ಗಲ್ಫ್

ದುಬೈಯಲ್ಲಿ ಭೀಕರವಾಗಿ ಅಪಘಾತಕ್ಕೀಡಾದ ಪ್ರವಾಸಿ ಬಸ್; 17 ಮಂದಿ ಬಲಿ; 9 ಮಂದಿ ಗಂಭೀರ

Pinterest LinkedIn Tumblr

ದುಬೈ: ಇಲ್ಲಿನ ಶೇಕ್ ಮುಹಮ್ಮದ್ ಬಿನ್ ಝಯೇದ್ ರಸ್ತೆಯಲ್ಲಿ ಗುರುವಾರ ಸಂಜೆ ಪ್ರವಾಸಿಗರಿದ್ದ ಬಸ್ಸೊಂದು ಅಪಘಾತಕ್ಕೀಡಾಗಿದ್ದು, ಈ ದುರ್ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದು, 9 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ.

ಈದ್ ರಜೆ ಹಿನ್ನೆಲೆಯಲ್ಲಿ ಒಮಾನ್ ಮೂಲದ ಖಾಸಗಿ ಬಸ್ಸು ಒಟ್ಟು 31 ಮಂದಿ ವಿವಿಧ ರಾಷ್ಟ್ರೀಯತೆಯ ಪ್ರವಾಸಿಗರನ್ನು ದುಬೈಗೆ ಪ್ರವಾಸಕ್ಕೆಂದು ಕರೆದುಕೊಂಡು ಬಂದಿದ್ದು, ಸಂಜೆ 5.40 ರ ಸುಮಾರಿಗೆ ಶೇಕ್ ಮುಹಮ್ಮದ್ ಬಿನ್ ಝಯೇದ್ ರಸ್ತೆಯ ಮೂಲಕ ದುಬೈಯ ಅಲ್ ರಾಶಿದಿಯ ಮೆಟ್ರೋ ರೈಲು ನಿಲ್ದಾಣದ ಕಡೆ ಬಸ್ ಚಾಲಕ ಬಸ್ಸನ್ನು ತಿರುಗಿಸಿದ್ದು, ಈ ವೇಳೆ ಅಪಘಾತ ಸಂಭವಿಸಿದೆ.

ಸಂಚಾರದ ವೇಳೆ ರಸ್ತೆಯ ಕುರಿತು ಗೊಂದಲಕ್ಕೀಡಾದ ಬಸ್ ಚಾಲಕ ರಸ್ತೆ ಬದಿಯ ಫಲಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಒಟ್ಟು 31 ಮಂದಿಯಲ್ಲಿ 17 ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ.

ದುಬೈ ಪೋಲಿಸ್ ಕಮಾಂಡರ್ ಇನ್ ಮೇಜರ್ ಜನರಲ್ ಅಬ್ದುಲ್ಲಾ ಖಲೀಫಾ ಅಲ್ ಮರ್ರಿ ಮತ್ತು ದುಬೈ ನ್ಯಾಯಮೂರ್ತಿ ಜನರಲ್ ಇಸ್ಸಾಮ್ ಇಸ್ಸಾ ಅಲ್ ಹುಮೈದಾನ್ ಇತರ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

Comments are closed.