ಗಲ್ಫ್

ಯುಎಇ-ಒಮಾನಿನಲ್ಲಿ ಯಶಸ್ವಿನ ಪ್ರದರ್ಶನ ಕಾಣುತ್ತಿರುವ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಿತ್ರ

Pinterest LinkedIn Tumblr

ದುಬೈ: ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ ನಟ ಅನಂತ್‌ ನಾಗ್‌ ಮತ್ತು ರಾಧಿಕಾ ಚೇತನ್‌ ಪ್ರಮುಖ ಭೂಮಿಕೆಯಲ್ಲಿರುವ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರಕ್ಕೆ ಗಲ್ಫಿನಲ್ಲಿ ಕೂಡ ಕನ್ನಡ ಸಿನಿ ರಸಿಕರು ಜೈ ಅಂದಿದ್ದಾರೆ.

ಗುರುವಾರ ಯುಎಇ ಹಾಗು ಒಮಾನಿನಲ್ಲಿ ಬಿಡುಗಡೆಗೊಂಡಿರುವ ಸಿನೆಮಾ ಯಶಸ್ವಿನ ಪ್ರದರ್ಶನ ಕಾಣುತ್ತಿದ್ದು, ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಸಿನೆಮಾವನ್ನು ಕಲರ್ಸ್‌ ಆಫ್ ಆನೇಕಲ್‌ ಹೆಸರಿನಲ್ಲಿ ಸುದರ್ಶನ್‌, ರಾಮಮೂರ್ತಿ ಹಾಗು ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಮತ್ತು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್‍ನ್ಯಾಷನಲ್ ಬ್ಯಾನರ್‍ನಡಿಯಲ್ಲಿ ನಿರ್ಮಿಸಲಾಗಿದೆ.

ನಿರ್ದೇಶಕ ನರೇಂದ್ರ ಬಾಬು ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯ ಇರುವ ಈ ಚಿತ್ರಕ್ಕೆ ಪಿ.ಕೆ ಎಚ್. ದಾಸ್‌’ರ ಛಾಯಾಗ್ರಹಣವಿದ್ದು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಿನ್ನಲೆ ಇರುವ ರಾಮಚಂದ್ರ ಹಡಪದ ಸಂಗೀತಕ್ಕೆ ಜನ ಮನಸೋತಿದ್ದಾರೆ.

ದುಬೈಯ IBN ಬಟ್ಟುತಾ ಮಾಲ್, ಡ್ರ್ಯಾಗನ್ ಮಾರ್ಟ್’ನ ನೋವಾ ಸಿನೆಮಾ, ದೇರಾ ಸಿಟಿಸೆಂಟರ್ ಮತ್ತು ಶಿಂದಘ ವಾಕ್ಸ್ ಸಿನೆಮಾ, ಶಾರ್ಜಾದ ಸ್ಟಾರ್ ಸಿನೆಪ್ಲೆಸ್, ಮೆಗಾ ಮಾಲ್’ನ ನೋವಾ ಸಿನೆಮಾ, ಸಿಟಿಸೆಂಟರಿನ ವಾಕ್ಸ್ ಸಿನೆಮಾ, ಅಬುಧಾಬಿಯ ಮುಸ್ಸಫಾಹ್ ಗ್ರಾಂಡ್ ಸಫೀರ್ ಸಿನೆಮಾಸ್, ಅಲ್ ವ್ಹಾದ ಸ್ಟಾರ್ ಆಸ್ಕರ್ ಮತ್ತು ಸ್ಟಾರ್ ನ್ಯಾಷನಲ್ ಸಿನೆಮಾ ಹಾಗು ಒಮಾನ್ ಮಸ್ಕತ್ತಿನ CBD ರುವಿಯ ಸ್ಟಾರ್ ಸಿನೆಮಾಸಿನಲ್ಲಿ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸಿನೆಮಾದ ಬಗ್ಗೆ ಜನ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ವಿಭಿನ್ನ ಕಥೆ, ನಟ ಅನಂತ್‌ ನಾಗ್‌ ಮತ್ತು ರಾಧಿಕಾ ಚೇತನ್‌ ಅವರ ಮನೋಜ್ಞ ಅಭಿನಯಕ್ಕೆ ಫಿದಾ ಆಗಿರುವ ಯುಎಇ ಹಾಗು ಒಮಾನಿನ ಕನ್ನಡಿಗರು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಿನೆಮಾ ಎರಡು ಜನರೇಷನ್ ಕಥೆ ಹೊಂದಿದೆ. ಒಂದು ಅನಂತ್ ‌ನಾಗ್‌ ಅವರ ಕಥೆ ಸಾಗಿದರೆ, ಇನ್ನೊಂದು ರಾಧಿಕಾ ಚೇತನ್ ಜನರೇಷನ್ ಕಥೆ ತೆರೆದುಕೊಳ್ಳುತ್ತೆ. ಮುಖ್ಯವಾಗಿ ಲಿವಿಂಗ್‌ರಿಲೇಷನ್ ‌ಶಿಪ್‌ ಕುರಿತಾದ ಹೂರಣವಿದೆ. ಈ ಎರಡೂ ಕಥೆಗಳಲ್ಲಿ ಸೂಕ್ಷ್ಮತೆಗಳಿವೆ. ಭದ್ರತೆ, ಅಭದ್ರತೆ ಕುರಿತಾದ ಅಂಶಗಳು ಚಿತ್ರದಲ್ಲಿವೆ.

ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್‍ನ್ಯಾಷನಲ್ ಬ್ಯಾನರ್‍ನಡಿಯಲ್ಲಿ ನಿರ್ಮಿಸಲಾಗಿರುವ ‘ಮಾರ್ಚ್-22 ‘ ಈ ಹಿಂದೆ ಯುಎಇ ಹಾಗು ಒಮಾನಿನಲ್ಲಿ ಭರ್ಜರಿ ಹಿಟ್ ಕಂಡಿತ್ತು.

ನೋವಾ ಸಿನೆಮಾ, ವಾಕ್ಸ್ ಸಿನೆಮಾ, ಅಬುಧಾಬಿಯ ಸ್ಟಾರ್ ಸಿನೆಮಾ, ಆಸ್ಕರ್ ಸಿನೆಮಾ ಹಾಗು ಒಮಾನಿನ ಸ್ಟಾರ್ ಸಿನೆಮಾ ಮಂದಿರಗಳಲ್ಲಿಈಗಾಗಲೇ ಆನ್ ಲೈನ್ ಟಿಕೆಟ್ ಬುಕಿಂಗ್ ಆರಂಭವಾಗಿದೆ.

https://www.novocinemas.com/uae/movies/hottegaagi-genu-battegagi/

https://uae.voxcinemas.com/movies/hottegaagi-genu-battegagi-kanada#showtimes

https://www.starcinemas.ae/Movie_Info.aspx?MovieId=NjM0Ng%3d%3d-LDt4AD5LrEI%3d&Type=Q1M%3d-RHX8mGb1e9A%3d

https://oscarcinema.ae/movies/hottegagi-genu-battegagi/902

Comments are closed.