ಗಲ್ಫ್

ಲೈಂಗಿಕ ಕಿರುಕುಳ ಅಪರಾಧ: ಹೊಸ ಕಾನೂನನ್ನು ಜಾರಿಗೊಳಿಸಿದ ಸೌದಿ

Pinterest LinkedIn Tumblr

ರಿಯಾದ್‌: ಮಹಿಳೆಯರ ವಾಹನ ಚಾಲನೆಗೆ ದಶಕಗಳಿಂದ ಇದ್ದ ನಿಷೇಧವನ್ನು ರದ್ದುಪಡಿಸುವ ಮೂಲಕ ಇತ್ತೀಚೆಗೆ ಕ್ರಾಂತಿಕಾರಕ ಕ್ರಮಕ್ಕೆ ಮುಂದಾಗಿದ್ದ ಸೌದಿ ಅರೇಬಿಯಾ ಸರಕಾರ ಈಗ, ಸುಧಾರಣೆಯ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಲೈಂಗಿಕ ದೌರ್ಜನ್ಯವನ್ನು ಅಪರಾಧವೆಂದು ಪರಿಗಣಿಸುವ ಹೊಸ ಕಾನೂನನ್ನು ಸೌದಿ ಜಾರಿಗೊಳಿಸಿದ್ದು, ತಪ್ಪಿತಸ್ಥರಿಗೆ ಗರಿಷ್ಠ 5 ವರ್ಷಗಳ ಜೈಲು ಮತ್ತು ಗರಿಷ್ಠ 3 ಲಕ್ಷ ರಿಯಾಲ್‌ (ಸುಮಾರು 54 ಲಕ್ಷ ರೂ.) ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಬುಧವಾರ ಸೌದಿ ಸಚಿವ ಸಂಪುಟ ಈ ಕಾನೂನನ್ನು ಅನುಮೋದಿಸಿದೆ ಎಂದು ಸರಕಾರದ ಅಧಿಕೃತ ಮಾಧ್ಯಮ ‘ಸೌದಿ ಪ್ರೆಸ್‌ ಏಜೆನ್ಸಿ’ ತಿಳಿಸಿದೆ.

”ದೇಶದ ಕಾನೂನುಗಳ ಇತಿಹಾಸದಲ್ಲಿ ಇದು ಮಹತ್ವದ ಸೇರ್ಪಡೆ. ಇದರಿಂದ ಒಂದು ದೊಡ್ಡ ಶಾಸನಾತ್ಮಕ ನಿರ್ವಾತವನ್ನು ತುಂಬಿದಂತಾಗಿದೆ ,” ಎಂದು ಸಚಿವ ಸಂಪುಟ ಸಲಹಾ ಸಮಿತಿ ಸದಸ್ಯೆ ಲತೀಫಾ ಅಲ್‌-ಶಾಲನ್‌ ಹೇಳಿದ್ದಾರೆ.

ಹೊಸ ಹೆಜ್ಜೆ: ಸೌದಿಯ ಪ್ರಭಾವಿ ರಾಜಕುಮಾರ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರು ಇತ್ತೀಚೆಗೆ ಮಹಿಳೆಯರ ಪರವಾಗಿ ಕ್ರಾಂತಿಕಾರಿ ನೀತಿಗಳನ್ನು ಪ್ರಕಟಿಸುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ಮಂದಿರಗಳು, ಸ್ಟೇಡಿಯಂಗಳಿಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ಅವರು ರದ್ದುಪಡಿಸಿದ್ದರು. ಅಲ್ಲದೆ, ವಿವಿಧ ಮನರಂಜನಾ ಕಾರ್ಯಕ್ರಮದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೂ ಅವಕಾಶ ಕಲ್ಪಿಸಿದ್ದರು.

Comments are closed.