ರಾಷ್ಟ್ರೀಯ

ಕೊರೊನಾ ಕುರಿತು ವಾಟ್ಸಾಪ್ ನಲ್ಲಿ ಸುಳ್ಳುಸುದ್ದಿ: ಪೊಲೀಸರಿಂದ ಎಚ್ಚರಿಕೆ

Pinterest LinkedIn Tumblr


ಮಹಾರಾಷ್ಟ್ರ: ಕೊರೊನಾ ಶಂಕಿತ ವ್ಯಕ್ತಿಯ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿದ ಕಾರಣ ವಾಟ್ಸಾಪ್ ಗ್ರೂಪ್ ಒಂದರ ಅಡ್ಮಿನ್ ಮತ್ತು ಸದಸ್ಯರಿಗೆ ಪೊಲೀಸರು ಎಚ್ಚರಿಕೆ ನೀಡಿದ ಘಟನೆ ಅಹಮದ್ ನಗರ್ ನಲ್ಲಿ ನಡೆದಿದೆ.

ವ್ಯಾಪಕವಾಗಿ ಸುಳ್ಳು ಸುದ್ದಿ ಹರಡುತ್ತಿದ್ದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಶಂಕಿತ ಕೊರೊನಾ ವೈರಸ್ ವ್ಯಕ್ತಿಯೊಬ್ಬರು ಸಂಗಂನರ್ ಬಸ್ ನಿಲ್ದಾಣದಲ್ಲಿ ಕಂಡುಬಂದಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರೂಪಿನಲ್ಲಿರುವ ಯಾರು ಕೂಡ ಜನಸಂದಣಿ ಇರುವ ಪ್ರದೇಶಕ್ಕೆ ತೆರಳ ಬೇಡಿ. ಮಾಸ್ಕ್ ಗಳನ್ನು ಧರಿಸಿಕೊಳ್ಳಿ ಎಂಬಂತೆ ವಾಟ್ಸಾಪ್ ನಲ್ಲಿ ಸಂದೇಶ ನೀಡಿ ಶಂಕಿತ ವ್ಯಕ್ತಿಯ ಫೋಟೋವನ್ನು ಹರಡಿದ್ದರು.

ಆದರೇ ಈ ವಿಷಯ ಸತ್ಯಕ್ಕೆ ದೂರವಾದುದು, ವದಂತಿಗಳಿಗೆ ಕಾರಣವಾಗುತ್ತದೆ ಎಂಬುದು ಕಂಡುಬಂದಿದ್ದರಿಂದ ಗ್ರೂಪ್ ನ ಅಡ್ಮಿನ್ ಮತ್ತು ಸದಸ್ಯರನ್ನು ಕರೆದು ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಆಧಿಕಾರಿಗಳು ತಿಳಿಸಿದ್ದಾರೆ.

Comments are closed.