ಗಲ್ಫ್

ಬ್ಯಾರೀಸ್ ಕಲ್ಚರಲ್ ಫೋರಮ್ ( ಬಿಸಿಫ್) ಇದರ ವತಿಯಿಂದ ” BCF IFTAAR MEET 2018 “

Pinterest LinkedIn Tumblr

UAEಯ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ಕಲ್ಚರಲ್ ಫೋರಮ್ ( ಬಿಸಿಫ್) ಇದರ ವತಿಯಿಂದ ಪ್ರತೀ ವರ್ಷ ಆಯೋಜಿಸಲ್ಪಡುವ ಇಫ್ತಾರ್ ಕಾರ್ಯಕ್ರಮ ” BCF IFTAAR MEET 2018 ” ಈ ವರ್ಷ ಇದೇ ಬರುವ ಮೇ 18 ನೇ ತಾರೀಕಿನಂದು ಶುಕ್ರವಾರ ದುಬೈ ಊದ್ ಮೆಹ್ತಾ ರೋಡ್ ನಲ್ಲಿರುವ ಇರಾನಿಯನ್ ಕ್ಲಬ್ ಸಭಾಂಗಣದಲ್ಲಿ (ಇಂಡಿಯನ್ ಹೈ ಸ್ಕೂಲ್ ಹತ್ತಿರ) ನಡೆಸಲಾಗುವುದು. ಕನ್ನಡಿಗ ಮತ್ತು ಕನ್ನಡೇತರ ಭಾಂದವರು ತಮ್ಮ ಕುಟುಂಬ ಸಮೇತರಾಗಿ ಸೇರುವ ಈ ಕಾರ್ಯಕ್ರಮಕ್ಕೆ ಸುಮಾರು 800 ರಷ್ಟು ಜನ ಸಮುಹ ಸೇರುವ ನಿರೀಕ್ಷೆ ಇದೆ.

 

ಇಫ್ತಾರ್ಗೆ ಮೊದಲು ಮಕ್ಕಳಿಗಾಗಿ ಕಿರಾತ್ ಸ್ಪರ್ಧೆ, ಇಸ್ಲಾಮಿಕ್ ರಸ ಪ್ರಶ್ನೆಗಳು ಮೊದಲಾದ ಕಾರ್ಯಕ್ರಮವಿದ್ದು ಇದರಲ್ಲಿ ವಿಜೇತರಾದವರನ್ನು ಬಹುಮಾನಿಸಿ ಗೌರವಿಸಲಾಗುವುದು. . ನಂತರ ಪ್ರಖ್ಯಾತ ದೀನೀ ವಿದ್ವಾಂಸ ರಿಂದ ಪ್ರವಚನ, ದುವಾ ಕಾರ್ಯಕ್ರಮವಿದೆ.

ಇಫ್ತಾರ್ ನಂತರ BCF ನ ಪ್ರಖ್ಯಾತ ವಾರ್ಷಿಕ BCF ಸ್ಕಾಲರ್ಶಿಪ್ ಕಾರ್ಯಕ್ರಮದ ಅಂಗವಾಗಿ ಇದೇ ಬರುವ ಆಗಸ್ಟ್ ತಿಂಗಳು ಮಂಗಳೂರು ಟೌನ್ ಹಾಲ್ ( ಮಂಗಳೂರು ಪುರಭವನ) ನಲ್ಲಿ ನಡೆಯಲಿರುವ ಬ್ರಹತ್ BCF ಸ್ಕಾಲರ್ಶಿಪ್ ಮೀಟ್ 2018” ಕಾರ್ಯಕ್ರಮದ ಬಗ್ಗೆ ಪ್ರಸ್ತಾವನಾ ಕಾರ್ಯಕ್ರಮ ನಡೆಸಲಾಗುವುದು.

BCF ಅಧ್ಯಕ್ಷರಾದ ಡಾ .ಯೂಸಫ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ BCF ಇಫ್ತಾರ್ 2018 ಮೀಟ್ ನಲ್ಲಿ ಹಲವಾರು ಗಣ್ಯ ಅತಿಥಿಗಳು, ಧಾರ್ಮಿಕ ನೇತಾರರು ಹಾಗೂ ಸಂಪನ್ಮೂಉಲ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಈ ವಿಶೇಷವಾದ BCF ಇಫ್ತಾರ್ ಕಾರ್ಯಕ್ರಮಕ್ಕೆ ಎಲ್ಲ ಕನ್ನಡಿಗ ಹಾಗೂ ಕನ್ನಡೇತರ ಭಂದುಗಳು ಹಾಗೂ UAEಯಲ್ಲಿ ಇರುವ ಎಲ್ಲಾ ಕನ್ನಡ ಪರ ಸಮಾಜ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸದಸ್ಯರನ್ನು BCF ಪರವಾಗಿ BCF ಇಫ್ತಾರ್ ಕಮಿಟಿ ಯ ಚಯರ್ಮನ್ ಜ: ಅಬ್ದುಲ್ ಲತೀಫ್ ಮುಲ್ಕಿ ಹಾಗೂ ಸದಸ್ಯರು ವಿನಮ್ರವಾಗಿ ಆಹ್ವಾನಿಸಿದ್ದಾರೆ. ಭಾಗವಹಿಸುವ ಸಮಾಜ ಸೇವಾ ಸಂಸ್ಥೆಗಳು ಕಾರ್ಯಕ್ರಮಕ್ಕೆ ಬಂದ ತಕ್ಷಣ ತಮ್ಮ ಸಂಸ್ಥೆಯ ಹೆಸರನ್ನು ಮತ್ತು ತಮ್ಮ ಹೆಸರನ್ನು ತಿಳಿಸಿ ನೋಂದಾಯಿಸ ವಿಶೇಷವಾಗಿ ವಿಶೇಷವಾಗಿ ವಿನಂತಿಸಲಾಗಿದೆ.

ಮಹಿಳೆಯರಿಗಾಗಿ ಪ್ರತ್ಯೇಕವಾದ ಆಸನದ ವ್ಯವಸ್ಥೆ ಹಾಗೂ ನಮಾಜು ಮಾಡುವ ವ್ಯವಸ್ಥೆ ಮಾಡಲಾಗುವುದು.

BCF ಇಫ್ತಾರ್ 2018 ಇದರ ಬಗ್ಗೆ ಯಾವುದೇ ಮಾಹಿತಿ ಬೇಕಾಗಿದ್ದಲ್ಲಿ ಈ ಕೆಳಗಿನ ಮೊಬೈಲ್ ನಂಬರ್ ಗೆ ಸಂಪರ್ಕಿಸ ಬೇಕಾಗಿ ವಿನಂತಿ.
050 6530518 , 0507983573 , 050 8417475 , 055 5232523 , 0562721152

Comments are closed.