ಗಲ್ಫ್

“ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್“ ಪ್ರಶಸ್ತಿ ಕು. ಸ್ಪರ್ಶಾ ಶೆಟ್ಟಿ ಮಡಿಲಿಗೆ

Pinterest LinkedIn Tumblr

ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ವಿವಿಧ ಎಮಿರೇಟ್ಸ್‍ಗಳು ಸರ್ಕಾರಿ ಮಟ್ಟದಲ್ಲಿ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು ಆಯ್ಕೆಮಾಡಿ ಪ್ರತಿವರ್ಷ ನೀಡಲಾಗುತ್ತಿರುವ “ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್” 2017-18 ನೇ ಸಾಲಿನ ಪ್ರಶಸ್ತಿಯನ್ನು ಈ ಬಾರಿ ಕು. ಸ್ಪರ್ಶಾ ಶೆಟ್ಟಿಗೆ ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಶಾರ್ಜಾ ಎಜುಕೇಶನ್ ಕೌನ್ಸಿಲ್ ಆಶ್ರಯದಲ್ಲಿ 2018 ಮೇ 3ನೇ ತಾರೀಕು ಗುರುವಾರ ಬೆಳಿಗ್ಗೆ 10 ಗಂಟೆಗೆ ಶಾರ್ಜಾ ಯೂನಿವರ್ಸಿಟಿ ಸಿಟಿ ಹಾಲ್ ನಲ್ಲಿ ಅತ್ಯುನ್ನತ ಮಟ್ಟದಲ್ಲಿ ಆಯೋಜಿಸಲಾಗಿತ್ತು.

ಇಂಡಿಯನ್ ಹೈಸ್ಕೂಲ್ ದುಬಾಯಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಪರ್ಶಾ ಶೆಟ್ಟಿ 7ನೇ ತರಗತಿಯ ವಿದ್ಯಾರ್ಥಿನಿ. ಶ್ರೀ ಪ್ರಕಾಶ ಶೆಟ್ಟಿ ಮತ್ತ್ತು ಶ್ರೀಮತಿ ಸುಶ್ಮಾ ಶೆಟ್ಟಿ ದಂಪತಿಗಳ ಮಗಳಾಗಿದ್ದಾಳೆ. ಕಳೆದ ಹನ್ನೆರಡು ವರ್ಷಗಳಿಂದ ದುಬಾಯಿಯಲ್ಲಿ ನೆಲೆಸಿದ್ದಾರೆ. ಕರಾವಳಿ ಕರ್ನಾಟಕದ ಕಿನ್ನಿಗೋಳಿ ಶ್ರೀ ಮಹಾಬಲಶೆಟ್ಟಿ ಮತ್ತು ಶ್ರೀಮತಿ ಸರಸ್ವತಿ ಶೆಟ್ಟಿ (ದಿ.) ಕಿಲೆಂಜೂರ್ ಮದರ ಮನೆ ಹಾಗೂ ಉಡುಪಿ ಬೆಳ್ಕಲೆ ಅಜ್ಜರ ಮನೆ ಶ್ರೀ ನಿತ್ಯಾನಂದ ಶೆಟ್ಟಿ ಮತ್ತು ಶ್ರೀಮತಿ ಶ್ಯಾಮಲ ಶೆಟ್ಟಿಯವರ ಮುದ್ದಿನ ಮೊಮ್ಮಗಳು ಸ್ಪರ್ಶಾಳಿಗೆ ಬಾಲ್ಯದಿಂದಲೇ ವಿಶೇಷ ಪ್ರೊತ್ಸಾಹ, ಬೆಂಬಲ ಮಾರ್ಗದರ್ಶನದಿಂದ ಬಹುಮುಖ ಪ್ರತಿಭೆಯನ್ನು ಪಡೆದಿದ್ದಾಳೆ. ತನ್ನ ಮುದ್ದಿನ ತಮ್ಮ ಪ್ರಶಮ್ ಶೆಟ್ಟಿ ಸಹ ತನ್ನ ಅಕ್ಕನಂತೆ ಉತ್ಸಾಹಿ ಬಾಲಕನಾಗಿದ್ದಾನೆ.

