ಗಲ್ಫ್

ದುಬೈಯಯಲ್ಲಿ ಪ್ರದರ್ಶನಗೊಂಡ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಸಿನಿಮಾದ ‘ವರ್ಲ್ಡ್ ಪ್ರೀಮಿಯರ್ ಶೋ; ಸಿನೆಮಾಕ್ಕೆ ಸಿಕ್ಕಿತು ಭರ್ಜರಿ ರೆಸ್ಪಾನ್ಸ್

Pinterest LinkedIn Tumblr

ದುಬೈ: ACME (ಅಕ್ಮೆ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ದುಬೈಯ ಹೆಸರಾಂತ ಉದ್ಯಮಿ, ಕನ್ನಡ ಚಲನಚಿತ್ರ ನಿರ್ಮಾಪ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಸಿನಿಮಾದ ‘ವರ್ಲ್ಡ್ ಪ್ರೀಮಿಯರ್ ಶೋ ದುಬೈಯಲ್ಲಿ ಬಹಳ ಅದ್ದೂರಿಯಾಗಿ ಪ್ರದರ್ಶನಗೊಂಡಿದ್ದು, ಚಿತ್ರ ನೋಡಿದ ಜನ ಬಹುಪರಾಕ್ ಹೇಳಿದ್ದಾರೆ.

ತುಳುಚಿತ್ರ ರಂಗದಲ್ಲಿ ಈ ಸಿನೆಮಾ ಇತಿಹಾಸ ಸೃಷ್ಟಿಸುವುದು ಖಚಿತ ಎಂದು ಚಿತ್ರ ನಿರ್ಮಿಸಿರುವ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ದಂಪತಿಯನ್ನು ಸಿನೆಮಾ ನೋಡಿದ ಸಿನಿರಸಿಕರು ಹಾಡಿಹೊಗಳಿದ್ದಾರೆ.

‘ವರ್ಲ್ಡ್ ಪ್ರೀಮಿಯರ್ ಶೋ’ ದುಬೈಯ Al Ghurair centre Deiraದಲ್ಲಿ ಶುಕ್ರವಾರ ಸಂಜೆ ಪ್ರದರ್ಶನಗೊಂಡಿದ್ದು, ‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಸಿನೆಮಾ ನೋಡಿದ ವೀಕ್ಷಕರು ಮೆಚ್ಚುಗೆಯ ಮಹಾಪೂರವನ್ನೇ ವ್ಯಕ್ತಪಡಿಸಿದ್ದು, ರಿಲೀಸ್ ಗೂ ಮುನ್ನವೇ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿರೋದರಿಂದ ಸಿನಿಮಾ ತಂಡ ಇದೀಗ ಫುಲ್ ಖುಷಿಯಾಗಿದೆ.

ತುಳು ಭಾಷೆಯ ಚಿತ್ರವೊಂದು ದೂರದ ದುಬೈಯಲ್ಲಿ ‘ವರ್ಲ್ಡ್ ಪ್ರೀಮಿಯರ್ ಶೋ’ ಪ್ರದರ್ಶನಗೊಂಡಿರುವುದು ತುಳು ಚಿತ್ರರಂಗದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದಂತಾಗಿದೆ. ಹಾಸ್ಯವೇ ಪ್ರಧಾನವಾಗಿರುವ ಜೊತೆಗೆ ಚಿತ್ರದಲ್ಲಿ ಬರುವ ವಿವಿಧ ಸನ್ನಿವೇಶಗಳು, ಚಿತ್ರ ಕಥೆ ನೋಡಿದ ಜನ ಚಿತ್ರ ಸೂಪರ್ ಹಿಟ್ ಆಗುವ ಜೊತೆಗೆ ಹೊಸ ಇತಿಹಾಸ ಬರೆಯಲಿದೆ ಎಂದು ಶುಭ ಹಾರೈಸಿದ್ದಾರೆ.

‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾದಲ್ಲಿ ಹಾಸ್ಯದ ಮೂಲಕ ಎಲ್ಲರನ್ನು ನಗುವಿನ ಅಲೆಯಲ್ಲಿ ತೇಲುವಂತೆ ಮಾಡಿರುವ ತುಳು ಚಿತ್ರದ ದಿಗ್ಗಜರಾದ ಅರವಿಂದ್ ಬೋಳಾರ್ ಹಾಗು ನವೀನ ಡಿ’ಪಡೀಲ್ ‘ವರ್ಲ್ಡ್ ಪ್ರೀಮಿಯರ್ ಶೋ’ ವೇಳೆ ಭಾಗವಹಿಸಿದ್ದು, ಸಿನೆಮಾ ಮೂಡಿಬಂದ ಬಗ್ಗೆ ತಮ್ಮ ಅನಿಸಿಕೆ-ಅಭಿಪ್ರಾಯವನ್ನು ತಿಳಿಸಿದರು.

