ಅಂತರಾಷ್ಟ್ರೀಯ

ಯಮನ್​​: ಸರಕಾರಿ ಪಡೆಗಳು, ಬಂಡುಕೋರರ ನಡುವೆ ಭೀಕರ ಕಾಳಗಕ್ಕೆ 149 ಮಂದಿ ಸಾವು!

Pinterest LinkedIn Tumblr

ಹುದೈದಾ: ಯಮನ್​​ ದೇಶದ ​​ಹುದೈದಾ ನಗರದಲ್ಲಿ ಭೀಕರ ಕಾಳಗ ಸಂಭವಿಸಿದೆ. ಸರಕಾರಿ ಪಡೆಗಳು ಮತ್ತು ಬಂಡುಕೋರರ ನಡುವೆ ನಡೆದ ಸಂಘರ್ಷದಲ್ಲಿ ಬರೋಬ್ಬರಿ 149 ಮಂದಿ ಸಾವನ್ನಪ್ಪಿದ್ದಾರೆ. ಈ ಕಾಳಗ ಕೇವಲ 24 ಗಂಟೆ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಸ್ಥಳಿಯರನ್ನು ಬಲಿತೆಗೆದುಕೊಂಡಿದೆ ಎನ್ನುತ್ತಿವೆ ವೈದ್ಯಕೀಯ ಮತ್ತು ಸೇನಾ ಮೂಲಗಳು.

ಹುದೈದಾದ ಪ್ರಮುಖ ಬಂದರು ಪ್ರದೇಶಗಳಲ್ಲಿ ಏಳು ಮಂದಿ ನಾಗರಿಕರೂ ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ. ನಿನ್ನೆ(ಭಾನುವಾರ) ರಾತ್ರಿ ನಡೆದ ಸಂಘರ್ಷದಲ್ಲಿ 110 ಮಂದಿ ಬಂಡುಕೋರರು ಹಾಗೂ 32 ಸರ್ಕಾರದ ನಿಷ್ಠಾವಂತ ಅಧಿಕಾರಿಗಳು ಸಾವನ್ನಪ್ಪಿದ್ಧಾರೆ. ಅಲ್ಲದೇ ಈ ಕುರಿತು ಸ್ಥಳೀಯ ಆಸ್ಪತ್ರೆ ಪತ್ರಿಕಾ ಪ್ರಕಟಣೆಯೂ ಮಾಡಿವೆ.

ಕಳೆದ ವಾರವೂ ಯಮನ್‌ನ ಬಂದರು ನಗರಗಳಲ್ಲಿ ನಡೆದ ಮಹಾಯುದ್ಧದಲ್ಲಿ ಡಝನ್‌ಗಟ್ಟಲೆ ಬಂಡುಕೋರರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದರು. ಇದೇ ವೇಳೆ ಸರ್ಕಾರದ ಪರವಾಗಿ ಯುದ್ದದಲ್ಲಿ ತೊಡಗಿಸಿಕೊಂಡಿರುವ ಸೇನಾ ಪಡೆಯ ಮುಖಂಡರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದರು.

ಮುರಿದು ಬಿದ್ದ ಮಾತುಕತೆ: ಒಮ್ಮೆ ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ಶಾಂತಿಯ ಮಾತುಕತೆ ನಡೆಯಿತು. ಈ ವೇಳೆ ಮಾತುಕತೆ ಮುರಿದು ಬಿದ್ದಿತ್ತು. ಬಳಿಕ ಯಮನ್‌ನ ಕೆಂಪು ಸಮುದ್ರ ಬಂದರು ನಗರ ಹುದೈದಾ ಸುತ್ತಮುತ್ತ ಪ್ರದೇಶಗಳಲ್ಲಿ ಭಾರೀ ಕಾಳಗ ನಡೆಯಿತ್ತು. ಇಲ್ಲಿ ನಡೆದ ವಾಯು ದಾಳಿಗಳಲ್ಲಿ 84 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಹೌದಿದ ಬಂಡುಕೋರರ ನಿಯಂತ್ರಣದಲ್ಲಿರುವ ಹುದೈದಾ ಪ್ರಾಂತದಲ್ಲಿ ನಿರಂತರ ಕಾಳಗ ನಡೆಯುತ್ತಿರುತ್ತದೆ. ಆಹಾರ ಸೇರಿದಂತೆ ಹಲವು ವಸ್ತುಗಳ ಆಮದು-ರಪ್ತು ಮಾಡಲು ನೆರವಾಗಿರುವ ಯಮನ್‌ ದೇಶಕ್ಕಾಗಿ ಭಾರಿ ಕಾದಾಟ ನಡೆಯುತ್ತಿದೆ. ಸುಮಾರು ಶೇ.70 ಆಮದುಗೆ ಪ್ರವೇಶ ದ್ವಾರವಾಗಿರುವ ಹುದೈದಾ ರಾಜ್ಯವನ್ನು ವಶಪಡಿಸಿಕೊಳ್ಳಲು ಸೌದಿ ಅರೇಬಿಯ ಮತ್ತು ಯುಎಇಗಳನ್ನೊಳಗೊಂಡ ಅರಬ್ ಮಿತ್ರಕೂಟ ನಡುವೇ ನಿರಂತರ ವಾಯುದಾಳಿಗಳು ಸಂಭವಿಸುತ್ತವೆ.

Comments are closed.