ಶಾಲೆಯಲ್ಲಿ ಶೈಕ್ಷಣಿಕ ಮತ್ತು ಇನ್ನಿತರ ಪಠ್ಯೇತರ ಚತುವಟಿಕೆಗಳಲ್ಲಿ ಹೆಚ್ಚಿನ ಪ್ರತಿಭೆಯನ್ನು ಪಡೆದಿರುವ ಸ್ಪರ್ಶಾ ಐ.ಬಿ.ಟಿ. ಮತ್ತು ಅಸ್ಸೆಟ್ ಪರಿಕ್ಷೆಯಲ್ಲಿ ಪ್ರಶಸ್ತಿ ಪಡೆದ್ದಾಳೆ. ಬ್ಯಾಡ್ಮಿಂಟನ್ ಎಳೆಯ ಕ್ರೀಡಾಪಟುವಾಗಿ ಯು.ಎ.ಇ. ಮಟ್ಟದ ಸ್ಪರ್ಧೆಯಲ್ಲಿ ಹಲವು ಬಾರಿ ಬಹುಮಾನಗಳನ್ನು ಪಡೆದಿದ್ದಾಳೆ.

ಭರತನಾಟ್ಯಂ ಕಲಿತಿರುವ ಸ್ಪರ್ಶಾ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾಳೆ, ಹಾಗೂ ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ತನ್ನದಾಗಿಸಿ ಕೊಂಡಿದ್ದಾಳೆ. ಚಿತ್ರಕಲೆಯಲ್ಲಿಯೂ ಅಪಾರ ಆಸಕ್ತಿ ಇರುವ ಸ್ಪರ್ಶಾ ಹಲವಾರು ಮೆಡಲ್ ಗಳನ್ನು ತನ್ನ ಕೊರಳಿಗೆ ಧರಿಸಿಕೊಂಡಿದ್ದಾಳೆ. “ರೀಡಿಂಗ್ ಕಾಂಟೆಸ್ಟ್” ನ ಶಾಲೆಯ ಪ್ರತಿನಿಧಿ ಸ್ಪರ್ಧಿಯಾಗಿ ಬಹುಮಾನ ಪಡೆದಿದ್ದಾಳೆ.

ಯು.ಎ.ಇ ಮಟ್ಟದಲ್ಲಿ ವಿವಿಧ ಹಂತದಲ್ಲಿ ನಡೆದ ‘ಪಬ್ಲಿಕ್ ಸ್ಪೀಕಿಂಗ್’ ನಲ್ಲಿ ಬಹುಮಾನ ತನ್ನದಾಗಿಸಿ ಕೊಂಡಿದ್ದಾಳೆ. ತನ್ನ ತರಗತಿಯಲ್ಲಿ ಹೆಡ್ ಮಾನಿಟರ್ ಆಗಿ ಎಳೆಯ ವಯಸಿನಲ್ಲೆ ನಾಯಕಿಯ ಗುಣವನ್ನು ಮೈಗೂಡಿಸಿ ಕೊಂಡಿದ್ದಾಳೆ.

ಪಂಜಾಬ್ ನಲ್ಲಿ ನಡೆದ ‘ರೌಂಡ್ ಸ್ಕ್ವಯರ್ ಇಂಟನ್ರ್ಯಾಶನಲ್ ಕಾನ್ಫರೆನ್ಸ್’ ನ ವೇದಿಕೆಯಲ್ಲಿ ಎಳೆಯ ಬಾಲೆಯ ಮಾತಿನ ಚತುರತೆಯನ್ನು ಸಮ್ಮೇಳನದ ಸರ್ವ ಪ್ರೇಕ್ಷಕರ ಮನಗೆದ್ದಿದ್ದು, ಆಕೆಯ ಮುಂದಿನ ದಿನದಲ್ಲಿ ಎಲ್ಲಾ ವೇದಿಕೆಯಲ್ಲಿ ಉತ್ತಮ ಭಾಷಣ ಮಾಡಲು ಸ್ಪೂರ್ತಿ ನೀಡಿದಂತಾಗಿದೆ.

ಯು.ಎ.ಇ.ಯಲ್ಲಿರುವ ಹಲವಾರು ಸೇವಾ ಸಂಸ್ಥೆಗಳ ಸೇವಾ ಚಟುವಟಿಕೆಗಳಲ್ಲಿ ಸ್ಪರ್ಶಾ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಪರಿಸರ ಕಾಳಜಿಯೊಂದಿಗೆ ಪರಿಸರ ಉಳಿಸುವಿಕೆಯ ಅಭಿಯಾನದಲ್ಲಿ ಪಾಲ್ಗೊಂಡು ವಿವಿಧ ವೇದಿಕೆಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕರೆ ನೀಡುತ್ತಾ ಬರುತಿದ್ದಾಳೆ.

