಡು ಬಂದಂತೆ ಬುರ್ಜ್​ ಖಲೀಫಾದ ತುತ್ತ ತುದಿಯಲ್ಲಿ ಆಕೆ ನಿಂತಿರುವ ಒಂದು ಸಮಗ್ರ ನೋಟ ಕಾಣಿಸುತ್ತಿದೆ. ಆ ಕ್ಷಣ ನಿಮ್ಮ ಮೈ ಜುಂ ಅನ್ನದಿದ್ದರೆ ಕೇಳಿ. ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್​ ಖಲೀಫಾ 828 ಮೀಟರ್​ ಎತ್ತರವಾಗಿದೆ. ಅದರ ಮೇಲೆ ಒಬ್ಬರು ಹೋಗಿ ನಿಲ್ಲುವುದು ಖಂಡಿತ ಹುಡುಗಾಟಿಕೆಯಂತೂ ಅಲ್ಲ.

ಅಷ್ಟು ದೊಡ್ಡ ಸಾಹಸದ ವಿಡಿಯೋ ಶೇರ್​ ಮಾಡಿರುವ ನಿಕೋಲ್​, ನನ್ನ ಜೀವನದಲ್ಲೇ ಮಾಡಿದ ಒಂದು ಅದ್ಭುತ ಮತ್ತು ಎಕ್ಸೈಟ್​​ ಆಗಿರುವ ಸಾಹಸ ಇದು. ಇಂಥ ಕ್ರಿಯಾಶೀಲ ಮಾರ್ಕೆಟಿಂಗ್​ ಐಡಿಯಾ ಮಾಡಿರುವ ಎಮಿರೇಟ್ಸ್​​ನ್ನು ಶ್ಲಾಘಿಸಲೇಬೇಕು ಎಂದಿದ್ದಾರೆ.

Comments are closed.