ಗಲ್ಫ್

ದುಬೈಯಲ್ಲಿ ಡ್ರೈವಿಂಗ್ ಲೈಸನ್ಸ್ ಕೊಡಿಸುವಲ್ಲಿ ಪ್ರವಾಸಿಗರ ಪಾಲಿಗೆ ಆಶಾಕಿರಣವಾಗಿರುವ ತರಬೇತುದಾರ ಮಂಗಳೂರಿನ ಝಕರಿಯ; ಸಾಧನೆ ಬಗ್ಗೆ ಒಂದಿಷ್ಟು ….

Pinterest LinkedIn Tumblr

ನಟಿ ದೀಕ್ಷಿತ ಆಚಾರ್ಯರಿಗೆ ಲೈಸನ್ಸ್ ಕೊಡಿಸಿದ ಸಂತಸದ ಕ್ಷಣ

ದುಬೈ: ಗಲ್ಫ್ ರಾಷ್ಟ್ರಗಳಲ್ಲಿ, ಅದರಲ್ಲಿಯೂ ಯುಎಇಯಲ್ಲಿ ವಾಹನ ಚಲಾಯಿಸಲು ಲೈಸನ್ಸ್(ಪರವಾನಗಿ) ಪಡೆಯುವುದಕ್ಕೆ ಪ್ರವಾಸಿಗರು ಪಡುವ ಕಷ್ಟ ಅಷ್ಟಿಷ್ಟಲ್ಲ. ಲೈಸನ್ಸ್ ಒಬ್ಬನಿಗೆ ಸಿಕ್ಕಿತೆಂದರೆ ಅದು ಆತನ ಪುಣ್ಯ. ಲೈಸನ್ಸ್ ಪಡೆಯಲು ಹತ್ತಾರು ಬಾರಿ ಚಾಲನಾ ಟೆಸ್ಟ್(ಪರೀಕ್ಷೆ) ನೀಡಿದರೂ ಪಾಸಾಗುವುದು ಇಲ್ಲಿ ಅಷ್ಟು ಸುಲಭದ ಮಾತಲ್ಲ. ಇಂಥ ಸಂದರ್ಭದಲ್ಲಿ ಪ್ರವಾಸಿಗರ ಪಾಲಿಗೆ ಲೈಸನ್ಸ್ ಕೊಡಿಸುವಲ್ಲಿ ಆಶಾಕಿರಣವಾಗಿರುವುದು ಚಾಲನಾ ತರಬೇತುದಾರ ಮಂಗಳೂರು ಮೂಲದ ಝಕರಿಯ ಅಬ್ದುಲ್ ರೆಹ್ಮಾನ್ !

ಕಳೆದ 4 ವರ್ಷಗಳ ಹಿಂದೆ ದುಬೈಯ ಚಾಲನಾ ತರಬೇತುದಾರ(Driving Instructor) ಝಕರಿಯ ಅಬ್ದುಲ್ ರೆಹ್ಮಾನ್ ಅವರ ಸಾಧನೆ ಬಗ್ಗೆ ‘ಕನ್ನಡಿಗವರ್ಲ್ಡ್’ ವಿಸ್ತೃತವಾದ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಅದು ಅವರ ಸಾಧನೆಗೆ ಇನ್ನಷ್ಟು ಹುರುಪು ತುಂಬಿತ್ತು. ಜೊತೆಗೆ ಸಾವಿರಾರು ಮಂದಿ ಪ್ರವಾಸಿಗರು ಝಕರಿಯ ಅಬ್ದುಲ್ ರೆಹ್ಮಾನ್ ಅವರ ಬಳಿ ಚಾಲನಾ ತರಬೇತಿ ಪಡೆದು ವಿವಿಧ ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ದುಬೈಯ ಅಲ್‌ವಾಸ್ಲ್ ರಸ್ತೆಯಲ್ಲಿರುವ ಬೆಲ್ಹಾಸ ಡ್ರೈವಿಂಗ್ ಸೆಂಟರ್‌ನಲ್ಲಿ ನುರಿತ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಝಕರಿಯ ಬಹುತೇಕರಿಗೆ ಚಿರಪರಿಚಿತ ವ್ಯಕ್ತಿ.

