ಗಲ್ಫ್

ದುಬೈಯಲ್ಲಿ ಕಿಕ್ಕಿರಿದ ಪ್ರದರ್ಶನ ಕಂಡ ದೇವದಾಸ್ ಕಾಪಿಕಾಡರ ಹಾಸ್ಯಮಯ ತುಳುನಾಟಕ ! ಹಾಸ್ಯದ ಸವಿ ಸವಿದ ದುಬೈಗರು

Pinterest LinkedIn Tumblr

Photo: Ashok Belman

ದುಬೈ: ರಾಜ್ಯ ಪ್ರಶಸ್ತಿ ಪುರಸ್ಕ್ರತ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರಚಿಸಿ, ನಟಿಸಿ, ನಿರ್ದೇಶಿಸಿರುವ ಚಾಪರ್ಕ ಕಲಾವಿದರಿಂದ ‘ಪನಿಯರೆ ಆವಂದಿನ’ ಹಾಗು ‘ಬಂಗಾರ್’ ಹಾಸ್ಯಮಯ ತುಳುನಾಟಕ ದುಬೈಯಲ್ಲಿ ಶುಕ್ರವಾರ ನಡೆಯಿತು.

ದುಬೈಯ ಇಂಡಿಯನ್ ಹೈಸ್ಕೂಲಿನ ಶೇಖ್ ರಶೀದ್ ಆಡಿಟೋರಿಯಮಿನಲ್ಲಿ ಕಿಕ್ಕಿರಿದ ಜನರ ಮಧ್ಯೆ ಪ್ರದರ್ಶನ ಕಂಡ ಎರಡೂ ನಾಟಕಗಳನ್ನು ನೋಡಿದ ಜನ ಹಾಸ್ಯದ ಸವಿಯನ್ನು ಸವಿದರು.

‘ಪನಿಯರೆ ಆವಂದಿನ’ ನಾಟಕ ಸಂಜೆ ಪ್ರದರ್ಶನ ಕಂಡರೆ, ಅನಂತರ ‘ಬಂಗಾರ್’ ನಾಟಕ ಪ್ರದರ್ಶನಗೊಂಡಿತು. ಈ ಎರಡು ನಾಟಕವನ್ನು ಕಂಡ ತುಳುವರು ಮನಸಾರೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

ನಾಟಕ ಪ್ರದರ್ಶನಕ್ಕೂ ಮುನ್ನ ನಡೆದ ಸರಳ ಸಮಾರಂಭವನ್ನು ದೀಪ ಬೆಳಗಿಸಿ ಗಣ್ಯರು ಉದ್ಘಾಟಿಸಿದರು. ದುಬೈ ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ, ಸಿನೆಮಾ ನಿರ್ಮಾಪಕ ಹಾಗು ಗಾಯಕರೂ ಆಗಿರುವ ಹರೀಶ್ ಶೇರಿಗಾರ್, Merit Frieght Shipping ಮಾಲಕ ಜೋಸೆಫ್ ಮಥಿಯಾಸ್, ವೆಲೇರಿಯಾನ್ ಡಿಸೋಜಾ, ದೇವದಾಸ್ ಕಾಪಿಕಾಡ್, ಶರ್ಮಿಳಾ ಕಾಪಿಕಾಡ್, ದಯಾನ್ ಡಿಸೋಜಾ, ಜೋಯಲ್, ಜೇಮ್ಸ್ ಲೋಬೊ, ಜಾನ್ ರೇಗೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಕಾಪಿಕಾಡ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ನಾಟಕವನ್ನು ರುಡಾಲ್ಫ್ ಸಂಟಿಸ್, ಅರುಣ್ ಡಿಸೋಜಾ, ಸಿಪ್ರಿಯನ್ ಫೆರ್ನಾಂಡಿಸ್ ಹಾಗು ಜೊಶ್ವೇ ಡಿಸೋಜಾ ಆಯೋಜಿಸಿದ್ದರು. ಸಂಪತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments are closed.