ಗಲ್ಫ್

ದುಬಾಯಿಯಲ್ಲಿ ನಡೆದ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್-ಯು.ಎ.ಇ. ಘಟಕದ ವಿಶೇಷ ಸಭೆ

Pinterest LinkedIn Tumblr

ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) – ಯು.ಎ.ಇ. ಘಟಕದ ವಿಶೇಷ ಸಭೆ 2018 ಮೇ 18ನೇ ತಾರೀಕು ಶುಕ್ರವಾರ ಸಂಜೆ 5.00 ಗಂಟೆಗೆ ದುಬಾಯಿ ಗಿಸೆಸ್ ನಲ್ಲಿರುವ ಫಾರ್ಚೂನ್ ಫ್ಲಾಜಾ ಹೋಟೆಲ್ ಸಭಾಂಗಣದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) – ಯು.ಎ.ಇ. ಘಟಕದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕು. ಶರಣ್ಯಾ ವೆಂಕಟೇಶ್ ಶಾಸ್ತ್ರಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಯು.ಎ.ಇ. ಘಟಕದ ಕಾರ್ಯದರ್ಶಿ ಶ್ರೀ ವಿಠಲ್ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿದರು. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) – ಸ್ಥಾಪಕ ಅಧ್ಯಕ್ಷರು ಹಾಗೂ ಶ್ರೀ ಕ್ಷೇತ್ರ ಕಟೀಲು ಮೇಳದ ಭಾಗವತರಾದ ಶ್ರೀ ಸತೀಶ್ ಶೆಟ್ಟಿ ಪಟ್ಲರವರು ಗಣ್ಯರ ಸಮ್ಮುಖದಲ್ಲಿ ಜ್ಯೋತಿಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀಮತಿ ಆರತಿ ದಿನೇಶ್ ಶೆಟ್ಟಿಯವರು ಶ್ರೀ ಸತೀಶ್ ಶೆಟ್ಟಿ ಪಟ್ಲರವರಿಗೆ ಪುಷ್ಪಗುಛ್ಛ ನೀಡಿ ಗೌರವಿಸಿದರು, ಮತ್ತೊರ್ವ ಅತಿಥಿಯಾಗಿ ಆಗಮಿಸಿದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಖಜಾಂಚಿ ಶ್ರೀ ರವಿ ಶೆಟ್ಟಿಯವರಿಗೆ ಶ್ರೀಮತಿ ಅಂಬಾ ವೆಂಕಟೇಶ್ ಶಾಸ್ತ್ರಿ ಪುಷ್ಪಗುಛ್ಛ ನೀಡಿ ಗೌರವಿಸಿದರು.

ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಡೆದು ಬಂದ ಹಾದಿ…
ಕರಾವಳಿಯ ಗಂಂಡುಕಲೆಯೆಂದೇ ಪ್ರಸಿದ್ದವಾಗಿರುವ ಯಕ್ಷಗಾನ ಕ್ಷೇತ್ರದಲ್ಲಿ ವೃತ್ತಿಪರ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ 2015 ಸೆಪ್ಟೆಂಬರ್ 14ರಂದು ಪ್ರಾರಂಭಿಸಿರುವ ಸಂಸ್ಥೆಯು ದೇಶ ವಿದೇಶಗಳಲ್ಲಿ ಮೂವತ್ತು ಘಟಕಗಳು ಸ್ಥಾಪನೆಯಾಗಿದೆ. ಮೂವತ್ತೆರಡು ತಿಂಗಳಿನಲ್ಲಿ ಸುಮಾರು ಮೂರುವರೆ ಕೋಟಿಗೂ ಹೆಚ್ಚಿನ ಮೊತ್ತದ ಸೇವಾ ಯೋಜನೆಯನ್ನು ಅನುಷ್ಠಾನ ಗೊಳಿಸಿದೆ. 73 ಅಶಕ್ತ ಕಲಾವಿದರಿಗೆ ಐವತ್ತು ಸಾವಿರ ರೂಪಾಯಿ ಗೌರವ ಧನ ನೀಡಲಾಗಿದೆ.

