ಗಲ್ಫ್

ಲಂಡನ್‌ನ ಸ್ಕಾಟ್ಲೆಂಡ್ ಯಾರ್ಡ್ ಖರೀದಿಸಿ ಐಷಾರಾಮಿ ಹೋಟೆಲನ್ನಾಗಿಸಿದ ಉದ್ಯಮಿ ಯೂಸುಫ್ ಅಲಿ; ಈ ಹೋಟೆಲಿನಲ್ಲಿ ಒಂದು ದಿನದ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಿ…

Pinterest LinkedIn Tumblr

ಲಂಡನ್ನಿನ ಐತಿಹಾಸಿಕ ಮೆಟ್ರೋಪಾಲಿಟನ್ ಪೋಲಿಸ್ ಮುಖ್ಯ ಕಚೇರಿಯಾಗಿದ್ದ ಗ್ರೇಟ್ ಸ್ಕಾಟ್ಲೆಂಡ್ ಯಾರ್ಡ್ ಅನ್ನು ಖರೀದಿಸಿರುವ ಭಾರತೀಯ(ಕೇರಳ) ಮೂಲದ ದುಬೈ ಹೆಸರಾಂತ ಉದ್ಯಮಿ ಯೂಸುಫ್ ಅಲಿ, ಅದನ್ನು ಐಷಾರಾಮಿ 5 ಸ್ಟಾರ್ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ.

ಇದನ್ನು ಕಳೆದ ಮೂರು ವರ್ಷಗಳಲ್ಲಿ ಒಟ್ಟು ರು. 584,88,16,050 ಖರ್ಚು ಮಾಡಿ ನವೀಕರಿಸಲಾಗಿದ್ದು, ಇದೀಗ ವಿಶ್ವಾದ್ಯಂತ ಜನರ ಗಮನ ತನ್ನೆಡೆ ಸೆಳೆಯುವಂತ ಮಾಡಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಹೋಟೆಲ್ 153 ಕೊಠಡಿಗಳನ್ನು ಹೊಂದಿದ್ದು, ಈ ವರ್ಷದ ಕೊನೆಯಲ್ಲಿ ಶುಭಾರಂಭವಾಗಲಿದೆ. ಈ ವಿಲಾಸಿ ಹೋಟೆಲಿನಲ್ಲಿ ಪ್ರತಿ ರಾತ್ರಿ ಕಳೆಯಲು 8 ಲಕ್ಷ ರೂಪಾಯಿ ನಿಗದಿಪಡಿಸಲಾಗಿದ್ದು, ಇದು ಲಂಡನ್ನಲ್ಲಿನ ಅತ್ಯಂತ ವಿಶಿಷ್ಟ ಸ್ಥಳಗಳಲ್ಲಿ ಒಂದಾಗಿದೆ.

‘ಲುಲು’ ಸಮೂಹ ಸಂಸ್ಥೆಗಳ ಸ್ಥಾಪಕ ಎಂ.ಎ. ಯೂಸುಫ್ ಅಲಿ ಜಗತ್ತಿನ ಅತಿ ಶ್ರೀಮಂತ ಮಲಯಾಳಿಯಾಗಿ 2019ರ ‘ಫೋರ್ಬ್ಸ್ ಬಿಲಿಯನೇರ್ಸ್’ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

‘ಮಧ್ಯಪ್ರಾಚ್ಯದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ’ ಎಂದೇ ಜನಜನಿತರಾಗಿರುವ ಕೇರಳದ ತ್ರಿಶೂರ್ ನಿವಾಸಿ ಯೂಸುಫ್ ಅಲಿ, 4.8 ಬಿಲಿಯ ಡಾಲರ್ (ಸುಮಾರು 33,655 ಕೋಟಿ ರೂಪಾಯಿ) ವೈಯಕ್ತಿಕ ಸಂಪತ್ತು ಹೊಂದಿದ್ದಾರೆ ಎಂದು ‘ಫೋರ್ಬ್ಸ್’ ಹೇಳಿದೆ.

ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 394ನೇ ಸ್ಥಾನ ಪಡೆದಿದ್ದಾರೆ. 2018ರಲ್ಲಿ ಅವರು ಜಗತ್ತಿನ 26ನೇ ಅತಿ ಶ್ರೀಮಂತ ಭಾರತೀಯನಾಗಿದ್ದರು.

1829 ರಿಂದ 1890 ರ ವರೆಗೆ ಲಂಡನ್ನಿನ ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯ ಕಛೇರಿಯಾಗಿದ್ದ ಗ್ರೇಟ್ ಸ್ಕಾಟ್ಲೆಂಡ್ ಯಾರ್ಡ್ ಈಗ ಐಷಾರಾಮಿ 5 ಸ್ಟಾರ್ ಹೋಟೆಲ್ ಆಗಿ ಮಾರ್ಪಟ್ಟಿದೆ.

Comments are closed.