ಗಲ್ಫ್

ಸೌದಿಯ ರೆಸಾರ್ಟ್ ಬೀಚಿನಲ್ಲಿ ಬಿಕಿನಿ ಧರಿಸಿ ಸುತ್ತಾಡುತ್ತಿರುವ ಸ್ತ್ರೀಯರು!

Pinterest LinkedIn Tumblr

ಸೌದಿ ಅರೇಬಿಯಾ ಸಂಪ್ರದಾಯವಾದಿಗಳ ನಾಡು. ಇಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಮಹಿಳೆಯರು ಎಲ್ಲಂದರಲ್ಲಿ ಸುತ್ತಾಡುವಂತಿಲ್ಲ. ಸದಾ ಮಹಿಳೆಯರು ಬುರ್ಖಾ ಹಾಕಿಕೊಂಡೆ ಇಲ್ಲಿ ಸುತ್ತಾಡಬೇಕು. ಇಂಥ ಸನ್ನಿವೇಶದ ಮಧ್ಯೆ ಕಳೆದ ವರ್ಷದಿಂದ ಇಲ್ಲಿನ ರೆಸಾರ್ಟ್ ಒಂದರಲ್ಲಿ ಸ್ತ್ರೀಯರು ಬಿಕಿನಿ ಧರಿಸಿ ಬೀಚ್‌ನಲ್ಲಿ ಸುತ್ತಾಡುವಂತಾಗಿದೆ.

‘ರೆಡ್‌ ಸೀ ರೆಸಾರ್ಟ್‌’ನ ಬೀಚಿನಲ್ಲಿ ಸ್ತ್ರೀಯರು ಬಿಕಿನಿ ಧರಿಸಿ ಸುತ್ತಾಡುವಂತಾಗಿದೆ. ಇದು ಸೌದಿ ಅರೇಬಿಯಾದ ಮಹಿಳೆಯರಿಗೆ ಸಿಕ್ಕಿದ ‘ಸ್ವಾತಂತ್ರ್ಯ’. ಹಾಗೇ ಸೌದಿಯಲ್ಲೇ ಇಷ್ಟೊಂದು ಮುಕ್ತಾ ಮುಕ್ತ ಅವಕಾಶ ನೀಡುವುದರ ಹಿಂದೆ ವಾಣಿಜ್ಯ ಉದ್ದೇಶ ಅಡಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ. ಸಂಪ್ರದಾಯದ ಬಟ್ಟೆಯನ್ನು ಕಳಚಿ ಕೊಂಚ ಪಕ್ಕಕ್ಕಿರಿಸಿದ ದುಬೈ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡಿ, ಅಗಾಧವಾಗಿ ಬೆಳೆದದ್ದನ್ನು ಕಣ್ಣಾರೆ ಕಂಡ ಸೌದಿ ದೊರೆ ಮಹಮ್ಮದ್‌ ಬಿನ್‌ ಸಲ್ಮಾನ್‌, ಸೌದಿಯ ವಾಯವ್ಯ ಕರಾವಳಿಯಲ್ಲಿನ ಬೀಚ್‌ನಲ್ಲಿ ಐಷಾರಾಮಿ ರೆಡ್‌ ಸೀ ರೆಸಾರ್ಟ್‌ ಆರಂಭಿಸಿದ್ದಾರೆ. ಈ ಬೀಚ್‌ ರೆಸಾರ್ಟ್‌ಗೆ ಭೇಟಿ ನೀಡುವ ಮುಸ್ಲಿಂ ಮಹಿಳೆಯರು ಬುರ್ಖಾ ಬದಲಿಗೆ ತಮ್ಮಿಷ್ಟದ ಉಡುಗೆ ಧರಿಸಬಹುದು. ಬೇಕಿದ್ದರೆ ತುಂಡುಡುಗೆ (ಬಿಕಿನಿ) ತೊಟ್ಟು ಸಮುದ್ರ ತಟದಲ್ಲಿ ಸುತ್ತಾಡಬಹುದಾಗಿದೆ.

ಈ ರೆಸಾರ್ಟ್‌ ಅನ್ನು ಮಧ್ಯಪ್ರಾಚ್ಯದ ಪ್ರಮುಖ ಪ್ರವಾಸಿ ಕೇಂದ್ರವಾಗಿಸುವ ಉದ್ದೇಶ ಹೊಂದಿರುವ ಸಲ್ಮಾನ್‌, ಅದಕ್ಕಾಗಿ, ಮಹಿಳೆಯರಿಗೆ ತುಂಡುಡುಗೆ ತೊಡಲುವಕಾಶ ನೀಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮಹಿಳೆಯರನ್ನು ದಾಳವಾಗಿ ಬಳಸುತ್ತಿದ್ದಾರೆ ಎಂಬ ಟೀಕೆ ಕೇಳಿಬರುತ್ತಿದೆ.

Comments are closed.