ಗಲ್ಫ್

ಕುವೈತ್ ಕನ್ನಡ ಕೂಟ – 2020ರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು

Pinterest LinkedIn Tumblr

ಕುವೈಟ್: ಕಳೆದ 35 ವರ್ಷಗಳಿಂದ ಕುವೈತ್‌ನಲ್ಲಿ ಅಸ್ತಿತ್ವದಲ್ಲಿರುವ ಭಾರತದ, ಕರ್ನಾಟಕ ರಾಜ್ಯ ಮೂಲದ ಸಾಮಾಜಿಕ, ಸಾಂಸ್ಕೃತಿಕ ಸಂಘವಾದ ಕುವೈತ್ ಕನ್ನಡ ಕೂಟದ (ಕು.ಕ.ಕೂ.) ವಾರ್ಷಿಕ ಮಹಾಸಭೆಯನ್ನು 2019 ರ ಡಿಸೆಂಬರ್ 28 ರಂದು ಖೈತಾನ್‌ನ ಭಾರತೀಯ ಸಮುದಾಯ ಶಾಲೆಯಲ್ಲಿ ನೆಡೆಸಲಾಯಿತು.

ಮಹಾಸಭೆಯ ಜೊತೆಜೊತೆಗೆ ವಿವಿಧ ವಿನೋದಾವಳಿಯನ್ನೊಳಗೊಂಡ ಕಾರ್ಯಕ್ರಮದಲ್ಲಿ, 2020 ರ ಕೂಟದ ನಿರ್ವಹಣೆಯ ಮೇಲ್ವಿಚಾರಣೆ ನೆಡೆಸಲು ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಿಎ ಗುರುರಾಜ್ ರಾವ್ ಅವರು ಸರ್ವಾನುಮತದಿಂದ ಚುನಾಯಿತರಾದ ಸದಸ್ಯರನ್ನು ಘೋಷಿಸಿದರು.

ಅಧ್ಯಕ್ಷರು: ಶ್ರೀ ರಾಜೇಶ ವಿಟ್ಟಲ್
ಉಪಾಧ್ಯಕ್ಷರು: ಶ್ರೀ ಸಂದೀಪ್ ಚಬ್ಬಾ
ಕಾರ್ಯದರ್ಶಿ: ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ
ಖಜಾಂಚಿ: ಶ್ರೀ ಪ್ರದೀಪ್ ರಾವ್ ಆಳುಗ್ಗೇಲು
ಚುನಾಯಿತರಾದ ಸದಸ್ಯರು 2020 ರ ವರ್ಷಕ್ಕೆ ಕುವೈತ್ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಭೆಯಲ್ಲಿ ನೆರೆದ ಸದಸ್ಯರು ಅಧಿಕಾರ ಪದಗ್ರಹಣ ಮಾಡಿದ ಹೊಸ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.

Comments are closed.