ಗಲ್ಫ್

ಪ್ರತಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ” ಪುರಸ್ಕೃತೆ ಬಹುಮಖ ಪ್ರತಿಭೆಯ ಕು| ವಿಭಾಲಿ ಶೆಟ್ಟಿ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಜನೆಯೊಂದಿಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಅಪ್ರತಿಮ ಸಾಧನೆ ಹಾಗೂ ವಿದ್ಯಾಕ್ಷೇತ್ರದಲ್ಲಿ ಹೊಸಕಲ್ಪನೆಯ ಅವಿಸ್ಕಾರವನ್ನು ಮಾಡುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮಿನಿಷ್ಟ್ರಿ ಆಫ್ ಎಜುಕೇಶನ್ ಯು.ಎ.ಇ. ಗುರುತ್ತಿಸಿ 1998 ರಿಂದ ಪ್ರಾರಂಭಿಸಲಾದ “ಹಮ್ದಾನ್ ಬಿನ್ ರಾಶೀದ್ ಅಲ್ ಮಕ್ತೂಮ್ ಪ್ರಶಸ್ತಿಯನ್ನು” ನೀಡುತ್ತಾ ಬರಲಾಗುತ್ತಿದೆ. ಯು.ಎ.ಇ.ಯಲ್ಲಿ ವಿವಿಧ ದೇಶದ 25 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ.

ಯು.ಎ.ಇ.ಯ ಶಾರ್ಜಾ ಅವರೊನ್ ಇಂಗ್ಲಿಷ್ ಹೈ ಸ್ಕೂಲ್ ಬಾಲಕೀಯರ ವಿಭಾಗದ ವಿದ್ಯಾಸಂಸ್ಥೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕು| ವಿಭಾಲಿ ಶೆಟ್ಟಿ 29 ಏಪ್ರಿಲ್ 2018 ರಂದು ಡೆಪ್ಯೂಟಿ ರೂಲರ್ ಆಫ್ ದುಬಾಯಿ ಗೌ| ಶೇಖ್ ಹಮ್ದಾನ್ ಬಿನ್ ರಾಶೀದ್ ಅಲ್ ಮಕ್ತೂಮ್ ಇವರಿಂದ ಪರಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ” ಯನ್ನು ದುಬಾಯಿಯಲ್ಲಿ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ವರ್ಣರಂಜಿತ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಡೆದುಕೊಂಡಿದ್ದಾಳೆ.

ಕು| ವಿಭಾಲಿ ಶೆಟ್ಟಿ ಯ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಈ ಬಾರಿ ದುಬಾಯಿ ಜೆ. ಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ಸಭಾಂಗಣದಲ್ಲಿ ನಡೆದ ಯು.ಎ.ಇ. ಬಂಟ್ಸ್ 44ನೇ ಸ್ನೇಹಮಿಲನದಲ್ಲಿ ನೀಡಲಾಗುವ 2018ನೇ ಸಾಲಿನ “ಪ್ರತಿಭಾ ಪುರಸ್ಕಾರ” ವನ್ನು ಮಹಾಪೋಷಕರಾದ ಡಾ| ಬಿ. ಆರ್. ಶೆಟ್ಟಿಯವರಿಂದ ತನ್ನ ಪೋಷಕರ ಸಮ್ಮುಖದಲ್ಲಿ ಪಡೆದುಕೊಂಡಿದ್ದಾಳೆ.

ಕು| ವಿಭಾಲಿ ಶೆಟ್ಟಿ ಬೆಳೆದು ಬಂದ ಹಾದಿ…
ಕು| ವಿಭಾಲಿ ಶೆಟ್ಟಿ ಶಾರ್ಜಾದಲ್ಲಿರುವ ರಜಬ್ ಟ್ರೇಡಿಂಗ್ ಕಂಪೆನಿಯ ವ್ಯ್ವಸ್ಥಾಪಕ ಪಾಲುದಾರರಾಗಿರುವ ಶ್ರೀ ಪ್ರಸಾದ್ ಶೆಟ್ಟಿ ಹಾಗೂ ದುಬಾಯಿಯಲ್ಲಿ ಸೀಮಾಕ್ ಕನ್ಸಲ್ಟೆಂಟ್ ನಲ್ಲಿ ಡಿಸೈನ್ ಮ್ಯಾನೇಜರ್ ಮತ್ತು ಸೀನಿಯರ್ ಆರ್ಕಿಟೆಕ್ಟ್ ಶ್ರೀಮತಿ ಸುರಕ್ಷಾ ಪ್ರಸಾದ್ ಶೆಟ್ಟಿ ಯವರ ಪುತ್ರಿಯಾಗಿದ್ದಾಳೆ.

ಕು| ವಿಭಾಲಿ ಶೆಟ್ಟಿ ಶೈಕ್ಷಣಿಕವಾಗಿ ಭಾಗವಹಿಸುವ ಎಲ್ಲಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳುವ ಚಲವಂತೆ. ಪ್ರಸ್ತುತ ವಿದ್ಯಾಸಂಸ್ಥೆಯಲ್ಲಿ ಸ್ಕೂಲ್ ಪಾರ್ಲಿಮೇಂಟ್ ನ ಸದಸ್ಯೆಯಾಗಿ ಗೌರವದ ಸ್ಥಾನ ದೊರೆತಿದೆ.