ಅಷ್ಟಕ್ಕೂ ಝಕರಿಯ ಅಬ್ದುಲ್ ರೆಹ್ಮಾನ್ ಅವರ ಸಾಧನೆ ಏನು…?
ಯುಎಇಯಲ್ಲಿ ಪ್ರವಾಸಿಗರು ಲೈಸನ್ಸ್ ಪಡೆಯುವುದು ಒಂದು ದೊಡ್ಡ ಸವಾಲಾಗಿದ್ದು, ಭಾರದ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಲೈಸನ್ಸ್ ಸಿಗುವುದು ಅಷ್ಟು ಸುಲಭವಲ್ಲ. ಲೈಸನ್ಸ್ ಪಡೆಯುವುದಕ್ಕೆ ನಾಲ್ಕೈದು ಬಗೆಯ ಪರೀಕ್ಷೆ ನೀಡಬೇಕು, ಅದಾದ ಬಳಿಕ RTA (ರೋಡ್ ಟ್ರಾನ್ಸ್‌ಪೋರ್ಟ್ ಅಥಾರಿಟಿ) ಅಧಿಕಾರಿಗಳೇ ಖುದ್ದಾಗಿ ವಾಹನದಲ್ಲೇ ಕೂತು ಚಾಲಕನ ಚಾಲನಾ ಕೌಶಲ್ಯವನ್ನು ಪರೀಕ್ಷಿಸುತ್ತಾರೆ. ಒಂದು ಸಣ್ಣ ತಪ್ಪು ಕಂಡರೂ ಫೇಲ್ ಮಾಡುತ್ತಾರೆ. ಹೀಗೆ ಲೈಸನ್ಸ್ ಪಡೆಯಲು ಮತ್ತೆ ಮತ್ತೆ ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇರಬೇಕಾಗುತ್ತೆ. ಕೆಲವೊಮ್ಮೆ 10 -15 ಬಾರಿ ಪರೀಕ್ಷೆ ನೀಡಿದರೂ ಲೈಸನ್ಸ್ ಸಿಗಲ್ಲ. ಇಂಥ ಸನ್ನಿವೇಶದಲ್ಲಿ ಝಕರಿಯ ಅಬ್ದುಲ್ ರೆಹ್ಮಾನ್ ಅವರು ನೀಡುವ ತರಬೇತಿ ಪ್ರವಾಸಿಗರನ್ನು ಪಾಸ್ ಮಾಡುತ್ತಿದೆ. ಅದು ಕೂಡ ಮೊದಲ ಪರೀಕ್ಷೆಯಲ್ಲಿಯೇ(ಫೈನಲ್ ಟೆಸ್ಟ್) !

ಝಕರಿಯ ಅಬ್ದುಲ್ ರೆಹ್ಮಾನ್ ಬಳಿ ಚಾಲನಾ ತರಬೇತಿ ಪಡೆಯುವವರು ತಮ್ಮ ಮೊದಲ ಚಾಲನಾ ಪರೀಕ್ಷೆಯಲ್ಲಿಯೇ(ಫೈನಲ್ ಟೆಸ್ಟ್) ಪಾಸಾಗುತ್ತಿದ್ದು, ಇದೇ ಝಕರಿಯ ಅಬ್ದುಲ್ ರೆಹ್ಮಾನ್ ಅವರ ಬಹಳ ದೊಡ್ಡ ಸಾಧನೆಯಾಗಿದೆ. ಇವರ ಬಳಿ ತರಬೇತಿ ಪಡೆದವರಲ್ಲಿ ಬಹುಪಾಲು ಮಂದಿಗೆ ಮೊದಲ ಪರೀಕ್ಷೆಯಲ್ಲಿಯೇ ಲೈಸನ್ಸ್ ಸಿಕ್ಕಿದೆ, ಸಿಗುತ್ತಿದೆ. ಅಂತ ಚಾಕಚಕ್ಯತೆ ಝಕರಿಯ ಅಬ್ದುಲ್ ರೆಹ್ಮಾನ್ ಅವರಲ್ಲಿದೆ. ಅವರು ನೀಡುವ ತರಬೇತಿ ಕೂಡ ಅತುತ್ತಮವಾಗಿರುತ್ತೆ. ಸುಮಾರು 4 ಸಾವಿರಕ್ಕೂ ಮಿಕ್ಕಿ ಜನರಿಗೆ ಲೈಸನ್ಸ್ ಕೊಡಿಸಿದ ಕೀರ್ತಿ ಇವರದ್ದಾಗಿದೆ.

ತರಬೇತಿ ಪಡೆಯುವವರ ಬಳಿ ಬಹಳ ಸೌಜನ್ಯತೆಯಿಂದ ವ್ಯವಹರಿಸುವ ಝಕರಿಯ, ಮಂಗಳೂರಿನ ಜೆಪ್ಪುವಿನವರಾಗಿದ್ದು, ಕಳೆದ 28 ವರ್ಷಗಳಿಂದ ದುಬೈಯಲ್ಲಿ ವಾಹನ ಚಾಲಕ ತರಬೇತುದಾರರಾಗಿ ಸೇವೆಸಲ್ಲಿಸುತ್ತಿದ್ದು, ಇವರು ನೀಡುವ ತರಬೇತಿ ವಿಶೇಷವಾಗಿದೆ. 13 ವರ್ಷಗಳಿಂದ ದುಬೈಯ ಅಲ್‌ವಾಸ್ಲ್ ರಸ್ತೆಯಲ್ಲಿರುವ ಬೆಲ್ಹಾಸ ಡ್ರೈವಿಂಗ್ ಸೆಂಟರ್‌ನಲ್ಲಿ ಹಿರಿಯ ಚಾಲನಾ ತರಬೇತುದಾರರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರ ಸಾಧನೆಗೆ ಬೆಲ್ಹಾಸ ಡ್ರೈವಿಂಗ್ ಸೆಂಟರ್‌’ನವರೇ ಹಲವು ಬಾರಿ ಸನ್ಮಾನಿಸಿ ಗೌರವಿಸಿದ್ದಾರೆ.

ಝಕರಿಯ್ಯರನ್ನು ಸಂಪರ್ಕಿಸಲು ಅವರ ಮೊಬೈಲ್ ಸಂಖ್ಯೆ 055-8632657, 050-5680633, 056-7299866ನ್ನು ಸಂಪರ್ಕಿಸಬಹುದು.

Comments are closed.