ಗಲ್ಫ್

ದುಬೈ: ಯುಎಇಯ ಕನ್ನಡ-ತುಳುಪರ ಸಂಘಟನೆಗಳ ಪೋಷಕರಾಗಿದ್ದ ಮಂಗಳೂರು ಮೂಲದ ದಿವಾಕರ್ ಆಳ್ವ ನಿಧನ

Pinterest LinkedIn Tumblr

ದುಬೈ: ಯುಎಇಯ ಕನ್ನಡ ಮತ್ತು ತುಳು ಸಂಘಟನೆಗಳ ಪೋಷಕರಾಗಿದ್ದ ಮಂಗಳೂರು ಕದ್ರಿ ಮೂಲದ ದಿವಾಕರ್ ಆಳ್ವ(63) ನಿಧನರಾಗಿದ್ದಾರೆ. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಇಂದು ಬೆಳಗ್ಗೆ 5 ಗಂಟೆಗೆ ದುಬೈನಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ 4 ದಶಕಗಳಿಂದ ದುಬೈನಲ್ಲಿ ನೆಲೆಸಿರುವ ಅವರು, ದುಬೈನ ಫೆಡರಲ್ ಇನ್ಶುರೆನ್ಸ್ ಬ್ರೋಕರ್ಸ್ ಎಲ್ಎಲ್ ಸಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಯುಎಇ ತುಳುಕೂಟದ ಸ್ಥಾಪಕ ಸದಸ್ಯರಾಗಿಯೂ, ಕನ್ನಡ ಮತ್ತು ತುಳುಪರ ಸಂಘಟನೆಗಳ ಪೋಷಕರಾಗಿಯೂ ಹಾಗು ಯುಎಇ ಬಂಟ್ಸ್’ನ ಸಕ್ರೀಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅವರ ಪತ್ನಿ ಸರಿತಾ ಉಡುಪಿಯ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಲಯನ್ ಗವರ್ನರ್ A.B.ಶೆಟ್ಟಿ ಯವರ ಪುತ್ರಿಯಾಗಿದ್ದಾರೆ.

ಅವರು ಪತ್ನಿ ಸರಿತಾ, ಪುತ್ರಿ ಪೌಶಾಲಿ, ಪುತ್ರ ಮನಲ್ ಹಾಗು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಯುಎಇಯಲ್ಲಿರುವ ತುಳು ಹಾಗು ಕನ್ನಡಪರ ಸಂಘಟನೆಗಳು ಸಂತಾಪ ಸೂಚಿಸಿವೆ.

Comments are closed.