ಕುಂದಾಪುರ: ಇತ್ತೀಚೆಗೆ ಮಳೆಯ ಆರ್ಭಟದಿಂದ ನದಿಗೆ ಬಿದ್ದು ಮೃತಪಟ್ಟ ಹಳ್ನಾಡು ಭಾಗದ ನಿವಾಸಿ ಅಶೋಕ್ ಅವರ ನಿವಾಸಕ್ಕೆ ತೆರಳಿದ ಬೈಂದೂರು ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ ಕುಟುಂಬಿಕರಿಗೆ ಸಾಂತ್ವಾನ ಹೇಳಿ ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು, ತಹಶಿಲ್ದಾರ್ ಕಿರಣ್ ಗೌರಯ್ಯ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಪುತ್ರನ್, ಪ್ರಮುಖರಾದ ಸಾಮ್ರಾಟ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ದಿನೇಶ್ ಆಚಾರ್, ಪ್ರಕಾಶ್ ಶೆಟ್ಟಿ ಜೋರ್ಮಕ್ಕಿ, ಮತ್ತಿತರರು ಉಪಸ್ಥಿತರಿದ್ದರು.
Comments are closed.