ಗಲ್ಫ್

ಫೆಬ್ರುವರಿ 21 ರಂದು ದುಬೈಯಲ್ಲಿ ‘ದಾದಾ ಮಲ್ಪೆರೆ ಆಪುಂಡು ?’ ತುಳು ಹಾಸ್ಯಮಯ ನಾಟಕ ಪ್ರದರ್ಶನ; ಟಿಕೆಟ್ ಬಿಡುಗಡೆ

Pinterest LinkedIn Tumblr

ಗಮ್ಮತ್ ಕಲಾವಿದೆರ್ ದುಬೈ ಇವರ 9 ನೇ ವರ್ಷದ ಪ್ರಯುಕ್ತ ಇದೇ ಬರುವ ಫೆಬ್ರುವರಿ 21 ಶುಕ್ರವಾರ ಸಂಜೆ 5 ಗಂಟೆಗೆ ಸರಿಯಾಗಿ ದುಬೈಯ ಅಲ್ ಕೂಸ್ ನಲ್ಲಿನ ಕ್ರೆಡೆನ್ಸ್ ಹೈಸ್ಕೂಲ್ ನ ಸಭಾಂಗಣದಲ್ಲಿ ದಾದಾ ಮಲ್ಪೆರೆ ಆಪುಂಡು ? ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದೆ .

ನವೀನ್ ಶೆಟ್ಟಿ ಅಳಕೆ ಇವರು ರಚಿಸಿರುವ ಈ ನಾಟಕವನ್ನು ರಂಗ ಸವ್ಯಸಾಚಿ ಲಯನ್ ಕಿಶೋರ್ ಡಿ ಶೆಟ್ಟಿ ಅವರ ಸಂಪೂರ್ಣ ಸಹಕಾರದೊಂದಿಗೆ , ರಂಗ ಸಾರಥಿ ವಿಶ್ವನಾಥ್ ಶೆಟ್ಟಿ ಅವರು ನಿರ್ದೇಶಿಸಲಿದ್ದು , ವಿ೪ನ್ಯೂಸ್ ಸಿ ಪಿ ಎಲ್ ಖ್ಯಾತಿಯ ಸಾಕ್ಷಿ ಕಲಾವಿದೆರ್ ತಂಡದ ಸಾರಥಿ ಶುಭಕರ್ ಬೆಳಪು ಅವರು ಸಂಗೀತ ನೀಡಲಿದ್ದಾರೆ .

ಇದರ ಪ್ರಯುಕ್ತ ದುಬೈಯ ಫಾರ್ಚ್ಯೂನ್ ಪ್ಲಾಜಾ ಹೋಟೆಲ್ ನ ಬ್ಯಾಂಕೆಟ್ ಸಭಾಂಗಣ ದಲ್ಲಿ ಫೆಬ್ರವರಿ 8 ಶನಿವಾರ ಸಂಜೆ 6 ಗಂಟೆಗೆ ಕರೆಯೋಲೆ ಪ್ರತಿ ಹಾಗು ಟಿಕೆಟ್ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು .

ಅಬುಧಾಬಿ ಕರ್ನಾಟಕ ಸಂಘ ಅಧ್ಯಕ್ಸರಾದ ಸರ್ವೋತ್ತಮ ಶೆಟ್ಟಿ , ಬಿಲ್ಲವಾಸ್ ದುಬೈ ಇದರ ಪೂರ್ವ ಅಧ್ಯಕ್ಷರಾದ ಸತೀಶ್ ಪೂಜಾರಿ , ಮೆರಿಟ್ ಫ್ರೆಯ್ಟ್ ಸಂಸ್ಥೆಯ ಮಾಲಕರಾದ ಜೋಸೆಫ್ ಮಥಾಯಿಸ್ , ಗಮ್ಮತ್ ಕಲಾವಿದೆರ್ ನ ಮಹಾ ಪೋಷಕರಾದ ಹರೀಶ್ ಬಂಗೇರ , ಬಾಲ ಸಾಲಿಯಾನ್ , ನಾವೆಲ್ ಡಿ ಅಲ್ಮೇಡಾ ಹಾಗು ಸುಧಾಕರ್ ರಾವ್ ಪೇಜಾವರ್ ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು

