ಗಲ್ಫ್

ದುಬೈಗರ ಮನಸೂರೆಗೊಂಡ ದುಬೈ ಗಮ್ಮತ್ ಕಲಾವಿದರ ‘ಬಯ್ಯ ಮಲ್ಲಿಗೆ’ ನಾಟಕ

Pinterest LinkedIn Tumblr

Photo: Ashok Belman

ದುಬೈ: ‘ದುಬೈ ಗಮ್ಮತ್ ಕಲಾವಿದೆರ್’ ಆಶ್ರಯದಲ್ಲಿ ಶುಕ್ರವಾರ ದುಬೈಯ ಊದ್ ಮೇತಾದಲ್ಲಿರುವ ಇಂಡಿಯನ್ ಹೈಸ್ಕೂಲಿನ ಶೇಖ್ ರಶೀದ್ ಸಭಾಂಗಣದಲ್ಲಿ ಸಾಂಸಾರಿಕ ನಾಟಕ ‘ಬಯ್ಯ ಮಲ್ಲಿಗೆ’ ಪ್ರದರ್ಶನಗೊಂಡಿತು.

54 ವರ್ಷಗಳ ಹಿಂದೆ ಡಾ| ಸಂಜೀವ ದಂಡೆಕೇರಿ ಅವರು ಬರೆದಿರುವ, ನಂತರ ಸಿನಿಮಾ ಆಗಿಯೂ ತೆರೆಕಂಡಿರುವ ಬಯ್ಯ ಮಲ್ಲಿಗೆ ನಾಟಕವನ್ನು ‘ದುಬೈ ಗಮ್ಮತ್ ಕಲಾವಿದೆರ್’ ಸಂಘಟನೆಯ ವಿಶ್ವನಾಥ್ ಶೆಟ್ಟಿ ನಿರ್ದೇಶಿಸಿದ್ದು, ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರತಿ ವರ್ಷ ‘ದುಬೈ ಗಮ್ಮತ್ ಕಲಾವಿದೆರ್’ ನಡೆಸಿಕೊಡುವ ನಾಟಕ ಒಂದಕ್ಕಿಂತ ಒಂದು ಹಿಟ್ ಆಗುತ್ತಲೇ ಇದ್ದು, ಈ ಬಾರಿ ‘ಬಯ್ಯ ಮಲ್ಲಿಗೆ’ಯಂತೂ ನಾಟಕ ಪ್ರೇಮಿಗಳ ಮನಗೆದ್ದಿದ್ದು, ಸ್ಥಳೀಯ ಕಲಾವಿದರ ನಟನೆ ವೃತ್ತಿಪರ ಕಲಾವಿದರ ನಟನೆಯನ್ನು ಮೀರಿಸುವಂತಿತ್ತು.

ನಾಟಕ ಪ್ರದರ್ಶನಕ್ಕೂ ಮೊದಲು ನಡೆದ ಸಮಾರಂಭದಲ್ಲಿ ದುಬೈಯ ಉದ್ಯಮಿ, ನಿರ್ಮಾಪಕ ಹರೀಶ್ ಬಂಗೇರ, ಪೊರ್ಚುನ್ ಪ್ಲಾಜಾ ಹೊಟೇಲ್ ಮಾಲಕ ಪ್ರವೀಣ್ ಶೆಟ್ಟಿ, ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ದಿನೇಶ್ ಶೇರಿಗಾರ್, ಸರ್ವೋತ್ತಮ ಶೆಟ್ಟಿ, ಅಬುದಾಭಿ, ಗುಣಶೀಲ ಶೆಟ್ಟಿ, ಭಾಗ್ಯ ಪ್ರೇಮನಾಥ ಶೆಟ್ಟಿ, ಗಮ್ಮತ್ ಕಲಾವಿದೆರ್ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಸತೀಶ್ ಪೂಜಾರಿ, ವಿಶ್ವನಾಥ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

ಸಮಾಂಭದಲ್ಲಿ ಡಾ. ಸಂಜೀವ ದಂಡೆಕೇರಿ ಮತ್ತು ಜಲಜಾಕ್ಷಿ ದಂಡೆಕೇರಿ ದಂಪತಿಯನ್ನು, ರಂಗಕರ್ಮಿ ವಿ ಜಿ ಪಾಲ್ ಮತ್ತು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ ಅವರನ್ನು ಗೌರವಿಸಲಾಯಿತು. ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರ್ವಹಿಸಿದರು.

Comments are closed.