‘ವರ್ಲ್ಡ್ ಪ್ರೀಮಿಯರ್ ಶೋ’ ನೋಡಲು ಯುಎಇಯ ದುಬೈ, ಅಬುಧಾಬಿ, ಶಾರ್ಜಾ, ಫುಜೆರಾ, ರಾಸೆಲ್ ಖೈಮಾ, ಅಜ್ಮಾನ್ ಸೇರಿದಂತೆ ವಿವಿಧ ಕಡೆಗಳಿಂದ ತುಳು ಸಿನಿ ರಸಿಕರು ಆಗಮಿಸಿದ್ದು, ಚಿತ್ರದ ಬಗ್ಗೆ ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ.

‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾದಲ್ಲಿ ಪ್ರತಿಯೊಂದು ಪಂಚಿಗ್ ಡಯಲಾಗ್, ಹಾಸ್ಯಮಯ ದೃಶ್ಯ, ಹಾಸ್ಯ ಕಲಾವಿದರ ನಟನೆ, ಛಾಯಾಗ್ರಹಣ, ಹಾಡು, ಹಿನ್ನೆಲೆ ಸಂಗೀತ, ಸುಂದರ ತಾಣಗಳ ದೃಶ್ಯ ಒಂದಕ್ಕಿಂತಲೂ ಒಂದು ಮಿಲೀಲು ಎಂಬಂತೆ ಚಿತ್ರ ಮೂಡಿಬಂದಿದೆ. ಮಕ್ಕಳಿಂದ ಹಿಡಿದು ಹಿರಿಯರ ವರಗೆ ಎಲ್ಲರೂ ಒಟ್ಟಿಗೆ ಕೂತು ನೋಡುವಂತೆ ನಿರ್ದೇಶಕ ಕೆ. ಸೂರಜ್ ಶೆಟ್ಟಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಚಿತ್ರದಲ್ಲಿ ಅರವಿಂದ್ ಬೋಳಾರ್, ನವೀನ ಡಿ’ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ ಕಾಮಿಡಿ ಎಲ್ಲರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ನಾಯಕ-ನಟಿಯಾಗಿ ಪೃಥ್ವಿ ಅಂಬರ್ ಹಾಗು ನವ್ಯ ಪೂಜಾರಿ ನಟನೆ ಎಲ್ಲರಿಗೆ ಮೆಚ್ಚುಗೆ ತರುವಂಥದ್ದು, ವಿಶೇಷ ಪಾತ್ರದಲ್ಲಿ ನಟಿಸಿರುವ ಕನ್ನಡದ ಹಿರಿಯ ನಟ ಅನಂತ್ ನಾಗ್ ನಟನೆ ಎಲ್ಲರ ಮನದಲ್ಲಿ ಉಳಿಯುವಂತೆ ಮಾಡುತ್ತದೆ.

ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ , ನಿರ್ದೇಶನ ಕೆ. ಸೂರಜ್ ಶೆಟ್ಟಿ
ಮ್ಯೂಸಿಕ್ : ಕದ್ರಿ ಮಣಿಕಾಂತ್
ಸಿನಿಮಾಟೋಗ್ರಫಿ: ಕೃಷ್ಣ ಸಾರಥಿ – ಅಭಿಲಾಷ್ ಕಲಾತಿ
ಸಂಕಲನ: ಮನು ಶೆಡ್ಗರ್
ಆರ್ಟ್ ಡೈರೆಕ್ಟರ್ : ಮಹೇಶ್ ಎನ್ಮೂರಿ
ಲಿರಿಸಿಸ್ಟ್ಸ್ : ಅರ್ಜುನ್ ಲೆವಿಸ್ | ಲೋಕು ಕುಡ್ಲ
ಕೊರಿಯೋಗ್ರಾಫರ್ : ‘ಭಜರಂಗಿ’ ಮೋಹನ್

‘ಇಂಗ್ಲಿಷ್-ಎಂಕ್ಲೆಗ್ ಬರ್ಪುಜಿ ಬ್ರೋ’ ಸಿನೆಮಾ ಹರೀಶ್ ಶೇರಿಗಾರ್ ಹಾಗು ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರ ನಿರ್ಮಾಣದ ಮೊದಲ ತುಳು ಚಿತ್ರವಾಗಿದ್ದು, ಇದಕ್ಕೂ ಮೊದಲು ‘ಮಾರ್ಚ್-22 ‘, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’, ‘ಯಾನ’ ದಂತಹ ಸದಭಿರುಚಿಯ ಸಿನೆಮಾ ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತರಾಗಿದ್ದಾರೆ.

Comments are closed.