ಸುಂದರ ಶಿಸ್ತುಬದ್ಧ ನಗರ ಯು.ಎ.ಇ.ಯಲ್ಲಿ ಜನಿಸಿ ಬೆಳೆದು ಬಂದಿರುವ ಸ್ಪರ್ಶಾಳಿಗೆ ತನ್ನ ಸುತ್ತ ಮುತ್ತಲಿನ ಅಭಿವೃದ್ಧಿ ಪಥದಲ್ಲಿ ನಿರ್ಮಾಣವಾಗಿರುವ ನಗರವನ್ನು ಪ್ರತ್ಯಕ್ಷವಾಗಿ ನೋಡುತ್ತ ಜಾಣೆಯಾಗಿ ಬೆಳೆದಿದ್ದಾಳೆ.

2015 ರಲ್ಲಿ “ಶೇಖ್ ಹಮ್ದಾನ್ ಪ್ರಶಸ್ತಿ” ಪುರಸ್ಕೃತೆ
ಗೌ. ಶೇಖ್ ಹಮ್ದಾನ್ ಬಿನ್ ರಾಶೀದ್ ಅಲ್ ಮಕ್ತೂಮ್ ರವರಿಂದ ಸ್ಪರ್ಶಾ ಶೆಟ್ಟಿ 2015 ರಲ್ಲಿ “ಶೇಖ್ ಹಮ್ದಾನ್ ಪ್ರಶಸ್ತಿ” ಪಡೆದಿದ್ದು. ಮತ್ತೊಮ್ಮೆ ದ್ವಿತೀಯ ಬಾರಿಗೆ 2017 – 18 ರ ಸಾಲಿನ “ಗೌ. ಶೇಖ್ ಸುಲ್ತಾನ್ ಬಿನ್ ಮಹಮ್ಮದ್ ಅಲ್ ಕಾಸ್ಮಿಯ” ಪ್ರಾಯೋಜಕತ್ವದಲ್ಲಿ “ಶಾರ್ಜಾ ಅವಾರ್ಡ್ ಫಾರ್ ಎಜುಕೇಶನಲ್ ಎಕ್ಸಲೆನ್ಸ್” ಪ್ರಶಸ್ತಿಯನ್ನು ಶಾರ್ಜಾ ಎಜುಕೇಶನ್ ಕೌನ್ಸಿಲ್ ರವರಿಂದ ಸ್ಪರ್ಶಾ ಶೆಟ್ಟಿಯನ್ನು ಗುರುತ್ತಿಸಿ ನೀಡಲಾಗಿದೆ.

ಪ್ರಶಸ್ತಿ ಪುರಸ್ಕೃತೆ ಕು. ಸ್ಪರ್ಶಾ ಶೆಟ್ಟಿಯನ್ನು ಈ ಬಾರಿ ದುಬಾಯಿಯ ಮ್ಯಾರಿಯಟ್ ಹೋಟೆಲ್ ಸಭಾಂಗಣದಲ್ಲಿ ಮೇ 11 ರಂದು ನಡೆಯಲಿರುವ ಬಂಟರ 44ನೇ ವಾರ್ಷಿಕ ಸಮ್ಮಿಲನದಲಿ ್ಲಮಹಾ ಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರ ಸಮ್ಮುಖದಲ್ಲಿ ಅಭಿನಂದಿಸಿ ಗೌರವಿಸಲಾಗುವುದು.

ಭಾರತೀಯತೆ ಹಾಗೂ ಕನ್ನಡಿಗರ, ತುಳುವರ ಗೌರವವನ್ನು ಎತ್ತಿ ಹಿಡಿದಿರುವ ಕು. ಸ್ಪರ್ಶಾ ಶೆಟ್ಟಿಗೆ ಸಮಸ್ಥ ಅನಿವಾಸಿ ಭಾರತೀಯ ರ ಪರವಾಗಿ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಪ್ರಶಸ್ತಿಗಳ ಸರಮಲೆಯನ್ನು ಧರಿಸುವಂತಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

ಬಿ. ಕೆ. ಗಣೇಶ್ ರೈ – ಯು.ಎ.ಇ.

Comments are closed.