ಗಲ್ಫ್

ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಬಗ್ಗೆಯೇ ಎದ್ದಿದೆ ಅನುಮಾನ !

Pinterest LinkedIn Tumblr

ದುಬೈನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿದ್ದು, ಈ ಪೋಸ್ಟ್ ಮಾರ್ಟಂ ರಿಪೋರ್ಟ್ ಬಗ್ಗೆಯೇ ಹಲವಾರು ಅನುಮಾನಗಳು ಎದ್ದಿದೆ.

54 ವಯಸ್ಸಿನ ಶ್ರೀದೇವಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಇಲ್ಲಿಯವರೆಗೂ ಭಾವಿಸಲಾಗಿತ್ತು. ಆದ್ರೆ, ಅದು ಸುಳ್ಳು ಎಂದು ಸ್ಪಷ್ಟ ಆಗಿರುವುದು ಪೋಸ್ಟ್ ಮಾರ್ಟಂ ವರದಿ ಬಂದ ಮೇಲೆ.

ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ, ಶ್ರೀದೇವಿ ‘ಆಕಸ್ಮಿಕ ಮುಳುಗುವಿಕೆ’ಯಿಂದ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ‘ಹೃದಯಾಘಾತ’ದ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ. ಆದ್ರೆ, ಶ್ರೀದೇವಿ ರಕ್ತದಲ್ಲಿ ಆಲ್ಕೋಹಾಲ್ ಕಂಟೆಂಟ್ ಇರುವುದು ಪತ್ತೆ ಆಗಿದೆ. ಮದ್ಯಪಾನ ಸೇವನೆ ಮಾಡಿದ್ದ ಶ್ರೀದೇವಿ, ಆಯಾತಪ್ಪಿ ಬಾತ್ ಟಬ್ ಒಳಗೆ ಮುಳುಗಿ ಪ್ರಜ್ಞೆ ತಪ್ಪಿದ್ದಾರೆ ಎಂದು ‘ಯು.ಎ.ಇ’ಯ ಗಲ್ಫ್ ನ್ಯೂಸ್ ವರದಿ ಮಾಡಿದೆ.

ಈ ಆಘಾತಕಾರಿ ರಿಪೋರ್ಟ್ ಬಯಲಾಗುತ್ತಿದ್ದಂತೆಯೇ, ಟ್ವಿಟ್ಟರ್ ನಲ್ಲಿ ಹಲವು ಮಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರ ಅನುಮಾನ ಕೆಳಗಿದೆ ನೋಡಿ…..

ಫೋರೆನ್ಸಿಕ್ ವರದಿಯ ಪ್ರಕಾರ, ನಟಿ ಶ್ರೀದೇವಿ ಆಕಸ್ಮಿಕವಾಗಿ ಬಾತ್ ಟಬ್ ನಲ್ಲಿ ಬಿದ್ದು ಮುಳುಗಿ ಸತ್ತಿದ್ದಾರೆ. ಇನ್ನೂ ಶ್ರೀದೇವಿ ಅವರ ರಕ್ತ ಪರೀಕ್ಷೆ ವರದಿಯಲ್ಲಿ ಮದ್ಯ ಸೇವನೆ ಮಾಡಿರುವುದು ಕಂಡು ಬಂದಿದೆ.

ಅತಿಯಾದ ಸೌಂದರ್ಯ ಪ್ರಜ್ಞೆ ಹೊಂದಿದ್ದ ಶ್ರೀದೇವಿ, ಪದೇ ಪದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ, ದೇಹ ತೂಕ ಇಳಿಸಲು ಹೆಚ್ಚು ಮಾತ್ರೆ ಸೇವಿಸಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬ ವ್ಯಾಖ್ಯಾನ ಈ ಪೋಸ್ಟ್ ಮಾರ್ಟಂ ರಿಪೋರ್ಟ್ ನಿಂದ ಉಲ್ಟಾ ಪಲ್ಟಾ ಆಗಿದೆ.