ಪ್ರಾದೇಶಿಕ ಘಟಕಗಳ ಸುಮಾರು ಅರುವತ್ತ್ತು ಮಂದಿ ಅಶಕ್ತ ಕಲಾವಿದರಿಗೆ ಗೌರವ ಧನ ವಿತರಣೆ, ಸುಮಾರು ಮುನ್ನೂರು ಮಂದಿ ಕಲಾವಿದರಿಗೆ ಅಪಘಾತ ವಿಮಾ ಯೋಜನೆ ಜಾರಿ, (ಅಪಘಾತ ಚಿಕಿತ್ಸಾ ವೆಚ್ಚ ಮೂರು ಲಕ್ಷ, ಆಕಸ್ಮಿಕ ಜೀವಹಾನಿಗೆ ಎಂಟು ಲಕ್ಷ), 15 ಜನ ಅಶಕ್ತ ಕಲಾವಿದರಿಗೆ 25 ಸಾವಿರ ಚಿಕಿತ್ಸಾ ವೆಚ್ಚ ನೀಡಿಕೆ, ಎಂಟು ಮಂದಿ ಅಪಾಘಾತ, ಅನಾರೋಗ್ಯದಿಂದ ವಿಧಿವಶರಾದ ಕುಟುಂಬದವರಿಗೆ ಐವತ್ತು ಸಾವಿರ ಪರಿಹಾರ ನೀಡಿಕೆ, ಹನ್ನೆರಡು ಮಂದಿ ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕೆ ಸಹಾಯ ಧನ ವಿತರಣೆ.

ಗರಿಷ್ಟ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ಬಂಗಾರದ ಪದಕ. ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿಕೆ, ಪ್ರಖ್ಯಾತ ಇಬ್ಬರು ಕಲಾವಿದರಿಗೆ ತಲಾ ಒಂದು ಲಕ್ಷ ನಗದಿನೊಂದಿಗೆ “ಪಟ್ಲ ಪ್ರಶಸ್ತಿ” ಪ್ರದಾನ. ಕಲಾವಿದ ಕುಟುಂಬದವರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ. ಪಟ್ಲ ಸಂಭ್ರಮ ಸಂದರ್ಭದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ.

ಪ್ರಖ್ಯಾತ ಭಾಗವತರುಗಳಾದ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ವಿರಚಿತ “ಅಂಬುರುಹ” ಎಂಬ ಮೂವತ್ತು ಪ್ರಸಂಗಗಳ “ಕುಶ-ಲವ” ಮತ್ತು ಬಲಿಪ ನಾರಾಯಣ ಭಾಗವತರ ಹದಿನಾಲ್ಕು ಪ್ರಸಂಗಗಳ “ಜಯಲಕ್ಷ್ಮೀ” ಕೃತಿಗಳ ಪ್ರಕಾಶನ , ಸುಮಾರು ಇನ್ನೂರು ಮಂದಿ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಭೇತಿ.

“ಪಟ್ಲ ಯಕ್ಷಾಶ್ರಯ ಯೋಜನೆ” ಯ ಅಡಿಯಲ್ಲಿ ನಿವೇಶನ ರಹಿತ ನೂರು ಮಂದಿಗೆ ಕಲಾವಿದರಿಗೆ ಉಚಿತ ನೂರು ಮನೆಗಳ ನಿರ್ಮಾಣ, ಈಗಾಗಲೆ ಇಬ್ಬರು ಕಲಾವಿದರಿಗೆ ಎರಡು ಮನೆಗಳನ್ನು ಹಸ್ತಾಂತರಿಸಲಾಗಿದೆ.

