ಗಲ್ಫ್

ತುಂಬೆ ಅಶ್ರಫ್ ರವರಿಗೆ BCF ಗೌರವ ಪ್ರಶಸ್ತಿ

Pinterest LinkedIn Tumblr

ಪ್ರಖ್ಯಾತ ತುಂಬೆ ಸಮೂಹ ಸಂಸ್ಥೆಗಳಿಗೆ ಒಳಪಟ್ಟ ಅಜ್ಮಾನಿನ ಮೊಹಿಯುದ್ದೀನ್ ವುಡ್ ವರ್ಕ್ಸ್ ಇದರ ನಿರ್ದೇಶಕ ಅಶ್ರಫ್ ತುಂಬೆ ಯವರಿಗೆ ದುಬೈಯ ಪ್ರತಿಷ್ಠಿತ ಬ್ಯಾರೀ ಕಲ್ಚರಲ್ ಫೋರಮ್ ವತಿಯಿಂದ Honour Of Appreciation ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಬ್ಯಾರೀಸ್ ಕಲ್ಚರಲ್ ಫೋರಮ್ ಪ್ರಧಾನ ಕಾರ್ಯ ದರ್ಶಿ ಡಾ. ಕಾಪು ಮೊಹಮ್ಮದ್, ಹಾಗೂ ಉಪಾಧ್ಯಕ್ಷರುಗಳಾದ ಎಂ.ಈ. ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ ಹಾಗೂ ಅಫೀಕ್ ಹುಸೈನ್ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಮರದ ಆಯಾತ ಮತ್ತು ನಿರ್ಯಾತ ಉದ್ದಿಮೆಯಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಖ್ಯಾತವಾದ ಹಾಗೂ UAE ಯಲ್ಲಿ ಈ ಕ್ಷೇತ್ರದಲ್ಲಿ ಅತ್ಯಂತ ಬ್ರಹತ್ ಉದ್ಯಮ ಸಂಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಡುವ ಮೊಹಿಯುದ್ದೀನ್ ವುಡ್ ವರ್ಕ್ಸ್ ಇದರ ರೂವಾರಿಯಾಗಿರುವ ಅಶ್ರಫ್ ತುಂಬೆ ಯವರು ನೂರಾರು ಕನ್ನಡಿಗರಿಗೆ ಉದ್ಯೋಗ ನೀಡಿ ನೆರವಾಗಿರೋದು ಮಾತ್ರವಲ್ಲದೆ ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವಾ ರಂಗದಲ್ಲಿ ಸಕ್ರಿಯರಾಗಿದ್ದು ಯಾವುದೇ ಪ್ರಚಾರ ವಿಲ್ಲದೆ ಮೌನವಾಗಿ ಕರ್ನಾಟಕದ ಅನಿವಾಸಿ ಭಾಂದವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಓರ್ವ ಸಮಾಜ ಪ್ರೇಮಿ ಉದ್ಯಮಿ. ಅವರ ಈ ಅಮೂಲ್ಯವಾದ ಸೇವೆಯನ್ನು ಗುರುತಿಸಿ ಬ್ಯಾರೀ ಕಲ್ಚರಲ್ ಫೋರಮ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Comments are closed.