”ಮದುವೆ ಮುಗಿದರೂ, ದುಬೈನಲ್ಲೇ ಶ್ರೀದೇವಿ ಇದ್ದದ್ದು ಯಾಕೆ.? ಮದುವೆ ಮುಗಿದ್ಮೇಲೆ ಭಾರತಕ್ಕೆ ವಾಪಸ್ ಬಂದಿದ್ದ ಬೋನಿ ಕಪೂರ್, ವಾಪಸ್ ದುಬೈಗೆ ಹಾರಿದ್ದು ಯಾಕೆ.? ಬಾತ್ ಟಬ್ ನಲ್ಲಿ ಮುಳುಗಿರುವುದು ಆಕಸ್ಮಿಕವಲ್ಲ, ಉದ್ದೇಶಪೂರ್ವಕ” ಎಂದು ಕೆಲವರು ಟ್ವೀಟ್ ಮಾಡುತ್ತಿದ್ದಾರೆ.

ನೀರಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿರಬಹುದು. ಆದ್ರೆ, ಅದು ಆಕಸ್ಮಿಕ ಅಂತ ವರದಿ ಕೊಡಲು ಹೇಗೆ ಸಾಧ್ಯ.? ಎಂಬ ಪ್ರಶ್ನೆ ಉದ್ಭವವಾಗಿದೆ. ”ಬಾತ್ ಟಬ್ ನಲ್ಲಿ ಮುಳುಗಿ ಸಾಯಲು ಶ್ರೀದೇವಿ ಏನು ಚಿಕ್ಕ ಮಗುವೇ.?” ಅಂತಿದ್ದಾರೆ ಟ್ವೀಟಿಗರು

”ಮಾಧ್ಯಮಗಳು ವರದಿ ಮಾಡಿದಂತೆ ಹೃದಯಾಘಾತ ಆಗಿರಲಿಲ್ಲ. ಹೊರಗಡೆ ಎಲ್ಲೂ ಬಾರದಂತೆ ಹೋಟೆಲ್ ರೂಮ್ ನಲ್ಲೇ 48 ಗಂಟೆ ಇದ್ದರು ಶ್ರೀದೇವಿ. ಈಗ ಆಕಸ್ಮಿಕವಾಗಿ ಮುಳುಗಿ ಸತ್ತರು ಎನ್ನಲಾಗುತ್ತಿದೆ. ಇದು ಸತ್ಯವನ್ನು ಮುಚ್ಚಿಡುವ ಪ್ರಯತ್ನ. ಒಂದಲ್ಲ ಒಂದು ದಿನ ಸತ್ಯ ಹೊರಗೆ ಬರುತ್ತದೆ” ಎನ್ನುತ್ತಿದ್ದಾರೆ ಅಭಿಮಾನಿಗಳು.

ಫೋರೆನ್ಸಿಕ್ ರಿಪೋರ್ಟ್ ನಲ್ಲಿ ‘Accidental Drowning’ ಬದಲು ‘Accidental Drawning’ ಎಂದು ಬರೆಯಲಾಗಿದೆ. ಹೀಗಾಗಿ, ಇದು ಅಧಿಕೃತ ವರದಿಯೋ, ಅಥವಾ ಫೇಕ್ ವರದಿಯೋ ಎಂಬ ಚರ್ಚೆ ಶುರು ಆಗಿದೆ.

ಇದೊಂದು ಪೂರ್ವನಿಯೋಜಿತ ಮರ್ಡರ್ ಎಂದೇ ಹಲವರು ವ್ಯಾಖ್ಯಾನಿಸುತ್ತಿದ್ದಾರೆ.

”ಇದ್ದಕ್ಕಿದ್ದಂತೆ ಬೋನಿ ಕಪೂರ್ ದುಬೈಗೆ ಸರ್ ಪ್ರೈಸ್ ವಿಸಿಟ್ ನೀಡಿದ್ದು ಯಾಕೆ.? ಮದ್ಯ ಸೇವನೆ ಮಾಡಿದ್ರು ಎಂದು ಹೇಳುವಾಗ, ಹದಿನೈದು ನಿಮಿಷಗಳ ಹಿಂದೆ ಮಾತನಾಡಲು ಹೇಗೆ ಸಾಧ್ಯ.? ಹೃದಯಾಘಾತ ಎಂದು ಮೊದಲು ಹೇಳಿದ್ದು ಯಾಕೆ.?” ಎಂಬುದು ಅಭಿಮಾನಿಗಳ ಪ್ರಶ್ನೆ.

Comments are closed.