ಅಶಕ್ತ ಕಲಾವಿದರಿಗೆ ಮಾಸಿಕ ತಲಾ ಒಂದು ಸಾವಿರ ರೂಪಾಯಿ ನೀಡಲಾಗುತ್ತಿದೆ.
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‍ನ ಸ್ಥಾಪಕ ಅಧ್ಯಕ್ಷರು ಶ್ರೀ ಸತೀಶ್ ಶೆಟ್ಟಿ ಪಟ್ಲರವರು ಸಂಸ್ಥೆಯ ಸ್ಥಾಪನೆ, ನಡೆದು ಬಂದ ಹಾದಿಯನ್ನು ಸಂಕ್ಷಿಪ್ತವಾಗಿ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿವರಿಸಿ, ಪ್ರತಿಯೊಂದು ಹಂತದಲ್ಲಿ ಸಹಕಾರ ಬೆಂಬಲ ಪ್ರೋತ್ಸಾಹ ನೀಡಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಯು.ಎ.ಇ. ಘಟಕದ ಮುಖ್ಯ ಸಲಹೆಗಾರರಲ್ಲಿ ಓರ್ವರಾದ ಶ್ರೀ ವಕ್ವಾಡಿ ಪ್ರವೀಣ್ ಶೆಟ್ಟಿಯವರು, ಶ್ರೀ ಗುಣ ಶೀಲ್ ಶೆಟ್ಟಿ, ಅತಿಥಿಯಾಗಿ ಆಗಮಿಸಿದ ರವಿ ಶೆಟ್ಟಿ, ತುಳು ಚಲನ ಚಿತ್ರ ನಿರ್ಮಾಪಕ ಶ್ರೀ ಶೋಧನ್ ಪ್ರಸಾದ್, ಸಂಘಟಕರಲ್ಲಿ ಓರ್ವರಾದ ಶ್ರೀ ಬಿ. ಕೆ. ಗಣೇಶ್ ರೈ ಮತ್ತು ಶ್ರೀ ಕೃಷ್ಣರಾಜ್ ತಂತ್ರಿಯವರು ಇವರಲ್ಲರೂ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಚಟುವಟಿಕೆಗಳನ್ನು ಅಭಿನಂದಿಸಿ ಶುಭ ಹಾರೈಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಶ್ರೀಯುತರುಗಳಾದ ಪ್ರವೀಣ್ ಕುಮಾರ್ ಶೆಟ್ಟಿಯವರು ಮತ್ತು ಗುಣಶೀಲ್ ಶೆಟ್ಟಿಯವರು ಜೊತೆಗೂಡಿ “ಯಕ್ಷಾಶ್ರಯ ಯೋಜನೆ”ಯ ಆಡಿಯಲ್ಲಿ ಒಂದು ಮನೆ ಕಟ್ಟಿಸಿಕೊಡುವ ಜವಬ್ಧಾರಿಯನ್ನು ವಹಿಸಿ ಕೊಂಡರು.

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ – ಯು.ಎ.ಇ. ಘಟಕದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಯು.ಎ.ಇ. ಘಟಕದ ವತಿಯಿಂದ ಕಳೆದಬಾರಿ ನೀಡಲಾದ ದೇಣಿಗೆಯ ಮೊತ್ತವನ್ನು ಈ ಬಾರಿ ದ್ವಿಗುಣಗೊಳಿಸುವಲ್ಲಿ ಸಹಕಾರ ನೀಡಲು ಮನವಿ ಮಾಡಿಕೊಂಡರು. ಹಾಗೂ ದೇಣಿಗೆ ನೀಡಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಹಾಕಿಕೊಂಡಿರುವ ಕಾರ್ಯಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭಹಾರೈಸಿದರು.

ಅತಿಥಿ ಶ್ರೀ ರವಿಶೆಟ್ಟಿ ರವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಮಂಗಳೂರಿನಲ್ಲಿ ದುಬಾಯಿ ಬಾಲಕಲಾವಿದರ ತಂಡದಿಂದ ಯಕ್ಷಗಾನ ಪ್ರದರ್ಶನ
ದುಬಾಯಿಯಲ್ಲಿರುವ ಯಕ್ಷಮಿತ್ರ ತಂಡದ ಬಾಲಕಲಾವಿದರು ಮಂಗಳೂರಿನ ಅಡ್ಯಾರು ಗಾರ್ಡನ್ ನಲ್ಲಿ 2018 ಮೇ 27ನೇ ತಾರೀಕಿನಂದು “ಯಕ್ಷಧ್ರುವ ಪಟ್ಲ ಸಂಭ್ರಮ – 2018” ಕಾರ್ಯಕ್ರಮದಲ್ಲಿ ದುಬಾಯಿನಿಂದ ತೆರಳಿ “ಏಕಾದಶಿ ವೃತ ಮಹಾತ್ಮೆ” ಪ್ರಸಂಗವನ್ನು ಆಡಿತೋರಿಸಲಿರುವರು.

