ಗಲ್ಫ್

ಇನ್ನು ಮುಂದೆ ಯುಎಇಯಲ್ಲಿಯೂ ವಿದೇಶಿಗರಿಗೆ ಉದ್ಯೋಗ ಸಿಗುವುದು ಕಷ್ಟ !

Pinterest LinkedIn Tumblr

ದುಬೈ: ಇನ್ನು ಮುಂದೆ ಯುಎಇಯ ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಲಭ್ಯವಿರುವ ಉದ್ಯೋಗಗಳನ್ನು ತುಂಬಲು ಆ ದೇಶದ ನಾಗರಿಕರು ಲಭ್ಯರಿಲ್ಲದಿದ್ದರೆ ಮಾತ್ರ ವಿದೇಶೀಯರಿಗೆ ಆ ಉದ್ಯೋಗಗಳನ್ನು ನೀಡಲಾಗುವುದು.

ಈ ವಿಷಯವನ್ನು ಮಂಗಳವಾರ ಫೆಡರಲ್ ನ್ಯಾಶನಲ್ ಕೌನ್ಸಿಲ್‌ಗೆ ತಿಳಿಸಲಾಗಿದೆ. ಎಮಿರಾಟಿ (ಯುಎಇ ಪ್ರಜೆಗಳು)ಗಳಿಗೆ ಸಿಗುತ್ತಿರುವ ಉದ್ಯೋಗಾವಕಾಶಗಳ ಬಗ್ಗೆ ಕೌನ್ಸಿಲ್ ಸದಸ್ಯರು ಮಾನವ ಸಂಪನ್ಮೂಲಗಳು ಮತ್ತು ಎಮಿರಾಟೀಕರಣ ಸಚಿವ ನಾಸಿರ್ ಬಿನ್ ತಾನಿ ಜುಮ ಅಲ್ ಹಮ್ಲಿ ಬಳಿ ತಮ್ಮ ಕಳವಳ ವ್ಯಕ್ತಪಡಿಸಿದರು ಹಾಗೂ ಯಾವುದೇ ಹೊಸ ಉದ್ಯೋಗಾವಕಾಶಗಳಲ್ಲಿ ಎಮಿರಾಟಿಗಳಿಗೆ ಆದ್ಯತೆ ನೀಡುವ ನೇಮಕಾತಿ ವ್ಯವಸ್ಥೆಯೊಂದನ್ನು ಅಳವಡಿಸುವಂತೆ ಒತ್ತಾಯಿಸಿದರು.

‘‘ನಿರುದ್ಯೋಗಿಯಾಗಿರುವ ಯಾವುದೇ ಎಮಿರೇಟ್ ಪ್ರಜೆ ಇರುವುದು ನನಗೆ ಗೊತ್ತಾದರೆ, ನಾನು ಅದರ ಬಗ್ಗೆ ಏನಾದರೂ ಮಾಡಬೇಕಾಗುತ್ತದೆ’’ ಎಂದು ಎಫ್‌ಎನ್‌ಸಿ ಸದಸ್ಯ ಹಮದ್ ಅಲ್ ರಹೂಮಿ ಹೇಳಿದರು.

‘‘ನಾವು ಸ್ಥಳೀಯರು. ನಮಗೆ ಆದ್ಯತೆ ನೀಡಬೇಕು. ನಮ್ಮದೇ ದೇಶದಲ್ಲಿ ನಮಗೆ ಕೆಲಸ ಸಿಗುವುದಿಲ್ಲವಾದರೆ ಅದು ಸರಿಯಲ್ಲ’’ ಎಂದು ಅವರು ಸಚಿವರಿಗೆ ಹೇಳಿದರು.

‘‘ಖಾಸಗಿ ಕ್ಷೇತ್ರದಲ್ಲಿನ ಎಮಿರಾಟೀಕರಣದ ಬಗ್ಗೆ ಸರಕಾರ ಕಾಳಜಿ ಹೊಂದಿದೆ ಹಾಗೂ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು’’ ಎಂದು ಅವರು ನುಡಿದರು.

Comments are closed.