ಗಲ್ಫ್

‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಯುಎಇ-ಒಮಾನಿನಲ್ಲಿ ಸೆಪ್ಟೆಂಬರ್ 20 ಬಿಡುಗಡೆ

Pinterest LinkedIn Tumblr

ಇತ್ತೀಚಿಗೆ ಬಿಡುಗಡೆಯಾಗಿ ಸಿನಿ ಪ್ರೇಕ್ಷಕರ ಮನಗೆದ್ದಿರುವ ಸೂಪರ್ ಹಿಟ್ ಕನ್ನಡ ಚಿತ್ರ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಯುಎಇ ಮತ್ತು ಒಮಾನಿನಲ್ಲಿ ಸೆಪ್ಟೆಂಬರ್ 20 ಮತ್ತು 26 ರಂದು ಬಿಡುಗಡೆಗೊಳ್ಳಲಿದೆ.

ಕನ್ನಡದ ಖ್ಯಾತ ಹಿರಿಯ ನಟ ಅನಂತ್ ನಾಗ್ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದಾರೆ.

ಮಲಯಾಳಿ ಪ್ರಭಾವ ಜಾಸ್ತಿ ಇರುವ ಕಾಸರಗೋಡಿನ ಗಡಿ ಭಾಗದಲ್ಲಿರುವ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟವನ್ನು ಸಿನಿಮಾದಲ್ಲಿ ತೋರಿಸಲಾಗಿದ್ದು, ಈಗಾಗಲೇ ಇದು ಕನ್ನಡಿಗರ ಮನಗೆದ್ದಿದೆ.

*Tickets now available online @ Novo Cinemas, Star Cinemas, Oscar Cinemas*
To get updates about kannada movies, Whatsapp your email id to +971504788956

Comments are closed.