ಯಕ್ಷಮಿತ್ರರು ಸಂಘಟಕರಾದ ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜವರು ಯು.ಎ.ಇ. ಘಟಕದ ಕಾರ್ಯಯೋಜನೆಗಳಿಗೆ ಸರ್ವರ ಬೆಂಬಲ ಕೋರಿದರು. ಶ್ರೀ ರಾಜೇಶ್ ಕುತ್ತಾರ್ ವಂದಾನಾರ್ಪಣೆ ಮಾಡಿದರು.

ಶ್ರೀ ವಿಠಲ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಯಕ್ಷ ದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಯು.ಎ.ಇ. ಘಟಕದ ಪದಾದಿಕಾರಿಗಳು
ಗೌರವ ಅಧ್ಯಕ್ಷರು ಶ್ರೀ ಸುಧೀರ್ ಕುಮಾರ್ ಶೆಟ್ಟಿ ಮತ್ತು ಶ್ರೀ ವಾಸುದೇವ ಭಟ್
ಅಧ್ಯಕ್ಷರು : ಶ್ರೀ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರು : ಶ್ರೀಯುತರುಗಳಾದ ಹರೀಶ್ ಶೇರಿಗಾರ್, ಚಿದಾನಂದ ಪೂಜಾರಿ, ವೆಂಕಟೇಶ್ ಶಾಸ್ತ್ರಿ ಪುತ್ತಿಗೆ, ಸತೀಶ್ ಪೂಜಾರಿ, ಸುರೇಶ್ ಭಟ್ ಸೂರಿಂಜೆ.
ಕಾರ್ಯದರ್ಶಿ: ಶ್ರೀ ವಿಠಲ್ ಶೆಟ್ಟಿ, ಸಹಕಾರ್ಯದರ್ಶಿ ಶ್ರೀ ವಾಸುಕುಮಾರ್ ಶೆಟ್ಟಿ, ಶ್ರೀ ವಿಶ್ವನಾಥ್ ಶೆಟ್ಟಿ, ಖಜಾಂಚಿ : ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ
ಸಂಘಟಕರು : ಶ್ರೀಯುತರುಗಳಾದ ಶೇಖರ್ ಶೆಟ್ಟಿಗಾರ್, ಬಿ. ಕೆ. ಗಣೇಶ್ ರೈ, ರಾಜೇಶ್ ಶೆಟ್ಟಿ.

ಮುಖ್ಯ ಸಲಹೆಗಾರರು : ಶ್ರೀಯುತರುಗಳಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ಹರೀಶ್ ಬಂಗೇರಾ, ಯತೀಶ್ ಶೆಟ್ಟಿ, ಸತೀಶ್ ವೆಂಕಟರಮಣ, ವಿಕ್ರಂ ಶೆಟ್ಟಿ, ರಘುರಾಂ ಶೆಟ್ಟಿ, ಪ್ರಭಾಕರ್ ಸುವರ್ಣ, ಪ್ರಶಾಂತ್ ಶೆಟ್ಟಿ, ಚೇತನ್ ರೈ, ಜಯರಾಂ ರೈ, ಪ್ರಶಾಂತ್ ಶೆಟ್ಟಿ, ಹಾಗೂ ಹದಿನಾರು ಮಂದಿ ಸದಸ್ಯರದ ತಂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬಿ. ಕೆ. ಗಣೇಶ್ ರೈ – ಯು.ಎ.ಇ.

Comments are closed.