ದೀಪ ಬೆಳಗುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು . ಗಮ್ಮತ್ ಕಲಾವಿದೆರ್ ನ ಅಧ್ಯಕರಾದ ಕಿರಣ್ ಶೆಟ್ಟಿ ಯವರು ಮಾತನಾಡಿ ” ಈ ವರ್ಷ ನಾವು ಪ್ರದರ್ಶಿಸುವ ದಾದಾ ಮಲ್ಪೆರೆ ಆಪುಂಡು ? ನಾಟಕ ಹಾಸ್ಯಮಯ ನಾಟಕವಾಗಿದ್ದು , ತುಳು ನಾಟಕ ಪ್ರೇಮಿಗಳನ್ನು ರಂಜಿಸುವ ಭರವಸೆ ಇದೆ ಇದಕ್ಕೆ ಎಲ್ಲ ನಾಟಕ ಪ್ರೇಮಿಗಳ ಸಹಕಾರ ನಮಗೆ ಬೇಕು ” ಎಂದರು .

ಈ ಸಂದರ್ಭ ದಲ್ಲಿ ಮಾತನಾಡಿದ ಜೋಸೆಫ್ ಮಾತಾಯಿಸ್ ಅವರು ” ಇತ್ತೀಚಿನ ದಿನಗಳಲ್ಲಿ ತುಳು , ಕೊಂಕಣಿ , ಕನ್ನಡ , ಬ್ಯಾರಿ ಭಾಷೆ ಗಳು ಮಾಯವಾಗುತ್ತಿದೆ ಇದಕ್ಕೆ ಕಾರಣ ನಾವು ಆಂಗ್ಲ ಭಾಷೆಯ ಕಡೆಗೆ ಆಕರ್ಷಿತರಾಗುತ್ತಿದ್ದೇವೆ .ನಮ್ಮ ಸಂಸೃತಿ ಯನ್ನು ಉಳಿಸಿ ಬೆಳೆಸಬೇಕು . ಗಮ್ಮತ್ ಕಲಾವಿದೆರ್ ಈ ನಿಟ್ಟಿನಲ್ಲಿ ಮಾಡುತ್ತಿರುವ ಈ ಸೇವೆಗೆ ಎಲ್ಲರು ಪ್ರೋತ್ಸಾಹಿಸಬೇಕು ” ಎಂದರು.

ನಂತರ ಮಾತನಾಡಿದ ಸತೀಶ್ ಪೂಜಾರಿಯವರು ” ಕಳೆದ ೮ ವರ್ಷಗಳಿಂದ ಗಮ್ಮತ್ ಕಲಾವಿದೆರ್ ಬೇರೆ ಬೇರೆ ನಾಟಕಗಳನ್ನು ಪ್ರದರ್ಶಿಸಿ ಯು ಏ ಇ ಯಲ್ಲಿನ ನಾಟಕ ಪ್ರ್ತೆಮಿಗಳನ್ನು ಮನರಂಜಿಸುವಲ್ಲಿ ಮಾತ್ರವಲ್ಲ ಓಮನ್ , ಕುವೈಟ್ ಹಾಗು ಮಂಗಳೂರಿನ ಕಲಾಪ್ರೇಮಿಗಳ ಮನಸಲ್ಲಿ ಉತ್ತಮ ಸ್ಥಾನ ಗಳಿಸುವಲ್ಲಿ ಯಶಸ್ವಿ ಯಾಗಿ್ದ್ದಾರೆ . ಇವರ ಈ ವರ್ಷದ ನಾಟಕಕ್ಕೆ ನನ್ನಿಂದ ಆಗುವ ಎಲ್ಲ ಸಹಾಯ ಮಾಡುತ್ತೇನೆ ” ಎಂದು ಹೇಳಿದರು .

