ಒಮಾನ್: ತೈಲ ಸಮೃದ್ಧಿಯ ಒಮಾನ್ ದೇಶದಲ್ಲಿ ‘ಮೆಕ್ನು’ ಹೆಸರಿನ ಚಂಡಮಾರುತದ ರುದ್ರ ನರ್ತನ ಪ್ರಾರಂಭಗೊಂಡಿದ್ದು ಸಲಲಾಹ್ ಪಟ್ಟಣದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಈ ಪಟ್ಟಣದ ಸಮುದ್ರಬಾಗದಲ್ಲಿಯೇ ಚಂಡಮಾರುತದ ಕೇಂದ್ರಬಿಂದು ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ 40 ಸಾವಿರ ಭಾರತೀಯರೂ ಸೇರಿದ್ದಾರೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳ ವರದಿಗಳನ್ನಾಧರಿಸಿ ಮೂಲಗಳು ತಿಳಿಸಿವೆ.
https://youtu.be/TQJdYeKLBqE
ಒಮಾನ್ ದೇಶದ ಎರಡನೇ ಅತೀದೊಡ್ಡ ನಗರವಾಗಿರುವ ಸಲಾಲಹ್ ನಲ್ಲಿ ಸುಮಾರು 2ಲಕ್ಷ ಜನರು ವಾಸವಿದ್ದಾರೆ. ಈಗಾಗಲೇ ಈ ಭಾಗದ ಸಮುದ್ರ ಪ್ರಕ್ಷುಬ್ಧವಾಗಿದ್ದು ಸುಮಾರು 13 ರಿಂದ 14 ಮೀಟರ್ ಎತ್ತರದ ಅಲೆಗಳು ಏಳಲಾರಂಭಿಸಿವೆ.
https://youtu.be/Cf20GCtrEtc
ಮೆಕ್ನು’ ಚಂಡಮಾರುತಕ್ಕೆ ಒಬ್ಬಳು ೧೨ ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದು, ಜನ ಆತಂಕದಲ್ಲಿದ್ದಾರೆ. ಒಮಾನಿನಲ್ಲಿ ಚಂಡಮಾರುತದಿಂದ ತತ್ತರಿಸಿರುವ ಜನರಿಗೆ ಪರಿಹಾರ ಕಾರ್ಯ ಒದಗಿಸಲು ಭಾರತೀಯ ಎರಡು ನೌಕಾ ಪಡೆಯ ಹಡಗುಗಳು ಒಮಾನಿನತ್ತ ಧಾವಿಸಿದೆ.
https://youtu.be/_v7N1xSXnsY
ಸಹಾಯವಾಣಿ: ತುರ್ತು ಸಂದರ್ಭದಲ್ಲಿ ಅವಶ್ಯವಿದ್ದಲ್ಲಿ ಸಲಲಾದಲ್ಲಿರುವ ಭಾರತೀಯ ಪ್ರಜೆಗಳು ಮನ್‌ಪ್ರೀತ್ ಸಿಂಗ್ (ಮೊಬೈಲ್-99498939) ಅವರನ್ನು ಸಂಪರ್ಕಿಸಬಹುದು ಎಂದು ಒಮಾನ್ ನ ಭಾರತೀಯ ದೂತವಾಸ ಟ್ವೀಟ್ ಮಾಡಿ ತಿಳಿಸಿದೆ.
ತುರ್ತು ಸಂಪರ್ಕಕ್ಕೆ 24 ಗಂಟೆಗಳ Help Line ಕೂಡ ತೆರೆಯಲಾಗಿದೆ. Help Line ಸಂಖ್ಯೆ- 0096824695981, ಟೋಲ್ ಫ್ರಿ ಸಂಖ್ಯೆ- 80071234.
Comments are closed.