ವಿಭಾಲಿ ಗೆ ವಿವಿಧ ರಸಪ್ರಸ್ನೆಗಳು ಮತ್ತು ಯು.ಎ.ಇ. ಮಟ್ಟದ ಅಬ್ಯಾಕಸ್ ಅಂಡ್ ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೋಲ್ಡ್ ಮೆಡಲ್ ಮತ್ತು ಸಿಲ್ವರ್ ಮೆಡಲ್ ಪಡೆದಿದ್ದಾಳೆ ಹಾಗೂ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ.

ದುಬಾಯಿಯಲ್ಲಿ ನಡೆಯುವ ವಿಶ್ವ ವಿಖ್ಯಾತ ಶಾಪಿಂಗ್ ಪೆಸ್ಟಿವಲ್ ನ ಗ್ಲೋಬಲ್ ವಿಲೇಜ್ ನ ಇಂಡಿಯನ್ ಪೆವೆಲಿನ್ ನಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದಾಳೆ. ‘ಸಾಂತ್ವನಂ ಯೂತ್ ಫೆಸ್ಟ್ 2016’ ನ ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.

ಚೆಸ್ ಕ್ರೀಡೆಯಲ್ಲಿಯೂ ಎತ್ತಿದ ಕೈ ಜೊತೆಗೆ ಈಜುವುದರಲ್ಲಿ ತರಭೇತಿ ಪಡೆದಿದ್ದಾಳೆ, ಚಿತ್ರಕಲೆಯಲ್ಲಿಯೂ ಹಸ್ತಕೌಶಲ್ಯವನ್ನು ಹೊಂದಿರುವ ವಿಭಾಲಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ.

ವಿಭಾಲಿ ಉತ್ತಮ ಎಳೆಯ ವಾಗ್ಮೀ, ಕಾವ್ಯ ವಾಚನದಲ್ಲಿಯೂ ವಿಶೇಷ ಪ್ರತಿಭೆಯನ್ನು ಹಲವಾರು ವೇದಿಕೆಗಳಲ್ಲಿ ಸಾಕ್ಷೀಕರಿಸಿದ್ದಾಳೆ.

“ಪರಿಸರ ಸಂರಕ್ಷಣ” ಮತ್ತು ಸೇವಾ ಮತ್ತು ದಾನ ಕಾರ್ಯಗಳಲ್ಲಿಯೂ ವಿಭಾಲಿ ತನ್ನನ್ನು ತಾನು ತೊಡಗಿಸಿಕೊಂಡು, ಎಮಿರೇಟ್ಸ್ ಎನ್ವಿರನ್ಮೆಂಟಲ್ ಗ್ರೂಪ್, “ಗ್ರೀನ್ ಹೋಪ್ – ಎನ್ವಿರಾನ್ಮೆಂಟಲ್ ಗ್ರೂಪ್”  ವೇಸ್ಟ್ ರಿಸೈಕ್ಲಿಂಗ್(ತ್ಯಾಜ ವಸ್ತುಗಳ ಮರುಬಳಕೆ) ಅಭಿಯಾನದಲ್ಲಿ ಭಾಗವಹಿಸಿಕೊಂಡು ಬರುತಿದ್ದಾಳೆ. ಎಮಿರೇಟ್ಸ್ ಎನ್ವಿರನ್ಮೆಂಟಲ್ ಗ್ರೂಪ್ ನ ಸದಸ್ಯತ್ವ ಮತ್ತು ವಿದ್ಯಾರ್ಥಿಗಳ ತಂಡದ ನಾಯಕಿಯಾಗಿದ್ದಾಳೆ

ಬಹುಮಖ ಪ್ರತಿಭೆಯ ಕು| ವಿಭಾಲಿ ಶೆಟ್ಟಿ ಯ ವಿವಿಧ ಚಟುವಟಿಕೆಗಳಲ್ಲಿ ತನ್ನ ಪ್ರತಿಭೆಯ ಮೂಲಕ ತನ್ನ ಪೋಷಕರಿಗೂ, ವಿದ್ಯಾಸಂಸ್ಥೆಗೂ ಹೆಸರು ಗಳಿಸಿರುವವುದನ್ನು ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಗೆ ಅಚ್ಚು ಮೆಚ್ಚಿನ ವಿದ್ಯಾರ್ಥಿನಿಯಾಗಿದ್ದಾಳೆ. ಎಳೆಯ ವಯಸ್ಸಿನಲ್ಲೇ ಬಹುಮುಖ ಪ್ರತಿಭೆ ಇರುವ ವಿಭಾಲಿಯ ಯಶಸ್ವಿ ಹೆಜ್ಜೆಗಳು ಶಾಘನೀಯವಾಗಿದೆ.

ವಿಭಾಲಿ ಶೆಟ್ಟಿ ಇನ್ನೂ ಹೆಚ್ಚಿನ ಸಾಧನೆಯ ಹಾದಿಯಲ್ಲಿ ಮುನ್ನಡೆಯಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

ಬಿ. ಕೆ. ಗಣೇಶ್ ರೈ – ಯು.ಎ.ಇ.

Comments are closed.