ಗಲ್ಫ್

ಹರೀಶ್ ಶೇರಿಗಾರ್, ಪ್ರವೀಣ್ ಕುಮಾರ್ ಶೆಟ್ಟಿ, ಮೊಯ್ದಿನ್ ತುಂಬೆ, ಸೇರಿದಂತೆ ಹಲವರಿಗೆ “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ಪ್ರದಾನ

Pinterest LinkedIn Tumblr

ದುಬೈ: ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸಮಾಜದ ಶಾಂತಿ-ಸೌಹಾರ್ದತೆ, ಸಹಬಾಳ್ವೆಗಾಗಿ ತಮ್ಮದೇ ಆದ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳನ್ನು ಗುರುತಿಸಿ ಗುರುವಾರ ದುಬೈಯಲ್ಲಿ HMC(ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ )ಯುನೈಟೆಡ್ ಇಂಟರ್ ನ್ಯಾಷನಲ್ ಸಂಸ್ಥೆಯು “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ನೀಡಿ ಗೌರವಿಸಿದೆ.

ದುಬೈ ಇಂಡಿಯನ್ ಹೈಸ್ಕೂಲಿನ ಶೇಖ್ ರಾಶಿದ್ ಆಡಿಟೋರಿಯಮಿನಲ್ಲಿ ಗುರುವಾರ ಸಂಜೆ ನಡೆದ ವರ್ಣರಂಜಿತ ಅದ್ದೂರಿ ಸಮಾರಂಭದಲ್ಲಿ ಶಾಂತಿ ಹಾಗು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಯುಎಇಯ ಹೆಸರಾಂತ ಉದ್ಯಮಿಗಳಾದ, ACME ಬಿಲ್ಡಿಂಗ್ ಮೆಟೀರಿಯಲ್ಸ್’ನ ಆಡಳಿತ ನಿರ್ದೇಶಕ ಹಾಗು ‘ಮಾರ್ಚ್-22 ” ಸಿನೆಮಾ ನಿರ್ಮಾಪಕ ಹರೀಶ್ ಶೇರಿಗಾರ್, ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್’ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಗಲ್ಫ್ ಮೆಡಿಕಲ್ ಕಾಲೇಜಿನ ಮೊಯ್ದಿನ್ ತುಂಬೆ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಶಾರ್ಜಾ ಎಲೆಕ್ಟ್ರಿಸಿಟಿ & ವಾಟರ್ ಆಥೋರಿಟಿಯ ಡಾ.ರಾಶಿದ್ ಅಲ್ ಲೀಮ್, ಬಾಲಿವುಡ್ ನಟ ಹಾಗು youtube ಖ್ಯಾತಿಯ ವರುಣ್ ಪ್ರುತಿ, ಹಿಂದ್ ಫೌಂಡೇಶನ್’ನ ಡಾ.ಅಬ್ದುಲ್ ರೆಹ್ಮಾನ್ ವನೂ ಸೇರಿದಂತೆ ಹಲವು ಮಂದಿಗೆ ದುಬೈ ಝರೂನಿ ಫೌಂಡೇಶನ್’ನ ಸುಹೈಲ್ ಅಲ್ ಝರೂನಿ “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ನೀಡಿ ಗೌರವಿಸಿದರು.

HMC(ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ )ಯುನೈಟೆಡ್’ನ ಸ್ಥಾಪಕ ಅಧ್ಯಕ್ಷ ಶಕೀಲ್ ಹಸನ್ ಹೊನ್ನಾಳ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ HMC(ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ )ಯುನೈಟೆಡ್’ನ ಖಲೀಲ್ ಕೆರಾಡಿ ಹಾಜರಿದ್ದರು. ಬಾಲಿವುಡ್ ಕಾಮಿಡಿಯನ್ ನಾಗೇಶ್ ಕುಮಾರ್, ನಟಿ ಮಿಸ್ ಗುಲ್ಬಹಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರನ್ನು ರಂಜಿಸಿದರು.

RJ ಸಾಹಿಲ್ ಝಹೀರ್ ಹಾಗು RJ ಜೂಟ್ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ವಿವಿಧ ಡ್ಯಾನ್ಸ್ ತಂಡಗಳಿಂದ ಡ್ಯಾನ್ಸ್ ಸೇರಿದಂತೆ ಮನೋರಂಜನಾ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

Comments are closed.