ಬಳಿಕ ನಾಟಕ ಪ್ರದರ್ಶನದ ಕರೆಯೋಲೆ ಪ್ರತಿಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಸರಾದ ಸರ್ವೋತ್ತಮ ಶೆಟ್ಟಿ ಯವರು ಬಿಡುಗಡೆ ಮಾಡಿದರು , ಟಿಕೇಟನ್ನು ಮಾಧ್ಯಮಕ್ಕೆ ವೇದಿಕೆಯಲ್ಲಿದ್ಧ ಎಲ್ಲ ಗಣ್ಯ ಅಥಿತಿಗಳು ಸೇರಿ ಬಿಡುಗಡೆ ಮಾಡಿದರು. ಬಿಡುಗಡೆ ನಂತರ ಮೊದಲ ಟಿಕೆಟನ್ನು ಸರ್ವೋತ್ತಮ ಶೆಟ್ಟಿಯವರು ಖರೀದಿ ಮಾಡುವ ಮೂಲಕ ಮಾರಟಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸರ್ವೋತ್ತಮ್ ಶೆಟ್ಟಿ ಅವರು ” ಗಮ್ಮತ್ ಕಲಾವಿದೆರ್ ಇವರು ಈಗಾಗಲೇ ದೇಶ ವಿದೇಶಗಳಲ್ಲಿ ಹಲವಾರು ನಾಟಕ ಪ್ರದರ್ಶನ ಮಾಡಿ ತುಳು ನಾಟಕ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ . ಕಳೆದ ವರ್ಷ ಅಕ್ಟೋಬರ್ ನಲ್ಲಿ ಮಂಗಳೂರಿನ ಟೌನ್ ಹಾಲ್ ನಲ್ಲಿ ಗಮ್ಮತ್ ಕಲಾವಿದೆರ್ ಪ್ರದರ್ಶಿಸಿದ ಬಯ್ಯ ಮಲ್ಲಿಗೆ ನಾಟಕವು ಈಗಲೂ ಎಲ್ಲರ ಮನಸಲ್ಲಿ ಅಳಿಯದೆ ಉಳಿದಿದೆ . ಪ್ರತಿಯೊಬ್ಬ ನಟ ನಟಿಯರು ತುಂಬ ಅದ್ಭುತವಾಗಿ ಬಯ್ಯ ಮಲ್ಲಿಗೆಯನ್ನು ನಾಟಕ ಪ್ರೇಮಿಗಳ ಮುಂದೆ ಪ್ರದರ್ಶಿಸಿದ್ದಾರೆ . ಈ ವರ್ಷದ ನಾಟಕ ದಾದಾ ಮಲ್ಪೆರೆ ಆಪುಂಡು ಇದು ಚೆನ್ನಾಗಿ ಮೂಡಿ ಬರಲಿ ಅದಕ್ಕೆ ಎಲ್ಲ ತುಳು ನಾಟಕ ಪ್ರೇಮಿಗಳ ಸಹಕಾರ ಅತಿ ಅಗತ್ಯ ” ಎಂದರು .

ನಾಟಕದ ನಿರ್ದೇಶಕರಾದ ವಿಶ್ವನಾಥ್ ಶೆಟ್ಟಿ ಯವರು ಮಾತನಾಡಿ ” ನಾಟಕ ಉತ್ತಮ ರೀತಿಯಲ್ಲಿ ಮೂಡಿ ಬರಲು ಎಲ್ಲ ಕಲಾವಿದರು ಬಹಳ ಪರಿಶ್ರಮ ಪಡುತ್ತಿದ್ದಾರೆ . ನಾಟಕದ ಯಶಸ್ವಿಗೆ ಎಲ್ಲ ಕಾಲ ಪೋಷಕರು , ಕಲಾಭಿಮಾನಿಗಳ ಸಹಕಾರ ಬೇಕು ” ಎಂದರು .

ಅನಂತರ ಮಾತನಾಡಿದ ಗಮ್ಮತ್ ಕಲಾವಿದೆರ್ ನ ಮಹಾ ಪೋಷಕರಾದ ಹರೀಶ್ ಬಂಗೇರ ಅವರು ” ಗಮ್ಮತ್ ಕಲಾವಿದೆರ್ ಗೆ ನನ್ನ ಸಹಕಾರ ಎಂದು ಇದೆ . ಈ ನಾಟಕ ತುಂಬ ಉತ್ತಮ ರೀತಿಯಲ್ಲಿ ಮೂಡಿ ಬರಲಿ ” ಎಂದು ಆರೈಸಿದರು .

ಕಾರ್ಯಕ್ರಮದ ಕೊನೆಗೆ ಗಮ್ಮತ್ ಕಲಾವಿದೆರ್ ನ ಕಾರ್ಯದರ್ಶಿ ಜಾನೆಟ್ ಸಿಕ್ವೇರಾ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯ ಅಥಿತಿಗಳಿಗೆ ಹಾಗು ನೆರೆದ ಎಲ್ಲ ಸಭಿಕರಿಗೆ ಧನ್ಯವಾದ ಸಮರ್ಪಿಸಿದರು .ಕಾರ್ಯಕ್ರಮವನ್ನು ರಾಜೇಶ್ ಕುತ್ತಾರ್ ಅವರು ನಿರೂಪಿಸಿ ಕೊಟ್ಟರು .

Comments are closed.